ನಿನ್ನೆ ಬೆಂಗ್ಳೂರ ಖಾಲಿ ಆಗುತ್ತೆ ಅಂದೋಳು ಇವತ್ತು I Love ಬೆಂಗಳೂರು! ಕನ್ನಡಿಗರು ಚಳಿಬಿಡಿಸಿದ ನಂತ್ರ ಬುದ್ಧಿ ಕಲಿತ ರೀಲ್ಸ್ ರಾಣಿ
ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಧಿಮಾಕು ತೋರಿಸಿದ್ದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಗೆ ಕನ್ನಡಿಗರು ಚಳಿ ಬಿಡಿಸಿದ ನಂತರ ಯೂಟರ್ನ್ ಹೊಡೆದ ರೀಲ್ಸ್ ರಾಣಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಸೆ.23): ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಧಿಮಾಕು ತೋರಿಸಿದ್ದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಗೆ ಕನ್ನಡಿಗರು ಚಳಿ ಬಿಡಿಸಿದ ನಂತರ ಯೂಟರ್ನ್ ಹೊಡೆದ ರೀಲ್ಸ್ ರಾಣಿ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದೀಗ 'ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾಳೆ.
ಬೆಂಗಳೂರಿನ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ರೀಲ್ಸ್ ರಾಣಿಯ ಧಿಮಾಕಿನ ವಿಡಿಯೋ ಸುದ್ದಿ ಪ್ರಸಾರ ಮಾಡಿದ್ದ ಸುವರ್ಣ ನ್ಯೂಸ್. ಬೆಂಗಳೂರಿನ ಬಗ್ಗೆ ಬೇಕಾಬಿಟ್ಟಿ ಸುದ್ದಿ ಮಾಡ್ತೀದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದ ಸುವರ್ಣ ನ್ಯೂಸ್. . ಸುದ್ದಿ ಪ್ರಸಾರ ಆಗುತ್ತಿದ್ದಂತೆ ಎಲ್ಲೆಡೆ ವೈರಲ್ ಆಗಿ ಕನ್ನಡಿಗರು ರೀಲ್ಸ್ ರಾಣಿ ವಿರುದ್ಧ ತಿರುಗಿಬಿದ್ದಿದ್ದರು. ರ್ಯಾಪಾರ್ ಚಂದನ್ ಶೆಟ್ಟಿ, ನಟಿ ಅನುಪಮ ಗೌಡ ಸೇರಿದಂತೆ ಸೆಲೆಬ್ರಿಟಿಸ್ ಕೂಡ ಈಕೆ ವಿರುದ್ಧ ಗರಂ ಆಗಿದ್ದರು. ನಿಮಗೆಲ್ಲ ಅನ್ನ ಹಾಕಿ ಸಲುಹುತ್ತಿರೋದು ನಮ್ಮ ಬೆಂಗಳೂರು. ಕರ್ನಾಟಕ ಬಿಟ್ಟು ತೊಲಗಿ ಬೆಂಗಳೂರಿಗೆ ಉತ್ತರ ಭಾರತೀಯರ ಅವಶ್ಯಕತೆ ಇಲ್ಲ ಖಡಕ್ ಆಗಿ ಎಚ್ಚರಿಕೆ ನೀಡಿದ್ದರು. ಇಷ್ಟೆಲ್ಲ ಉಗಿದು ಉಪ್ಪಿನನಾಯಿ ಹಾಕಿದ ಬಳಿಕ ಈಗ ಬುದ್ದಿ ಬಂದಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆ ಐ ಲವ್ ಬೆಂಗಳೂರು ಎಂದು ಹೇಳಿದ್ದಾಳೆ.
ಉತ್ತರ ಭಾರತ ಮಹಿಳೆಯ ಧಿಮಾಕಿನ ಮಾತು; 'ಮೊದಲು ಕರ್ನಾಟಕ ಬಿಟ್ಟು ತೊಲಗಿ' ಎಂದ ಕನ್ನಡಿಗರು!
ನಾನು ಟ್ರಾವೆಲರ್ ಊರೂರು ಸುತ್ತುತ್ತೇನೆ. ನನಗೆ ಅಂದ್ರೆ ಇಷ್ಟ, ಬೆಂಗಳೂರಿನ ಬಗ್ಗೆ ನನಗೆ ಗೌರವ ಇದೆ. ನನ್ನಲ್ಲಿ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಯಾವುದೇ ಭೇದ-ಭಾವ ಇಲ್ಲ. ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಮಾಡಿದ ಸುಗಂಧಾ ಶರ್ಮಾ. ನಿನ್ನೆಯಷ್ಟೇ ನಾರ್ತ್ ಇಂಡಿಯಾದವರು ತೊರೆದರೆ ಬೆಂಗಳೂರು ಖಾಲಿ ಆಗುತ್ತದೆ ಎಂದು ಕರ್ನಾಟಕ ಕನ್ನಡ ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಮಹಿಳೆ. ಇದರಿಂದ ರಾಜ್ಯಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು. Please leave ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯೂಟರ್ನ್ ಹೊಡೆದ ಮಹಿಳೆ ಐಲವ್ ಬೆಂಗಳೂರು ಎಂದಿದ್ದಾರೆ.
ಕನ್ನಡ ಪ್ರೇಮ ಮೆರೆದ ಬೆಂಗಳೂರು ಆಟೋ ಚಾಲಕ: ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಗೆ ತರಾಟೆ
ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ ಎಂಬುದನ್ನ ತೋರಿಸಿಕೊಟ್ಟ ಕನ್ನಡಿಗರು