ಹಿರಿಯ ನಟ ಎಂ.ಎಸ್. ಉಮೇಶ್‌ ಅವರು ಇತ್ತೀಚೆಗೆ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. 80 ವರ್ಷದ ನಟನಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಬೆಂಗಳೂರು (ಅ.12): ಹಿರಿಯ ನಟ ಎಂ.ಎಸ್. ಉಮೇಶ್‌ ಅವರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಉಮೇಶ್‌ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ಅವರ ಕಾಲು ಹಾಗೂ ಭುಜದ ಭಾಗಗಳ ಮೂಳೆಗೆ ಪೆಟ್ಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ ಮಾಡಿದಾಗ ಕ್ಯಾನ್ಸರ್‌ ಇರುವುದು ತಿಳಿದುಬಂದಿದೆ.

ನಾಲ್ಕನೇ ಹಂತದಲ್ಲಿರುವ ಲಿವರ್‌ ಕ್ಯಾನ್ಸರ್‌ ಬೇರೆ ಅಂಗಗಳಿಗೆ ಹರಡಿರುವುದು ಪತ್ತೆಯಾಗಿದೆ. ಕಾಯಿಲೆ ಬೇರೆ ಭಾಗಗಳಿಗೆ ಎಷ್ಟು ಹರಡಿದೆ ಎಂದು ತಿಳಿಯಲು ವೈದ್ಯರು ಇನ್ನಷ್ಟು ಟೆಸ್ಟ್‌ಗಳನ್ನು ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕೀಮೋ ಥೆರಪಿ, ಇಮ್ಯುನೋ ಥೆರಪಿ ಮಾಡುವ ತಯಾರಿಯಲ್ಲಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್ ಸ್ಥಿತಿ ಗಂಭೀರ!

80 ವರ್ಷ ವಯಸ್ಸಿನ ಉಮೇಶ್‌ ಈವರೆಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ಮಿಂಚಿದ್ದಾರೆ.