ಚಂದ್ರಯಾನ-2 ಯೋಜನೆ ಹಿನ್ನಡೆ ಹಿನ್ನೆಲೆ|  ಲ್ಯಾಂಡರ್ ಸಂಪರ್ಕ ಕಡಿತದ ಕುರಿತು ಇಸ್ರೋ ಅಧ್ಯಕ್ಷ ಪ್ರತಿಕ್ರಿಯೆ| ‘14 ದಿನಗಳ ಕಾಲ ಲ್ಯಾಂಡರ್’ನೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ’| ಪ್ರಧಾನಿ ಮೋದಿ ನಮ್ಮೆಲ್ಲರ ಸ್ಫೂರ್ತಿಯ ಮೂಲ ಎಂದ ಕೆ. ಸಿವನ್|

ನವದೆಹಲಿ(ಸೆ.07):ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಕಡಿತದ ಕುರಿತು ಇಸ್ರೋ ಅಧ್ಯಕ್ಷ ಕೆ.ಸಿವನ್ ಪ್ರತಿಕ್ರಿಯಿಸಿದ್ದು, ಇನ್ನೂ 14 ದಿನಗಳ ಕಾಲ ಲ್ಯಾಂಡರ್’ನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Scroll to load tweet…

ಯೋಜನೆಯ ಕೊನೆಯ ಹಂತವನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ, ಆ ಹಂತದಲ್ಲಿ ಲ್ಯಾಂಡರ್ ಜೊತೆ ಸಂಪರ್ಕ ಕಡಿದು ಹೋಯಿತು. ನಂತರ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸಿವನ್ ಹೇಳಿದ್ದಾರೆ. 

Scroll to load tweet…

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬೆಂಬಲದ ಕುರಿತು ಮಾತನಾಡಿರುವ ಸಿವನ್, ಅವರು ನಮ್ಮೆಲ್ಲರ ಸ್ಫೂರ್ತಿಯ ಮೂಲ ಎಂದು ಶ್ಲಾಘಿಸಿದ್ದಾರೆ .

Scroll to load tweet…

ಪ್ರಧಾನಿ ನಮ್ಮೆಲ್ಲರ ಸ್ಪೂರ್ತಿ ಹಾಗೂ ಬೆಂಬಲದ ಮೂಲ. ವಿಜ್ಞಾನವನ್ನು ಫಲಿತಾಂಶಗಳಿಗಾಗಿ ಅಷ್ಟೇ ನೋಡಬಾರದು, ನಿರಂತರ ಪ್ರಯೋಗ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಿಶೇಷ ಅಂಶವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದನ್ನು ತಾವು ಗಮನಿಸಿದ್ದಾಗಿ ಸಿವನ್ ನುಡಿದಿದ್ದಾರೆ.