ಮೈಸೂರು ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ
ವಿಶ್ವವಿಖ್ಯಾತ ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಹಳದಿ ವಲಯವೆಂದು ಗುರುತಿಸಲಾಗಿದ್ದು, ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮರಾ ಬಳಸುವುದನ್ನು ನಿರ್ಬಂಧಿಸಲಾಗಿದೆ.
ಮೈಸೂರು (ಆ.08): ವಿಶ್ವವಿಖ್ಯಾತ ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಹಳದಿ ವಲಯವೆಂದು ಗುರುತಿಸಲಾಗಿದ್ದು, ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮರಾ ಬಳಸುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಇನ್ನು ಮುಂದೆ ಈ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಬಳಸಲು ಮೈಸೂರು ಅರಮನೆ ಆಡಳಿತ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಅನಧಿಕೃತವಾಗಿ ಡ್ರೋನ್ ಹಾರಾಟ ಮಾಡಿದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ರಾಜಕೀಯದಲ್ಲಿ ಆಸಕ್ತಿಯಿಲ್ಲ, ಅರಮನೆ ಪರಂಪರೆ ಮುಂದುವರಿಸಲು ಬದ್ಧ: ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ. ಮೈಸೂರು ಅರಮನೆ ಪರಂಪರೆ ಮುಂದುವರೆಸಿಕೊಂಡು ಹೋಗಲು ಬದ್ಧ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕಷ್ಣರಾಜ ಒಡೆಯರ್ ಹೇಳಿದ್ದಾರೆ. ಸುಂಟಿಕೊಪ್ಪದಲ್ಲಿ ಭಾನುವಾರ ರಾಜ್ಯಮಟ್ಟದ ಡಿ.ಶಿವಪ್ಪ ಸ್ಮಾರಕ 25 ನೇ ವರ್ಷದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, ರಾಜಕೀಯದಿಂದ ದೂರ ಎಂದು ಈಗಾಗಲೇ ಹಲವಾರು ಸಲ ಹೇಳಿದ್ದೇನೆ. ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ಸಿಂದ ದೇಶದ ಆರ್ಥಿಕತೆ ಸದೃಢ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ, ಕೊಡಗಿನ ಕೋಲ್ಕೋತ್ತಾ ಎಂದು ಖ್ಯಾತಿ ಪಡೆದು ಫುಟ್ಬಾಲ್ ಕ್ರೀಡೆಗೆ ಹೆಸರಾಗಿರುವ ಸುಂಟಿಕೊಪ್ಪದಲ್ಲಿ 25 ವರ್ಷಗಳಿಂದ ಫುಟ್ಬಾಲ್ ಪಂದ್ಯಾಟ ಆಯೋಜಿಸುತ್ತಿರುವ ಡಿ. ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ. ಕೊಡಗಿನಲ್ಲಿ ಕ್ರೀಡಾಚಟುವಟಿಕೆಗೆ ಮುಂದಿನ ದಿನಗಳಲ್ಲಿಯೂ ತನ್ನಿಂದಾದ ಪ್ರೋತ್ಸಾಹ ನೀಡುವೆ ಎಂದು ಭರವಸೆ ನೀಡಿದರು.
ಹಿಂದುಳಿದ, ತುಳಿತಕ್ಕೊಳಗಾದವರ ಪರ ನಮ್ಮ ಸರ್ಕಾರವಿದೆ: ಸಚಿವ ಮಹದೇವಪ್ಪ
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆ ಇರುವುದಾಗಿ ಸುದ್ದಿಗಾರರೊಂದಿಗೆ ಹೇಳಿದ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾಟದ ಪ್ರಾಯೋಜಕ ಉದ್ಯಮಿ ವಿಶಾಲ್ ಶಿವಪ್ಪ, ಶಾಸಕ ಡಾ.ಮಂಥರ್ ಗೌಡ ಅವರ ಸಹಕಾರದಿಂದ ಸುಂಟಿಕೊಪ್ಪಕ್ಕೆ ಸುಸಜ್ಜಿತ ಕ್ರೀಡಾಂಗಣ ರೂಪಿಸುವ ಚಿಂತನೆ ಇದೆ ಎಂದೂ ನುಡಿದರು. ತಂದೆಯವರಾದ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ ಪ್ರಯತ್ನದಿಂದ 25 ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದಾರೆ. ನಾನು ಮುಂದಿನ 25 ವರ್ಷಗಳೂ ಈ ಕ್ರೀಡಾ ಪರಂಪರೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದೂ ವಿಶಾಲ್ ಶಿವಪ್ಪ ಹೇಳಿದರು. ವಿನೋದ್ ಶಿವಪ್ಪ, ಹರಪಳ್ಳಿ ರವೀಂದ್ರ, ಕೆ.ಪಿ.ಚಂದ್ರಕಲಾ, ಶುಭ್ರ ಅಯ್ಯಪ್ಪ, ಎ.ಲೋಕೇಶ್ ಕುಮಾರ್ ಸೇರಿದಂತೆ ಗಣ್ಯರು ಹಾಜರಿದ್ದರು.