India Telecom 2022: ಭಾರತದ 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ: ಕೇಂದ್ರ!

5G ತಂತ್ರಜ್ಞಾನವು ಈಗ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರವು ಬಹಿರಂಗಪಡಿಸಿರುವುದರಿಂದ ಭಾರತದಲ್ಲಿ ಈ ವರ್ಷದ ಅಂತ್ಯಕ್ಕೆ  5G ಬಿಡುಗಡೆಯಾಗುವ ನಿರೀಕ್ಷೆಯಿದೆ. 

5G network is now in its final stages of development said Union Minister Ashwini Vaishnaw mnj

Tech Desk:  2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ತಿಳಿಸಿದ್ದರು. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್‌ ಹೇಳಿದ್ದರು. 5G ನೆಟ್‌ವರ್ಕ್ ಈಗ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರವು ಬಹಿರಂಗಪಡಿಸಿರುವುದರಿಂದ ಭಾರತದಲ್ಲಿ ಭಾರತದಲ್ಲಿ ಈ ವರ್ಷದ ಅಂತ್ಯಕ್ಕೆ  5G ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಮಂಗಳವಾರ  ನಡೆದ “ಇಂಡಿಯಾ ಟೆಲಿಕಾಂ 2022”  (India Telecom 2022) ಬಿಸಿನೆಸ್ ಎಕ್ಸ್‌ಪೋವನ್ನು ಉದ್ದೇಶಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದರು. 6ಜಿ ಮಾನದಂಡಗಳ ಅಭಿವೃದ್ಧಿಯಲ್ಲಿ ದೇಶದ ಭಾಗವಹಿಸುವಿಕೆಗೆ ಸಚಿವರು ಒತ್ತು ನೀಡಿದರು. “ದೇಶವು ತನ್ನದೇ ಆದ ಸ್ಥಳೀಯ 4G ಕೋರ್ ಮತ್ತು ರೇಡಿಯೋ ನೆಟ್‌ವರ್ಕನ್ನು ಸಹ ಸ್ಥಾಪಿಸಿದೆ. 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮಹಂತದಲ್ಲಿದೆ. ದೇಶವು ಇಂದು 6G ಕೇಂದ್ರಗಳ ಅಭಿವೃದ್ಧಿಯಲ್ಲಿ, 6G ಯ ಚಿಂತನೆಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ" ಎಂದು ವೈಷ್ಣವ್ ಹೇಳಿದರು.

ಇದನ್ನೂ ಓದಿ: Reliance Jio 5G ಟೆಸ್ಟ್ ಮಾಹಿತಿ ಲೀಕ್: 4Gಗಿಂತ 8 ಪಟ್ಟು ವೇಗದ ಡೌನ್‌ಲೋಡ್ ಸ್ಪೀಡ್!‌

ಸಿಲಿಕಾನ್‌ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್‌ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿತ್ತು. ಈ ಬೆನ್ನಲ್ಲೇ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

5G ರೋಲ್‌ಔಟ್‌ಗಾಗಿ ಮಾತುಕತೆ:   "5G ಯ ರೋಲ್ ಔಟ್ ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಏಕೆಂದರೆ ಆಗಸ್ಟ್‌ನಲ್ಲಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯು ನಡೆಯಲಿದೆ ಮತ್ತು ನಂತರ ಸೇವೆಗಳನ್ನು ಹೊರತರಲಾಗುವುದು" ಎಂದು  ಸಚಿವರು ತಿಳಿಸಿದರು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಈಗಾಗಲೇ ದೂರಸಂಪರ್ಕ ಉದ್ಯಮದೊಂದಿಗೆ 5G ರೋಲ್‌ಔಟ್‌ಗಾಗಿ ಮಾತುಕತೆ ನಡೆಸುತ್ತಿದೆ ಮತ್ತು ಮಾರ್ಚ್‌ನೊಳಗೆ ವರದಿಯನ್ನು ನಿರೀಕ್ಷಿಸಬಹುದು ಎಂದು ಮೂಲಗಳು ತಿಳಿಸಿವೆ.

"ಮಾರ್ಚ್ ಅಂತ್ಯದ ವೇಳೆಗೆ, ಹರಾಜು ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲವನ್ನೂ ನಾವು ಸಿದ್ಧಗೊಳಿಸುತ್ತೇವೆ. ಹರಾಜು ಪ್ರಕ್ರಿಯೆಯು ಜುಲೈ-ಆಗಸ್ಟ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ" ಎಂದು ವೈಷ್ಣವ್‌ ಹೇಳಿದ್ದಾರೆ. 5G ಬೆಲೆಗಳ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲವಾದರೂ, ಇತ್ತೀಚಿನ ಟೆಲಿಕಾಂ ಸೇವೆಗಳ ದರ ಹೆಚ್ಚಳ ಮತ್ತು ನಿರ್ವಾಹಕರು ತಿಂಗಳಿಗೆ 300 ರೂ.ಗಳ ARPU ಅನ್ನು ಗುರಿಯನ್ನು ಗಮನಿಸಿದರೆ 5G ಸೇವೆಗಳ  ಬೆಲೆಗಳು 4G ಗಿಂತ ಕಡಿಮೆಯಿಲ್ಲದಿರಬಹುದು ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವಿಶ್ಲೇಷಕರು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಅಮಡಿದೆ.

ಇದನ್ನೂ ಓದಿ: 6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!

"ಹೆಚ್ಚು ಚಂದಾದಾರರನ್ನು ಆಕರ್ಷಿಸಲು ಮತ್ತು ಅಪ್‌ಗ್ರೇಡ್‌ಗಳನ್ನು ಉತ್ತೇಜಿಸಲು ಅವು 4G ಬೆಲೆಗಳನ್ನು ಹೋಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ನೆಟ್‌ವರ್ಕ್ ವ್ಯಾಪಕ ವ್ಯಾಪ್ತಿಯನ್ನು ಹೊಂದಿದ ನಂತರ ಮತ್ತು ಡೇಟಾ ವೇಗವನ್ನು ಸ್ಥಾಪಿಸಿದ ನಂತರ ಆಪರೇಟರ್‌ಗಳು ಅಂತಿಮವಾಗಿ ಬೆಲೆ ಹೆಚ್ಚಿಸುವ ಸಾಧ್ಯತೆ " ಎಂದು ಚಾರು ಪಲಿವಾಲ್ Charu Paliwal) ಹೇಳಿದರು.

ಮೊದಲಿಗೆ ಎಲ್ಲೆಲ್ಲಿ ಆರಂಭ?: ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್‌, ಲಖನೌ, ಚೆನ್ನೈ, ಹೈದ್ರಾಬಾದ್‌, ಪುಣೆ, ಗಾಂಧೀ ನಗರ

5ಜಿ ಲಾಭ ಏನು?: 4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌, ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ, ಎಚ್‌ಡಿ (HD) ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್‌, ಗೇಮಿಂಗ್‌, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ

Latest Videos
Follow Us:
Download App:
  • android
  • ios