Asianet Suvarna News Asianet Suvarna News

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಕುಸಿತ: ಡಿಸೆಂಬರ್ 2021ರಲ್ಲಿ 13 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡ ಜಿಯೋ!

2021 ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 1.28 ಕೋಟಿಗಳಷ್ಟು ಕಡಿಮೆಯಾಗಿದೆ. ಭಾರ್ತಿ ಏರ್‌ಟೆಲ್ ಗ್ರಾಹಕರನ್ನು ಸೇರಿಸಿದರೂ, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಚಂದಾದಾರರ ನಷ್ಟವನ್ನು ಅನುಭವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.

Reliance Jio lost over 12 9 million subscribers in December 2021 Airtel BSNL Gained TRAI report mnj
Author
Bengaluru, First Published Feb 18, 2022, 12:06 PM IST

Tech Desk: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ನ ಟೆಲಿಕಾಂ ಚಂದಾದಾರಿಕೆಯ ವರದಿಯು, ಡಿಸೆಂಬರ್ 2021 ರಲ್ಲಿ ಭಾರ್ತಿ ಏರ್‌ಟೆಲ್ ಮತ್ತು  ಬಿಎಸ್‌ಎನ್‌ಎಲ್ (BSNL) ಹೊಸ ಚಂದಾದಾರರನ್ನು ಗಳಿಸಿದ್ದು ರಿಲಯನ್ಸ್ ಜಿಯೋ 12.9 ಮಿಲಿಯನ್ ವೈರ್‌ಲೆಸ್ ಚಂದಾದಾರರ ಕಳೆದುಕೊಂಡಿದೆ ಎಂದು ತಿಳಿಸಿದೆ. ಆದಾಗ್ಯೂ, ಕಂಪನಿಯ ಮಾರುಕಟ್ಟೆ ಪಾಲು ಇನ್ನೂ 36 ಪ್ರತಿಶತದಷ್ಟು ಅತ್ಯಧಿಕವಾಗಿ ಉಳಿದಿದೆ. ನಂತರದ ಸ್ಥಾನದಲ್ಲಿ ಏರ್‌ಟೆಲ್ ಇದ್ದು ಅದರ ಪಾಲು 30.81 ಪ್ರತಿಶತದಷ್ಟಿದೆ, ಇದು 450,000 ಚಂದಾದಾರರನ್ನು ಗಳಿಸಿದೆ. 

1.6 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡ ನಂತರ ವೋಡಾಫೋನ್‌ ಐಡಿಯಾ (Vi) 23 ಪ್ರತಿಶತ ಪಾಲು ಹೊಂದಿದೆ. ಭಾರ್ತಿ ಏರ್‌ಟೆಲ್ 2021ರ ಡಿಸೆಂಬರ್‌ನಲ್ಲಿ ಸಕ್ರಿಯ ವೈರ್‌ಲೆಸ್ ಚಂದಾದಾರರ (Visitor Location Register) ಹೆಚ್ಚಿನ ಪ್ರಮಾಣವನ್ನು ಹೊಂದಿತ್ತು ಮತ್ತು BSNL ಮತ್ತು MTNL ನಂತಹ ಮಾರುಕಟ್ಟೆ ಪಾಲನ್ನು  ಕ್ರಮವಾಗಿ ಕಡಿಮೆ VLR ಚಂದಾದಾರರ ಶೇಕಡಾವಾರು ಪ್ರಮಾಣವನ್ನು ನೋಂದಾಯಿಸಿವೆ. 

ಇದನ್ನೂ ಓದಿ: Tariff Hike: ವೊಡಾಫೋನ್ ಬಳಿಕ 2022ರಲ್ಲಿ ಮತ್ತೊಂದು ಸುತ್ತಿನ ದರ ಹೆಚ್ಚಳ ಸುಳಿವು ನೀಡಿದ ಏರ್‌ಟೆಲ್!

ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್) ಗುರುವಾರ ನೀಡಿದ ಇತ್ತೀಚಿನ ಚಂದಾದಾರರ ಮಾಹಿತಿಯ ಪ್ರಕಾರ, ಹಿಂದಿನ ತಿಂಗಳಿಗೆ ಹೋಲಿಸಿದರೆ 2021 ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 1.28 ಕೋಟಿಗಳಷ್ಟು ಕಡಿಮೆಯಾಗಿದೆ. ಭಾರ್ತಿ ಏರ್‌ಟೆಲ್ ಗ್ರಾಹಕರನ್ನು ಸೇರಿಸಿದರೂ, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಚಂದಾದಾರರ ನಷ್ಟವನ್ನು ಅನುಭವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.

ವೈರ್‌ಲೆಸ್ ಚಂದಾದಾರ ಸಂಖ್ಯೆ ಕುಸಿತ:  ಡಿಸೆಂಬರ್ 2021 ರ TRAI ನ ಟೆಲಿಕಾಂ ಚಂದಾದಾರಿಕೆ ವರದಿಯು 1,000.63 ಮಿಲಿಯನ್ ವೈರ್‌ಲೆಸ್ ಚಂದಾದಾರರು ತಿಂಗಳಲ್ಲಿ ಗರಿಷ್ಠ VLR ದಿನಾಂಕದಂದು ಸಕ್ರಿಯರಾಗಿದ್ದಾರೆ ಎಂದು ತೋರಿಸಿದೆ. ಭಾರತದಲ್ಲಿ ವೈರ್‌ಲೆಸ್ ಚಂದಾದಾರರ ಸಂಖ್ಯೆಯು ನವೆಂಬರ್ 2021 ರ ಅಂತ್ಯದ ವೇಳೆಗೆ 1,167.50 ಮಿಲಿಯನ್‌ನಿಂದ ಡಿಸೆಂಬರ್ 2021 ರ ಅಂತ್ಯದ ವೇಳೆಗೆ 1,154.62 ಮಿಲಿಯನ್‌ಗೆ ಇಳಿದಿದೆ, ಇದು ಮಾಸಿಕ ಕುಸಿತ ದರ 1.10 ಶೇಕಡಾವನ್ನು ದಾಖಲಿಸಿದೆ. 

ಇದನ್ನೂ ಓದಿ: India Telecom 2022: ಭಾರತದ 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ: ಕೇಂದ್ರ!

ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆಗಳು 638.46 ಮಿಲಿಯನ್‌ನಿಂದ 633.34 ಮಿಲಿಯನ್‌ಗೆ ಕಡಿಮೆಯಾಗಿದೆ ಮತ್ತು ಒಂದು ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 529.04 ಮಿಲಿಯನ್‌ನಿಂದ 521.28 ಮಿಲಿಯನ್‌ಗೆ ಇಳಿಕೆಯಾಗಿದೆ. ನಗರ ಮತ್ತು ಗ್ರಾಮೀಣ ವೈರ್‌ಲೆಸ್ ಚಂದಾದಾರಿಕೆಯ ಮಾಸಿಕ ಕುಸಿತ ದರಗಳು ಕ್ರಮವಾಗಿ 0.80 ಶೇಕಡಾ ಮತ್ತು 1.47 ಶೇಕಡಾ.

ಮಾರುಕಟ್ಟೆಯ 36 ಪ್ರತಿಶತ ಜಿಯೋ ಪಾಲು: ಆಕ್ಸಸ್ ಸೇವೆ ಒದಗಿಸುವವರ ವಿಷಯದಲ್ಲಿ,  ಡಿಸೆಂಬರ್ 31, 2021ರಲ್ಲಿ ಖಾಸಗಿ ಆಕ್ಸಸ್ ಸೇವಾ ಪೂರೈಕೆದಾರರು ಶೇ 89.81 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದ್ದರೆ ಎರಡು ಸಾರ್ವಜನಿಕ ವಲಯದ ಟೆಲಿಕಾಂಗಳು ಗ (BSNL ಮತ್ತು MTNL) ಕೇವಲ 10.19 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದ್ದವು. ಜಿಯೋ ಮಾರುಕಟ್ಟೆಯ 36 ಪ್ರತಿಶತ ಪಾಲನ್ನು ವಶಪಡಿಸಿಕೊಂಡಿದ್ದು  ಅದರ ಸಕ್ರಿಯ ವೈರ್‌ಲೆಸ್ ಚಂದಾದಾರರ ಎರಡನೇ ಅತ್ಯುತ್ತಮ ಪ್ರಮಾಣವನ್ನು 87.64 ಶೇಕಡಾ ಹೊಂದಿದೆ.

 ಏರ್‌ಟೆಲ್ ವೈರ್‌ಲೆಸ್ ಚಂದಾದಾರರ ವಿಷಯದಲ್ಲಿ 30.81 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿರುವ ಎರಡನೇ ಅತಿದೊಡ್ಡ ಟೆಲಿಕಾಂ ದೈತ್ಯವಾಗಿದೆ, ಆದಾಗ್ಯೂ, ಇದು ತನ್ನ ಸಕ್ರಿಯ ವೈರ್‌ಲೆಸ್ ಚಂದಾದಾರರ ಅತಿದೊಡ್ಡ 98.01 ಶೇಕಡಾ ಅನುಪಾತವನ್ನು ನೋಂದಾಯಿಸಿದೆ. ಮೂರನೇ ಸ್ಥಾನವು Vi ಪಡೆದುಕೊಂಡಿದ್ದು, ಇದು ಒಟ್ಟು ಮಾರುಕಟ್ಟೆ ಷೇರಿನ 23 ಪ್ರತಿಶತವನ್ನು ವಶಪಡಿಸಿಕೊಂಡಿದೆ ಮತ್ತು ಅದರ ಸಕ್ರಿಯ ವೈರ್‌ಲೆಸ್ ಚಂದಾದಾರರ 86.42 ಶೇಕಡಾ ಅನುಪಾತವನ್ನು ನೋಂದಾಯಿಸಿದೆ. TRAI ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ BSNL 9.90 ಶೇಕಡಾ ಮಾರುಕಟ್ಟೆ ಪಾಲನ್ನು ಮತ್ತು MTNL ಶೇಕಡಾ 0.28 ಮಾರುಕಟ್ಟೆ ಪಾಲನ್ನು ಹೊಂದಿತ್ತು. 

ಇದನ್ನೂ ಓದಿ: Google- Bharti Airtel Deal: ಟೆಲಿಕಾಂ ಕಂಪನಿಯಲ್ಲಿ $1 ಬಿಲಿಯನ್‌ ಹೂಡಿಕೆ ಮಾಡಲಿರುವ ಟೆಕ್‌ ದೈತ್ಯ!

ದರ ಹೆಚ್ಚಳ ಕಾರಣ?: ರಿಲಯನ್ಸ್‌ ಜಿಯೋ ತನ್ನ ಒಟ್ಟು ಚಂದಾದಾರಿಕೆಗಳಿಂದ ನಿಷ್ಕ್ರಿಯ ಚಂದಾದಾರರನ್ನು ತೆಗೆದುಹಾಕಲು ಕೆಲಸ ಮಾಡುತ್ತಿರಬಹುದು. ನವೆಂಬರ್‌ನಲ್ಲಿ ಪ್ರಿಪೇಯ್ಡ್ ದರ ಹೆಚ್ಚಳವು ಕಡಿಮೆ ಆದಾಯದ ಬಳಕೆದಾರರನ್ನು ಬಿಎಸ್‌ಎನ್‌ಎಲ್‌ಗೆ ಹೋಗಲು ಪ್ರೇರೆಪಿರಬಹುದು ಎಂದು ಟೆಲಿಕಾಂಟಾಕ್  ವರದಿ ಹೇಳಿದೆ.

ಬೆಳವಣಿಗೆಯ ಶೇಕಡಾವಾರು ಪ್ರಮಾಣಕ್ಕೆ ಬಂದಾಗ, ಡಿಸೆಂಬರ್ 2021 ರಲ್ಲಿ ವೈರ್‌ಲೆಸ್ ಚಂದಾದಾರರಲ್ಲಿ ಜಿಯೋ 3.01 ಶೇಕಡಾ ಮಾಸಿಕ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ, ಏರ್‌ಟೆಲ್ 0.13 ಶೇಕಡಾ ಬೆಳವಣಿಗೆಯನ್ನು ಮತ್ತು ವೊಡಾಫೋನ್ ಐಡಿಯಾ ಶೇಕಡಾ 0.60 ರಷ್ಟು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

Follow Us:
Download App:
  • android
  • ios