ಬೆಂಗಳೂರು[ಆ.07]: ಭಾರತದ ಚೊಚ್ಚಲ ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಬೆಂಗಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಶುಕ್ರವಾರ ತಿಳಿಸಿದೆ.

ಅಭ್ಯರ್ಥಿಗಳಿಗೆ ವ್ಯಾಪಕ ದೈಹಿಕ ವ್ಯಾಯಾಮ ಪರೀಕ್ಷೆ, ಲ್ಯಾಪ್‌ ತಪಾಸಣೆ, ವಿಕಿರಣ ಶಾಸ್ತ್ರದ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅವರ ಮಾನಸಿಕ ಸ್ಥಿತಿ ಸೇರಿದಂತೆ ವಿವಿಧ ಸಂಗತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಐಎಎಫ್‌ ತಿಳಿಸಿದೆ.

Video: ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!

2022ರ ವೇಳೆಗೆ ಇಸ್ರೋ ಗಗನಯಾನ ನೌಕೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಹೊಂದಿದೆ. ಮೂವರು ಗಗನ ಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು ಕಳೆಯಲಿದ್ದಾರೆ.

2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 10 ಸಾವಿರ ಕೋಟಿ ರು. ವೆಚ್ಚದ ಗಗನಯಾನ ಯೋಜನೆಯನ್ನು ಮೋದಿ ಅವರು ಘೋಷಿಸಿದ್ದರು. ವಿವಿಧ ಪರೀಕ್ಷೆ ಪೂರ್ಣಗೊಂಡ ಬಳಿಕ 2019ರ ನವೆಂಬರ್‌ನಲ್ಲಿ ರಷ್ಯಾಗೆ ನಾಲ್ವರು ಭಾರತೀಯ ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಅಲ್ಲಿ 15 ತಿಂಗಳ ತರಬೇತಿ ಪಡೆದು ಮರಳಲಿರುವ ಇವರಿಗೆ ಆರರಿಂದ 8 ತಿಂಗಳು ಭಾರತದಲ್ಲೇ ತರಬೇತಿ ಮುಂದುವರಿಸಲಾಗುತ್ತದೆ.

ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!

ಭಾರತದ ಗಗನಯಾತ್ರೆ ಸಾಕಾರಗೊಂಡರೆ ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!