ಹವಾಮಾನ ವೈಪರಿತ್ಯಕ್ಕೆ ಭೂಮಿ ತಿರುಗುವ ವೇಗ ಕಡಿತ, ದಿನದ ಸಮಯ ಹೆಚ್ಚಳ, ಕಾದಿದೆಯಾ ಗಂಡಾತರ?, ಗ್ರಹದ ತಿರುಗುವಿಕೆ ವೇಗ ಬದಲಾದರೆ ಅಪಾಯ ತಪ್ಪಿದ್ದಲ್ಲ, ಇದರಿಂದ ಆಗುವ ಪರಿಣಾಮವೇನು? 24 ಗಂಟೆಯಲ್ಲಿ ಒಂದು ದಿನ ಮುಗಿಯಲ್ಲ
ನವದೆಹಲಿ (ಮಾ.15) ಹವಾಮಾನ ವೈಪರಿತ್ಯ ಭೂಮಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮನುಷ್ಯನ ಪ್ರಕ್ರಿಯೆ, ಪರಿಸರ ನಾಶ, ಅಭಿವೃದ್ಧಿ, ಆದಾಯ ಹೆಸರಿನಲ್ಲಿ ನೈಸರ್ಗಿಕ ಸಂಪತ್ತುಗಳ ನಾಶದಿಂದ ಹವಾಮಾನದಲ್ಲಿ ಭಾರಿ ಬದಲಾವಣೆ ಆಗಿದೆ. ಇದರ ನೇರ ಪರಿಣಾಮವನ್ನು ಮನುಷ್ಯ ಅನುಭವಿಸುತ್ತಿದ್ದಾರೆ. ಇದೀಗ ಇದೇ ಪ್ರಕ್ರಿಯೆ ಭೂಮಿಯ ತಿರುಗುವಿಕೆ ಮೇಲೂ ಪರಿಣಾಮ ಬೀರಿದೆ. ಇದರಿಂದ ದಿನಗಳ ಅವಧಿ ಹೆಚ್ಚಳವಾಗುತ್ತಿದೆ. ಇಷ್ಟೇ ಅಲ್ಲ ಪರಿಣಾಮ ಘನಘೋರವಾಗುವ ಸಾಧ್ಯತೆ ಇದೆ.
24 ಗಂಟೆಯಲ್ಲಿ ಒಂದು ದಿನ ಮುಗಿಯಲ್ಲ
ಹವಾಮಾನ ಬದಲಾವಣೆಯಿಂದ ಉರಿ ಬಿಸಿಲು, ಅತೀಯಾದ ಮಳೆ, ಪ್ರವಾಹ, ಮಂಜುಗಡ್ಡೆ ಕರುಗುವಿಕೆ, ಸಮುದ್ರ ಮಟ್ಟ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಈಗಾಗಲೇ ತಲೆದೋರಿದೆ. ಫಿಸಿಕ್ಸ್ ಆರ್ಗ್ ಸಂಶೋಧನೆ ಪ್ರಕರಾ ಇದೀಗ ಈ ಬದಲಾವಣೆ ಭೂಮಿಯ ಅಕ್ಷದ ಮೇಲಿನ ತಿರುಗವಿಕೆಯನ್ನೇ ನಿಧಾನ ಮಾಡಿದೆ. ಇದರಿಂದ 21ನೇ ಶತಮಾನದ ಅಂತ್ಯದ ವೇಳ ಭೂಮಿ ತಿರುಗುವಿಕೆ ವೇಗ ಮತ್ತಷ್ಟು ನಿಧಾನಗೊಳ್ಳಲಿದೆ.ಸದ್ಯ ದಿನದ ಹೆಚ್ಚಳ ಮಿಲಿ ಸೆಕೆಂಡ್‌ಗಲ್ಲಿ ಆಗಿರುವುದು ಯಾರ ಅನುಭವಕ್ಕೂ ಬಂದಿರುವುದಿಲ್ಲ. ಆದರೆ 21ನೇ ಶತಮಾನದ ಅಂತ್ಯದ ವೇಳೆ 24 ಗಂಟೆಯಲ್ಲಿ ಒಂದು ದಿನ ಮುಗಿಯುವುದಿಲ್ಲ.
ಭೂಮಿ ತಿರುಗುವಿಕೆಯ ವೇಗದಲ್ಲಿ ಚಂದ್ರನ ಗುರುತ್ವಾಕರ್ಷಣೆ ಕೊಡುಗೆಯೂ ಇದೆ. ಚಂದ್ರನ ಗುರುತ್ವಾಕರ್ಷಕಣೆ ಬಲದಿಂದ ಭೂಮಿ ತಿರುಗುವಿಕೆಯಲ್ಲಿ ಮಿಲಿ ಸೆಕೆಂಡ್‌ಗಳಷ್ಟು ವ್ಯತ್ಯಾಸವಾಗುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ.ಆದರೆ ಇದೀಗ ಮಾನವ ಸೃಷ್ಟಿಸಿದ ಬದಲಾವಣೆಯಿಂದ ಭೂಮಿ ತಿರುಗುವಿಕೆ ವೇಗ ನಿಧಾನಗೊಂಡಿದೆ. 1900 ರಿಂದ ಇಲ್ಲೀವರೆಗೆ ದಿನದ ಅವಧಿಯಲ್ಲಿ 0.2 ರಿಂದ 1.0 ಮಿಲಿಸೆಂಕಡ್‌ಗಳಷ್ಟು ಹೆಚ್ಚಾಗಿದೆ. 21ನೇ ಶತಮಾನದ ಅಂತ್ಯದ ವೇಳೆ ಈ ಅವಧಿ ಹೆಚ್ಚಳ 2.4 ಮಿಲಿಸೆಕೆಂಡ್‌ನಷ್ಟಾಗಲಿದೆ ಎಂದಿದ್ದಾರೆ.
ಭೂಮಿಯ ಆಕಾರದಲ್ಲಿ ಬದಲಾವಣೆ
ಗ್ಲೊಬಲ್ ವಾರ್ಮಿಂಗ್ ಪರಿಣಾಮ ಮಂಜುಗಡ್ಡೆಗಳು ಕರಗುತ್ತಿದೆ. ಭಾರಿ ವೇಗದಲ್ಲಿ ಮಂಜುಗಡ್ಡೆ ಕರಿಗುತ್ತಿದೆ. ಪ್ರಮುಖವಾಗಿ ಗ್ರೀನ್‌ಲ್ಯಾಂಡ್, ಅಂಟಾರ್ಟಿಕಾದಲ್ಲಿನ ಹಿಮಗಳು ಕರಗುತ್ತಿದೆ. ಈ ನೀರು ಭೂಮಿ ಈಕ್ವೆಡರ್(Equator) ವೃತ್ತದತ್ತ ಹರಿಯುತ್ತಿದೆ. ಇದರಿಂದ ಸಮಸ್ಯೆ ಗಂಭೀರವಾಗುತ್ತಿದೆ. ಈ ರೀತಿ ಮಂಜುಗಡ್ಡೆ ಕರಗಿ ಸಮಭಾಜಕ ವೃತ್ತದತ್ತ ಹರಿಯುತ್ತಿರುವ ಕಾರಣ ಭೂಮಿ ಮಧ್ಯಭಾಗ ದಪ್ಪಗಾಗುತ್ತಿದೆ. ಇದರಿಂದ ಭೂಮಿಯ ತಿರುಗುವಿಕೆ ನಿಧಾನಗೊಳ್ಳುತ್ತಿದೆ.
ಇಂಟರ್ನೆಟ್, ಜಿಪಿಎಸ್, ಬಾಹ್ಯಾಕಾಶ, ಆಟೋಮಿಕ್ ಕ್ಲಾಕ್ಸ್ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಇದು ಪರಿಣಾಮ ಬೀರಲಿದೆ. ಕಳೆದ ಕೆಲ ವರ್ಷಗಳಲ್ಲಿ ಭೂಮಿ ಮೇಲೆ ನಡೆಯುತ್ತಿರುವ ಬದಲಾವಣೆ ಗಂಭೀರ ಪರಿಣಾಮಕ್ಕೆ ನಾಂದಿ ಹಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.


