ಹಿಂದುಳಿದ, ತುಳಿತಕ್ಕೊಳಗಾದವರ ಪರ ನಮ್ಮ ಸರ್ಕಾರವಿದೆ: ಸಚಿವ ಮಹದೇವಪ್ಪ

ಸಮಾಜದಲ್ಲಿ ಹಿಂದುಳಿದವರು ಹಾಗೂ ತುಳಿತಕ್ಕೊಳಗಾದವರ ಪರವಾಗಿ ನಮ್ಮ ಸರ್ಕಾರವಿದ್ದು, ಅವರೆಲ್ಲರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. 

Our government is for the backward oppressed Says Minister HC Mahadevappa gvd

ಮೈಸೂರು (ಆ.07): ಸಮಾಜದಲ್ಲಿ ಹಿಂದುಳಿದವರು ಹಾಗೂ ತುಳಿತಕ್ಕೊಳಗಾದವರ ಪರವಾಗಿ ನಮ್ಮ ಸರ್ಕಾರವಿದ್ದು, ಅವರೆಲ್ಲರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಷ್ಟದ ಜೀವನ ನಡೆಸುತ್ತಿರುವ ಸಮುದಾಯಗಳ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ ಎಂದರು.

ತುಳಿತಕ್ಕೆ ಒಳಗಾದ ಸಮುದಾಯಗಳು ಸಂಘಟಿತರಾಗಿ ಸಂವಿಧಾನದ ಆಶಯದಡಿಯಲ್ಲಿ ದೊರಕುವ ಎಲ್ಲಾ ಸೌಲಭ್ಯಗಳು ಪಡೆದುಕೊಳ್ಳುವಂತೆ ನೆರವಾಗಲು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮತ್ತು ನಾವು ಅಹಿಂದ ಚಳವಳಿ ಪ್ರಾರಂಭಿಸಿದೆವು. ಈ ಚಳವಳಿ ಯಾರ ವಿರುದ್ಧವೂ ಆಗಿಲ್ಲ ಹಾಗೂ ರಾಜಕೀಯವಾಗಿ ಅಧಿಕಾರ ಹಿಡಿಯುವ ಉದ್ದೇಶವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!

ವಿಶ್ವಕರ್ಮ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಹಾಗೆಂದು ಆತಂಕಪಡುವ ಅಗತ್ಯವಿಲ್ಲ. ನಾವೆಲ್ಲರೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ರಕ್ಷಣೆಯಲ್ಲಿದ್ದೇವೆ. ಈ ಸಮುದಾಯದಲ್ಲಿ ಅತ್ಯಂತ ಶಿಸ್ತಿನ ಶ್ರಮಿಕ ಜೀವಿಗಳಿದ್ದು, ಯಾರಿಗೂ ಉಪದ್ರವ ನೀಡಿದಂತಹ ಉದಾಹರಣೆಗಳಿಲ್ಲ. ಇಂತಹ ಸಮುದಾಯಕ್ಕೆ ಸರ್ಕಾರದ ವತಿಯಿಂದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ: ಸೂಕ್ತ ಕ್ರಮಕ್ಕೆ ವಿಶು ಶೆಟ್ಟಿ ಆಗ್ರಹ

ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಸಂಘದ ವತಿಯಿಂದ ನೀಡಿರುವ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ, ಸರ್ಕಾರದಿಂದ ಸೌಲಭ್ಯ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ನಗರ ಪಾಲಿಕೆ ಸದಸ್ಯರಾದ ವೇದಾವತಿ, ರಮೇಶ್‌, ಛಾಯಾದೇವಿ, ಜೆ. ಗೋಪಿ, ಸಂಘದ ಅಧ್ಯಕ್ಷ ಎ.ಎನ್‌. ಸ್ವಾಮಿ, ಗೌರವಾಧ್ಯಕ್ಷ ಟಿ. ನಾಗರಾಜು, ಪದಾಧಿಕಾರಿಗಳಾದ ಬಿ. ನರಸಿಂಹಮೂರ್ತಿ, ಕುಮಾರ್‌, ಎಚ್‌.ಎಸ್‌. ಸವಿತಾ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios