Asianet Suvarna News Asianet Suvarna News

ಕೋವಿಡ್‌ನಿಂದ ಚೇತರಿಸಿಕೊಂಡ ಮಕ್ಕಳಿಗೆ ಮಿಸ್ಸಿ ಕಾಟ

* ರಾಜ್ಯಾದ್ಯಂತ 1000ಕ್ಕೂ ಹೆಚ್ಚು ಮಕ್ಕಳಲ್ಲಿ ಎಂಐಎಸ್‌-ಸಿ ಸಮಸ್ಯೆ
* ಕೊರೋನಾ ಸೋಂಕಿನ ಅಡ್ಡಪರಿಣಾಮದ ಫಲ
*  ಸೋಂಕಿನಿಂದ ಗುಣಮುಖರಾದ 2ರಿಂದ 6 ವಾರದಲ್ಲಿ ಸಮಸ್ಯೆ
 

MIS C  Cases to Children Those who Recoverd from Coronavirus in Karnataka grg
Author
Bengaluru, First Published Aug 1, 2021, 7:38 AM IST

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಆ.01):  ರಾಜ್ಯದಲ್ಲಿ ಕೋವಿಡ್‌-19ರ ಎರಡನೇ ಅಲೆಯ ಅಬ್ಬರ ಕಡಿಮೆ ಆಗಿದ್ದರೂ ಅದರ ಅಡ್ಡ ಪರಿಣಾಮಗಳು ಮುಂದುವರಿದಿದ್ದು, ಕೋವಿಡ್‌ನಿಂದ ಚೇತರಿಸಿಕೊಂಡಿರುವ ಮಕ್ಕಳಲ್ಲಿ ಎಂಐಎಸ್‌-ಸಿ (ಮಿಸ್ಸಿ) ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರು ನಗರದಲ್ಲೇ ಕಳೆದೊಂದು ತಿಂಗಳಿನಲ್ಲಿ ಸುಮಾರು 450ಕ್ಕೂ ಹೆಚ್ಚು ಪ್ರಕರಣ ಕಂಡು ಬಂದಿವೆ. ರಾಜ್ಯದಲ್ಲಿ 1,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ನಂತರ ಎರಡರಿಂದ ಆರು ವಾರಗಳಲ್ಲಿ ಮಕ್ಕಳಲ್ಲಿ ಜ್ವರ, ದೇಹದಲ್ಲಿ ದದ್ದು, ಕಣ್ಣುಗಳಲ್ಲಿ ಉರಿ, ವಾಂತಿ, ಭೇದಿ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಸಮಸ್ಯೆ ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಬಹು ಅಂಗಾಗ ಉರಿ ಕಾಯಿಲೆ ಎಂದು ಕರೆಯುತ್ತಾರೆ. ಈ ಕಾಯಿಲೆ ಬಂದಾಗ ದೇಹದಲ್ಲಿ ವೈರಾಣು ಕಂಡು ಬರುವುದಿಲ್ಲ. ಪ್ರತಿಕಾಯ ಪರೀಕ್ಷೆಯಲ್ಲಿ ಕೋವಿಡ್‌ ಬಂದಿರುವುದು ದೃಢಪಡುತ್ತಿದೆ.

ಮನೆಯಲ್ಲಿ ಪೋಷಕರು ಅಥವಾ ಕುಟುಂಬ ಸದಸ್ಯರಿಗೆ ಸೋಂಕು ದೃಢಪಟ್ಟಿರುತ್ತದೆ. ಮಕ್ಕಳಿಗೆ ಸೋಂಕು ಬಂದಿದ್ದರೂ ಸೋಂಕಿನ ಲಕ್ಷಣಗಳು ಕಂಡು ಬಂದಿರುವುದಿಲ್ಲ ಅಥವಾ ಸೌಮ್ಯ ಲಕ್ಷಣಗಳಷ್ಟೆಕಂಡು ಬಂದಿರುತ್ತದೆ. ಆದರೆ ಸೋಂಕು ದೇಹದ ಒಳಗೆ ಸೇರಿ ಅಂಗಾಂಗಗಳಿಗೆ ಹಾನಿ ಮಾಡಿರುತ್ತದೆ. ಇದರ ಅಡ್ಡ ಪರಿಣಾಮವಾಗಿ ಎಂಐಎಸ್‌-ಸಿ ಕಾಣಿಸಿಕೊಳ್ಳುತ್ತಿದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕವಾಸಕಿ, HLH ಬಳಿಕ ಮಕ್ಕಳಿಗೆ 'ಮಿಸ್ಸಿ' ಕಾಟ; ವಿಜಯಪುರದಲ್ಲಿ ಪತ್ತೆ

ಲಕ್ಷಣಗಳೇನು?

ಕೋವಿಡ್‌ ಸೋಂಕಿನಿಂದ ಗುಣಮುಖರಾದ 2-6 ವಾರಗಳಲ್ಲಿ ಮಕ್ಕಳಲ್ಲಿ ಜ್ವರ, ದೇಹದಲ್ಲಿ ದದ್ದು, ಕಣ್ಣುಗಳಲ್ಲಿ ಉರಿ, ವಾಂತಿ, ಭೇದಿ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಏನು ಮಾಡಬೇಕು?

ಎಂಐಎಸ್‌-ಸಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ತುರ್ತು ಚಿಕಿತ್ಸೆ ನೀಡಬೇಕು. ಈ ಕಾಯಿಲೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಒಂದು ವೇಳೆ ಆರಂಭದಲ್ಲೇ ಚಿಕಿತ್ಸೆ ಸಿಗದೆ ಹೋದರೆ ಕಾಯಿಲೆ ಮಾರಣಾಂತಿಕ ಆಗಬಹುದು. ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಮೂತ್ರ ಪಿಂಡ, ಹೃದಯ, ಯಕೃತ್‌ಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಡುತ್ತಾರೆ.

ಭಯ ಬೇಡ, ಎಚ್ಚರಿಕೆ ಇರಲಿ

ಮಕ್ಕಳ ಪೋಷಕರು ಕೋವಿಡ್‌ ಅಥವಾ ಎಂಐಎಸ್‌-ಸಿಯ ತುಸು ಲಕ್ಷಣ ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸಬೇಕು. ಈ ಕಾಯಿಲೆ ಬಗ್ಗೆ ಭಯ ಬೇಡ ಆದರೆ ಎಚ್ಚರಿಕೆ ಇರಬೇಕು. ರಾಜ್ಯ ಸರ್ಕಾರ ಚಿಕುನ್‌ ಗುನ್ಯಾ, ಡೆಂಘೀಗಳ ಲೆಕ್ಕವನ್ನು ಹೇಗೆ ದಾಖಲಿಸಿಕೊಳ್ಳುತ್ತದೆಯೋ ಎಂಐಎಸ್‌-ಸಿಯ ದಾಖಲೆಯನ್ನು ಕೂಡ ಸಂಗ್ರಹಿಸಿಡಬೇಕು ಎಂದು ಭಾರತೀಯ ಮಕ್ಕಳ ವೈದ್ಯ ಸಂಘದ ಅಧ್ಯಕ್ಷ ಡಾ.ಎಚ್‌.ಬಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.  

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: ಇಲ್ಲಿದೆ ಜು.31ರ ಅಂಕಿ-ಸಂಖ್ಯೆ

ಅಡ್ಡ ಪರಿಣಾಮ ನಿರ್ವಹಣೆ

ಮಕ್ಕಳಲ್ಲಿ ಕೋವಿಡ್‌ನ ದೀರ್ಘಾವಧಿಯ ಅಡ್ಡ ಪರಿಣಾಮಗಳು ಕಂಡು ಬರುತ್ತಿರುವುದು ನಮ್ಮ ಗಮನದಲ್ಲಿದೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಕೆಟ್ಟಪರಿಣಾಮಗಳಾಗುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ನಾವು ಅಡ್ಡ ಪರಿಣಾಮಗಳ ನಿರ್ವಹಣೆಯ ಬಗ್ಗೆಯೂ ಯೋಜನೆ ರೂಪಿಸುತ್ತಿದ್ದೇವೆ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ. ವಿಜಯೇಂದ್ರ ಹೇಳಿದ್ದಾರೆ.  

ಸಾಮಾನ್ಯವಾಗಿ ಕೋವಿಡ್‌ ಬಂದ ಲಕ್ಷ ಮಕ್ಕಳ ಪೈಕಿ ಒಬ್ಬರಲ್ಲಿ ಎಂಐಎಸ್‌ಸಿ ಕಾಣಿಸಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಮಾಚ್‌ರ್‍ ಅಂತ್ಯದಿಂದ ಜುಲೈ 1ರವರೆಗೆ 19 ವರ್ಷದೊಳಗಿನ 2.12 ಲಕ್ಷ ಮಂದಿಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ಈ ಮೂಲಕ ಕೊರೋನಾದಿಂದ ಚೇತರಿಸಿಕೊಳ್ಳುವ ಲಕ್ಷ ಮಕ್ಕಳಲ್ಲಿ ಸುಮಾರು 500 ಮಕ್ಕಳಿಗೆ ಎಂಐಎಸ್‌-ಸಿ ಬರುತ್ತಿದೆ. ಕೋವಿಡ್‌ನ ದುಷ್ಪರಿಣಾಮವಾಗಿ ಎಂಐಎಸ್‌-ಸಿ ಕಾಣಿಸಿಕೊಳ್ಳುತ್ತದೆ. ಕೋವಿಡ್‌ ಬಂದಾಗ ಪ್ರತಿಕಾಯಗಳು ಅಗಾಧವಾಗಿ ಸೃಷ್ಟಿಯಾಗಿ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ಮೊದಲ ಆದ್ಯತೆ ಸಾಂಕ್ರಾಮಿಕ ರೋಗವನ್ನು ತಡೆಯುವುದು. ಅಡ್ಡ ಪರಿಣಾಮಗಳ ಚಿಕಿತ್ಸೆಯನ್ನು ಮಕ್ಕಳ ತಜ್ಞರು ನಿರ್ವಹಿಸುತ್ತಾರೆ.
 

Follow Us:
Download App:
  • android
  • ios