Google- Bharti Airtel Deal: ಟೆಲಿಕಾಂ ಕಂಪನಿಯಲ್ಲಿ $1 ಬಿಲಿಯನ್‌ ಹೂಡಿಕೆ ಮಾಡಲಿರುವ ಟೆಕ್‌ ದೈತ್ಯ!

ಈ ಹೂಡಿಕೆಯು ಏರ್‌ಟೆಲ್‌ನಲ್ಲಿ ಪ್ರತಿ ಷೇರಿಗೆ 734 ರೂಪಾಯಿಗಳ (USD 9.77) ಬೆಲೆಯಲ್ಲಿ USD 700 ಮಿಲಿಯನ್ ಇಕ್ವಿಟಿ ಹೂಡಿಕೆಯನ್ನು ಒಳಗೊಂಡಿದೆ ಮತ್ತು ಏರ್‌ಟೆಲ್‌ನ ಕೊಡುಗೆಗಳನ್ನು ಸ್ಕೇಲಿಂಗ್ ಮಾಡುವ ಹೂಡಿಕೆ ಸೇರಿದಂತೆ ವಾಣಿಜ್ಯ ಒಪ್ಪಂದಗಳನ್ನು ಜಾರಿಗೆ ತರಲು USD 300 ಮಿಲಿಯನ್ ವರೆಗೆ ಹೂಡಿಕೆ ಮಾಡಲಾಗುವುದು ಎಂದು ಕಂಪನಿಗಳು ತಿಳಿಸಿವೆ.

Alphabet Google to invest up to 1 billion Dollars in Bharti Airtel Telecom Industry mnj

Tech Desk: ಭಾರತೀಯ ಟೆಲಿಕಾಂ ಆಪರೇಟರ್‌ ಡಿಜಿಟಲ್ ಸೇವೆಗಳನ್ನು ವಿಸ್ತರಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಆಲ್ಫಾಬೆಟ್ ಇಂಕ್‌ನ ಗೂಗಲ್, ಭಾರ್ತಿ ಏರ್‌ಟೆಲ್‌ನಲ್ಲಿ USD 1 ಶತಕೋಟಿವರೆಗೆ ಹೂಡಿಕೆ ಮಾಡಲಿದೆ ಎಂದು ಕಂಪನಿಗಳು ಶುಕ್ರವಾರ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿವೆ. ಹೂಡಿಕೆಯು ಏರ್‌ಟೆಲ್‌ನಲ್ಲಿ ಪ್ರತಿ ಷೇರಿಗೆ 734 ರೂಪಾಯಿಗಳ (USD 9.77) ಬೆಲೆಯಲ್ಲಿ USD 700 ಮಿಲಿಯನ್ ಇಕ್ವಿಟಿ ಹೂಡಿಕೆಯನ್ನು ಒಳಗೊಂಡಿದೆ ಮತ್ತು ಏರ್‌ಟೆಲ್‌ನ ಕೊಡುಗೆಗಳನ್ನು ಸ್ಕೇಲಿಂಗ್ ಮಾಡುವ ಹೂಡಿಕೆ ಸೇರಿದಂತೆ ವಾಣಿಜ್ಯ ಒಪ್ಪಂದಗಳನ್ನು ಜಾರಿಗೆ ತರಲು USD 300 ಮಿಲಿಯನ್ ವರೆಗೆ ಹೂಡಿಕೆ ಮಾಡಲಾಗುವುದು ಎಂದು ಕಂಪನಿಗಳು ತಿಳಿಸಿವೆ.

"ಏರ್‌ಟೆಲ್ ಮತ್ತು ಗೂಗಲ್ ನವೀನ ಉತ್ಪನ್ನಗಳ ಮೂಲಕ ಭಾರತದ ಡಿಜಿಟಲ್ ಲಾಭಾಂಶವನ್ನು ಹೆಚ್ಚಿಸುವ ದೃಷ್ಟಿಯನ್ನು ಹೊಂದಿವೆ. ನಮ್ಮ ಭವಿಷ್ಯದ ನೆಟ್‌ವರ್ಕ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಕೊನೆಯ ಮೈಲಿ ವಿತರಣೆ ಮತ್ತು ಪಾವತಿ ವ್ಯವಸ್ಥೆಯೊಂದಿಗೆ, ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಆಳ ಮತ್ತು ಅಗಲವನ್ನು ಹೆಚ್ಚಿಸಲು ನಾವು ಗೂಗಲ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ" ಎಂದು ಭಾರ್ತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

ಹೇಳಿಕೆಯ ಪ್ರಕಾರ, ಮೊದಲ ವಾಣಿಜ್ಯ ಒಪ್ಪಂದದ ಭಾಗವಾಗಿ, ಏರ್‌ಟೆಲ್ ಮತ್ತು ಗೂಗಲ್ ಗ್ರಾಹಕರಿಗೆ ಏರ್‌ಟೆಲ್‌ನ ವ್ಯಾಪಕ ಕೊಡುಗೆಗಳನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲಿವೆ. ಇದು ಹೊಸ ಕೈಗೆಟುಕುವ ಕಾರ್ಯಕ್ರಮಗಳ ಮೂಲಕ ಆಂಡ್ರಾಯ್ಡ್-ಸಕ್ರಿಯಗೊಳಿಸಿದ ಸಾಧನಗಳ ಶ್ರೇಣಿಯನ್ನು ಒಳಗೊಂಡಿದೆ. ವಿವಿಧ ಸಾಧನ ತಯಾರಕರ ಸಹಭಾಗಿತ್ವದಲ್ಲಿ ಬೆಲೆಯ ಶ್ರೇಣಿಯಾದ್ಯಂತ ಸ್ಮಾರ್ಟ್‌ಫೋನ್ ಹೊಂದುವ ಅಡೆತಡೆಗಳನ್ನು ತಗ್ಗಿಸಲು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಒಟ್ಟಿಗೆ ಕೆಲಸ ಮಾಡುವುದಾಗಿ ಕಂಪನಿಗಳು  ಹೇಳಿವೆ.

ರಿಲಯನ್ಸ್ ಜಿಯೋದಲ್ಲಿ ಹೂಡಿಕೆ:  ಏರ್‌ಟೆಲ್‌ನ ಮುಖ್ಯ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋದಲ್ಲಿ 2020 ರಲ್ಲಿ $ 4.5 ಬಿಲಿಯನ್ ಭಾರತದಲ್ಲಿ ಗೂಗಲ್‌ನ ಇವರೆಗಿನ ಅತಿದೊಡ್ಡ ಹೂಡಿಕೆಯಾಗಿದೆ. ಇದಕ್ಕಾಗಿ ಗೂಗಲ್ ಜಿಯೋದ 7.73 ಶೇಕಡಾ ಪಾಲನ್ನು ತೆಗೆದುಕೊಂಡಿತ್ತು. ಒಪ್ಪಂದವು ಕಳೆದ ವರ್ಷ ಬಿಡುಗಡೆಯಾದ ಪ್ರವೇಶ ಮಟ್ಟದ 4G ಸ್ಮಾರ್ಟ್‌ಫೋನ್‌ನ ನಿರ್ಮಾಣವನ್ನು ಒಳಗೊಂಡಿತ್ತು. ಈಕ್ವಿಟಿ ಡೀಲ್‌ಗಳು ಮತ್ತು ಟೈ-ಅಪ್‌ಗಳ ಮೂಲಕ ಐದರಿಂದ ಏಳು ವರ್ಷಗಳಲ್ಲಿ ತನ್ನ ಡಿಜಿಟಲೀಕರಣ ನಿಧಿಯ ಮೂಲಕ ಭಾರತದಲ್ಲಿ USD 10 ಶತಕೋಟಿಯನ್ನು ಹೂಡಿಕೆ ಮಾಡುವುದಾಗಿ ಎರಡು ವರ್ಷಗಳ ಹಿಂದೆ ಗೂಗಲ್ ಯೋಜನೆಗಳನ್ನು ಘೋಷಿಸಿತ್ತು.

ಇದನ್ನೂ ಓದಿ: Ola Global Center ಎಲೆಕ್ಟ್ರಿಕ್ ವಾಹನದಲ್ಲಿ ಓಲಾ ಕ್ರಾಂತಿ, UKಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರಕ್ಕೆ $100 ಮಿಲಿಯನ್ ಹೂಡಿಕೆ!

ಆದರೆ  ಕಂಪನಿಯು ಜಿಯೋ ಮಾದರಿಯಲ್ಲಿ ತನ್ನದೇ ಆದ ಸ್ಮಾರ್ಟ್‌ಫೋನನ್ನು ನಿರ್ಮಿಸಲು ಯೋಜಿಸುವುದಿಲ್ಲ, ಆದರೆ ಮಾರುಕಟ್ಟೆಗೆ ಕೈಗೆಟುಕುವ ಕೊಡುಗೆಗಳನ್ನು ತರಲು ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಏರ್‌ಟೆಲ್‌ನ ಸಿಇಒ ಗೋಪಾಲ್ ವಿಟ್ಟಲ್ ಸ್ಪಷ್ಟಪಡಿಸಿದ್ದಾರೆ. “ನಮ್ಮ ತಂತ್ರ ಸ್ಮಾರ್ಟ್‌ಫೋನ್ ಅಳವಡಿಕೆಗೆ ಚಾಲನೆ ನೀಡುವುದು. ಆದರೆ ನಾವು ಸಬ್ಸಿಡಿ ಕಾರ್ಯತಂತ್ರಗಳಲ್ಲಿ ಉತ್ಸುಕರಾಗಿಲ್ಲ. ನಾವು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಬಯಸುತ್ತೇವೆ. ವೆಚ್ಚವನ್ನು ಕಡಿಮೆ ಮಾಡಲು ಪ್ರೋತ್ಸಾಹಕಗಳೊಂದಿಗೆ ಸಾಧನಗಳ ಬಿಡುಗಡೆಗೆ ನಾವು ಸಾಫ್ಟ್‌ವೇರನ್ನು ಅಭಿವೃದ್ಧಿಪಡಿಸಿದ್ದೇವೆ, ” ಎಂದು ವಿಟ್ಟಲ್ ತಿಳಿಸಿದ್ದಾರೆ.

ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌:  “ಏರ್‌ಟೆಲ್‌ನಲ್ಲಿನ ನಮ್ಮ ವಾಣಿಜ್ಯ ಮತ್ತು ಇಕ್ವಿಟಿ ಹೂಡಿಕೆಯು ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯತೆ ಹೆಚ್ಚಿಸಲು, ಹೊಸ ವ್ಯಾಪಾರ ಮಾದರಿಗಳನ್ನು ಬೆಂಬಲಿಸಲು ಹಾಗೂ ಸಂಪರ್ಕವನ್ನು ಹೆಚ್ಚಿಸಲು ಮತ್ತು ಕಂಪನಿಗಳಿಗೆ ತಮ್ಮ ಡಿಜಿಟಲ್‌ ಪ್ರಯಾಣದಲ್ಲಿ ಸಹಾಯ ಮಾಡಲು ನಮ್ಮ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಪ್ರಯತ್ನಗಳ ಮುಂದುವರಿಕೆಯಾಗಿದೆ. " ಎಂದು ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಗೂಗಲ್‌ಗೆ, ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸ್ಪರ್ಧಿಗಳಿಗೆ ಪೈಪೋಟಿ ನೀಡುವುದರ ಜೊತೆಗೆ, ದೇಶದಲ್ಲಿ ಆಂಡ್ರಾಯ್ಡ್ ಅಳವಡಿಕೆಯನ್ನು ವೇಗಗೊಳಿಸಲು, ವಿಶೇಷವಾಗಿ ಫೀಚರ್ ಫೋನ್‌ಗಳ ಮೂಲಕ  ಇನ್ನೂ ಪ್ರಾಬಲ್ಯ ಹೊಂದಿರುವ  ಕಡಿಮೆ ಶ್ರೇಣಿಯ ಮಾರುಕಟ್ಟೆಯಲ್ಲಿ ಫ್ರಂಟ್-ಎಂಡ್ ಪರಿಹಾರಗಳನ್ನು ಒದಗಿಸಲು ಈ ಒಪ್ಪಂದವು ಅವಕಾಶಗಳನ್ನು ಒದಗಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios