WhatsApp ಬಳಕೆದಾರರಿಗೆ ಗುಡ್ ನ್ಯೂಸ್, ಸ್ಟೇಟಸ್ ವಿಡಿಯೋ ನೀತಿಯಲ್ಲಿ ಬದಲಾವಣೆ!
ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಫೀಚರ್ಸ್, ಬೇಡಿಕೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಇದೀಗ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸ್ಟೇಟಸ್ ವಿಡಿಯೋ ಪೋಸ್ಟ್ ನೀತಿಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿದೆ.
ನವದೆಹಲಿ(ಮೇ.17) ವ್ಯಾಟ್ಸಾಪ್ ಭಾರತದಲ್ಲಿ ಅತ್ಯಂತ ಪ್ರಮುಖ ಸಂವಹನವಾಗಿದೆ. ಕಚೇರಿ ಸಂದೇಶಗಳು, ಸಮುದಾಯದ ಸಭೆ, ಗ್ರಾಮದ ಮಾಹಿತಿ, ಕುಟುಂಬಸ್ಥರು, ಆಪ್ತರು, ಸ್ನೇಹಿತರ ಜೊತೆಗಿನ ಚಾಟಿಂಗ್, ವಿಡಿಯೋ ಕಾಲ್ ಸೇರಿದಂತೆ ಪ್ರಯೋಜನ ಹತ್ತು ಹಲವು. ಇದರ ಜೊತೆಗೆ ವ್ಯಾಟ್ಸಾಪ್ ಸ್ಟೇಟಸ್ ಕೂಡ ಅಷ್ಟೇ ಮುಖ್ಯವಾಗಿದೆ. ಸ್ಟೇಟಸ್ ಅಪ್‌ಡೇಟ್, ಸ್ಟೇಟಸ್ ನೋಡುವುದು ಎಲ್ಲರ ಹವ್ಯಾಸವಾಗಿಬಿಟ್ಟಿದೆ. ಇಷ್ಟು ದಿನ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ 30 ಸೆಕೆಂಡ್ ವಿಡಿಯೋಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕಳೆದ ಮಾರ್ಚ್‌ನಲ್ಲಿ ವ್ಯಾಟ್ಸ್ಆ್ಯಪ್ ವ್ಯಾಟ್ಸಾಪ್ ಸ್ಟೇಟಸ್‌ಗೆ ಪೋಸ್ಟ್ ಮಾಡುವ ವಿಡಿಯೋ ಮಿತಿಯನ್ನು 1 ನಿಮಿಷಕ್ಕೆ ಏರಿಕೆ ಮಾಡಿತ್ತು. ಇದೀಗ ಎಲ್ಲಾ ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದೆ.
ಸ್ಟೇಟಸ್ ಇದೀಗ ಜನರ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ,ಸ್ಟೇಟಸ್ ಅಪ್‌ಡೇಟ್ ಬಳಕೆದಾರರ ಆಸಕ್ತಿಯ ಕ್ಷೇತ್ರವಾಗಿದೆ. ಇದರ ಜೊತೆಗೆ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆ ನೀಡಲು ಇದೀಗ ವ್ಯಾಟ್ಸಾಪ್ ತನ್ನ ಸ್ಟೇಟಸ್ ವಿಡಿಯೋ ಮಿತಿಯನ್ನು 60 ಸೆಕೆಂಡ್‌ಗೆ ಹೆಚ್ಚಿಸಿದೆ. ಇದರಿಂದ ಬಳಕೆದಾರರು ಇದೀಗ ಗರಿಷ್ಠ 60 ಸೆಕೆಂಡ್(1 ನಿಮಿಷ) ವಿಡಿಯೋ ಪೋಸ್ಟ್ ಮಾಡಲು ಸಾಧ್ಯವಿದೆ.
ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಸ್ಟೇಟಸ್, ಕೇಸ್ ರದ್ದು ಮಾಡಲು ನಿರಾಕರಿಸಿದ ಕೋರ್ಟ್!
ಫೋನ್ ಸ್ಟೋರೇಜ್, ಅಥವಾ ವ್ಯಾಟ್ಸಾಪ್ ಮೂಲಕ ರೆಕಾರ್ಡ್ ಮಾಡುವ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಲು ಅವಕಾಶವಿದೆ. ಇದೀಗ ವಿಡಿಯೋ ಸ್ಟೇಟಸ್ ಲಿಮಿಟ್ ಡಬಲ್ ಮಾಡಲಾಗಿದೆ. ಇದೀಗ ನೇರವಾಗಿ 1 ನಿಮಿಷದ ವಿಡಿಯೋವನ್ನು ಆ್ಯಪ್ ಮೂಲಕವೇ ರೆಕಾರ್ಡ್ ಮಾಡಿ ಪೋಸ್ಟ್ ಮಾಡಬಹುದು. ಅಥವಾ ಫೋನ್ ಸ್ಟೋರೇಜ್ ವಿಡಿಯೋಗಳನ್ನು ಅಷ್ಟೇ ಸುಲಭವಾಗಿ ಸ್ಟೇಟಸ್ ಪೋಸ್ಟ್ ಮಾಡಬಹುದು.
ಸದ್ಯ ವಿಡಿಯೋ ಸ್ಟೋರಿ ಹೆಚ್ಚು ಪ್ರಚಲಿತದಲ್ಲಿದೆ. ಶಾರ್ಟ್ ವಿಡಿಯೋ, ರೀಲ್ಸ್ ಸೇರಿದಂತೆ ಹಲವು ಪ್ರಕಾರಗಳಲ್ಲಿ ವಿಡಿಯೋ ಸಂಚಲನ ಸೃಷ್ಟಿಸುತ್ತಿದೆ. ಇದರ ಜೊತೆಗೆ ಪ್ರತಿಸ್ಪರ್ಧಿಗಳು, ಇತರ ಪ್ಲಾಟ್‌ಫಾರ್ಮ್ ವಿಡಿಯೋಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇಷ್ಟೇ ಅಲ್ಲ ಈ ಮೂಲಕ ಬಳಕೆದಾರರನ್ನು ತನ್ನಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ವ್ಯಾಟ್ಸಾಪ್ ಸ್ಟೇಟಸ್ ವಿಡಿಯೋ ಮಿತಿ ಹೆಚಿಸಿ ಬಳಕೆದಾರರಿಗೆ ಬಂಪರ್ ಕೊಡುಗೆ ನೀಡಿದೆ.
ವ್ಯಾಟ್ಸ್ಆ್ಯಪ್ ಚಾಟ್ ಲಾಕ್ ಸೇರಿದಂತೆ ಈಗಾಗಲೇ ಹಲವು ಫೀಚರ್ಸ್ ಅಪ್‌ಡೇಟ್ ಮಾಡಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಫೀಚರ್ಸ್ ನೀಡುವ ಸೂಚನೆಯನ್ನು ವ್ಯಾಟ್ಸಾಪ್ ನೀಡಿದೆ.
ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್, ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!