RCB ಹುಡುಗಿಯರನ್ನು ಗೇಲಿ ಮಾಡಿದ ಸಿಎಸ್‌ಕೆ ಫ್ಯಾನ್ಸ್; ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಆಕ್ರೋಶ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಹೋಗಿದ್ದ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಯುವತಿಯರನ್ಗೆನು ರೇಗಿಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಂಡರನ್ನು ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರು (ಮೇ 19): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ಏ.18) ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಮುಕ್ತಾಯದ ವೇಳೆ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಬೆಂಬಲಿಸಿ ಕ್ರಿಕೆಟ್ ಪಂದ್ಯವನ್ನು ನೋಡಲು ಬಂದಿದ್ದ ಹುಡುಗಿಯರನ್ನು ಗೇಲಿ ಮಾಡಿದ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇಂತಹ ಪುಂಡರನ್ನು ಬಂಧಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪರಿ ಎನ್ನುವವರು ತಮ್ಮ @BluntIndianGal ಖಾತೆಯಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ. 'ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಹುಡುಗಿಯರನ್ನು ಅಸಹ್ಯಕರವಾಗಿ ನಿಂದಿಸುತ್ತಿರುವ ರೀತಿಯನ್ನು ನೋಡಿ. ಅದನ್ನು ನಾನೂ ಎದುರಿಸಿದೆ. ಕಳೆದ ವರ್ಷ ಕೆಟ್ಟದಾಗಿರಬಹುದು ಮತ್ತು ಅದರ ಬಗ್ಗೆ ಎಂದಿಗೂ ಅಳಲಿಲ್ಲ' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಹಲವರು ಇಂತಹ ಅನೇಕ ಘಟನೆಗಳು ನಡೆದಿವೆ. ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕೆಂದರೆ ಪೊಲೀಸರಿಗೆ ದೂರು ಕೊಡಬೇಕು. ಆಗ ಪೊಲೀಸರೇ ಬುದ್ಧಿ ಕಲಿಸುತ್ತಾರೆ ಎಂದು ಪರಿ ಅವರಿಗೆ ಸಲಹೆ ನೀಡಿದ್ದಾರೆ.
RCB ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುವುದಾಗಿ ಹೇಳಿದ್ದ ಯುವಕನ್ನು ಬಂಧಿಸಿದ ಪೊಲೀಸರು
ಪ್ರಸಕ್ತ 2024ರ ಐಪಿಎಲ್ ಪಂದ್ಯಾವಳಿಯಲ್ಲಿ ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಅತ್ಯಂತ ಹೆಚ್ಚು ಮಹತ್ವವನ್ನು ಪಡೆದುಕೊಂಡಿತ್ತು. ಪ್ರತಿಬಾರಿ ಸಿಎಸ್‌ಕೆ ಮತ್ತು ಆರ್‌ಸಿಬಿ ಪಂದ್ಯಗಳು ನಡೆಯುವಾಗ ಮತ್ತು ಅದರ ಮುಂಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಪೋಸ್ಟರ್‌ಗಳನ್ನು ಹಾಗೂ ಕಾಮೆಂಟ್‌ಗಳನ್ನು ಮಾಡುತ್ತಾ ಗೇಲಿ ಮಾಡುವಂತಹ ಘಟನೆಗಳು ನಡೆಯುತ್ತವೆ. ಆದರೆ, ಇದು ಎಂದಿಗೂ ವೈಯಕ್ತಿಕ ದ್ವೇಷಕ್ಕೆ ತಿರುಗಂತೆ ನೋಡಿಕೊಳ್ಳಲಾಗುತ್ತದೆ. ಇನ್ನು ಪಂದ್ಯ ನಡೆಯುವ ವೇಳೆ ನೇರವಾಗಿ ಪಂದ್ಯ ನೋಡಲು ಹೋದವರಿಗೂ ಗೆಲುವಿನ ತಂಡವನ್ನು ಸಪೋರ್ಟ್ ಮಾಡುವವರಿಂದ ಸೋತ ತಂಡವನ್ನು ಬೆಂಬಲಿಸುವವರಿಗೆ ಇರಿಸು ಮುರಿಸು ಕೂಡ ಉಂಟಾಗುವ ಘಟನೆಗಳು ನಡೆದಿರುತ್ತವೆ. ಆದರೆ, ನಿನ್ನೆ ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಮುಗಿದು ರಾತ್ರಿ ಮನೆಗೆ ಹೋಗುವಾಗ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಹುಡುಗಿಯರನ್ನು ಗೇಲಿ ಮಾಡಿದ್ದಾರೆ.
ಯೋ ಬರ್ಕೋ..ಇವತ್ತು ಗೆಲ್ಲೋದು ನಮ್ RCB ಹುಡುಗರೇ, ಭವಿಷ್ಯ ನುಡಿದ ಶಿವ ರಾಜ್‌ಕುಮಾರ್!
ಯುವತಿ ಪರಿ ಅವರು ಪೋಸ್ಟ್ ಮಾಡಿಕೊಂಡಿರುವ ವಿಡಿಯೋದಲ್ಲಿ ಸಿಎಸ್‌ಕೆ ಅಭಿಮಾನಿಗಳಾದ ಸುಮಾರು ಐದಾರು ಯುವಕರ ಗುಂಪೊಂದು, ಆರ್‌ಸಿಬಿ ಬೆಂಬಲಿಸಿ ಪಂದ್ಯ ನೋಡಲು ಬಂದವರಿಗೆ ಈ ಸಲ ಕಪ್ ನಮ್ದೇ ಎಂದು ಕೈಗಳನ್ನು ಅಲ್ಲಾಡಿಸಿಕೊಂಡು ಹುಡುಗಿಯರ ಗುಂಪಿನ ಹಿಂದೆ ಜೋರಾಗಿ ಕೂಗುತ್ತಾ ನಗಾಡುತ್ತಾ ಹೋಗಿದ್ದಾರೆ. ಇದರಿಂದ ಆರ್‌ಸಿಬಿ ಅಭಿಮಾನಿಗಳಾದ ಯುವತಿಯರ ಗುಂಪು ಪುಂಡರ ಗುಂಪಿನಿಂದ ತಪ್ಪಿಸಿಕೊಳ್ಳಲು ತುಸು ತುರ್ತಾಗಿ ಹೆಜ್ಜೆಯನ್ನು ಹಾಕಿಕೊಂಡು ಮುಂದೆ ಹೋಗಿದ್ದಾರೆ. ಈ ಘಟನೆಯ ಬಗ್ಗೆ ಒಬ್ಬರು ವಿಡಿಯೋ ಮಾಡಿದ್ದಾರೆ. ಜೊತೆಗೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡ ನಂತರ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಪುಂಡರ ವಿರುದ್ಧ ಕಂಪ್ಲೇಂಟ್ ಕೊಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಪೊಲೀಸರೇ ಇವರನ್ನು ಗುರುತಿಸಿ ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.