ನೋಕಿಯಾದಿಂದ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ 5G ಸ್ಮಾರ್ಟ್‌ಫೋನ್; 108MP ಕ್ಯಾಮೆರಾ, 6000mAh ಬ್ಯಾಟರಿ
ನೋಕಿಯಾ ಕಂಪನಿಯು ಶೀಘ್ರದಲ್ಲೇ ಕಡಿಮೆ ಬೆಲೆಯ, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ 108MP ಕ್ಯಾಮೆರಾ, 6000mAh ಬ್ಯಾಟರಿ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ನವದೆಹಲಿ: ನೋಕಿಯಾ ಕಂಪನಿ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲಾ ಅಡ್ವಾನ್ಸಡ್ ಫೀಚರ್ಸ್ ಹೊಂದಿರುವ ಫೋನ್ ಇದಾಗಿರಲಿದ್ದು, ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸೇರಲಿದೆ ಎಂದು ವರದಿಯಾಗಿದೆ. ಇದನ್ನು ನೋಕಿಯಾದ 5G ಸ್ಮಾಲ್ ಫೋನ್ ಎಂದು ಕರೆಯಲಾಗುತ್ತಿದೆ. ನೋಕಿಯಾದ 5G ಸ್ಮಾಲ್ ಫೋನ್ ವೈಶಿಷ್ಟ್ಯಗಳೇನು ಎಂಬುದರ ಮಾಹಿತಿ ಇಲ್ಲಿದೆ.
ನೋಕಿಯಾದ ಇನ್ನುಳಿದ ಆಂಡ್ರಾಯ್ಡ್ ಫೋನ್‌ಗಳಿಗಿಂತ ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. 5.1 ಇಂಚು ಸ್ಕ್ರೀನ್ ಹೊಂದಿದ್ದು, 90 ಹಾರ್ಟ್ ಟಚ್ ರಿಫ್ರೆಶ್ ದರದಲ್ಲಿ ಸಿಗಲಿದೆ. ಹಾಗೆಯೇ 720*1920 ಪಿಕ್ಸೆಲ್ ರೆಸ್ಯೂಲೇಷನ್ ಸಪೋರ್ಟ್, ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ ಬಳಕೆ ಮಾಡಲಾಗಿರುತ್ತದೆ. ಇನ್ನು ಸೆಕ್ಯುರಿಟಿ ವಿಷಯದಲ್ಲಿಯೂ ನೋಕಿಯಾ ಯಾವುದೇ ರಾಜಿ ಮಾಡಿಕೊಂಡಿಲ್ಲ. ನೋಕಿಯಾದ 5G ಸ್ಮಾಲ್ ಫೋನ್ ಫಿಂಗರ್ ಪ್ರಿಂಟ್ ಮತ್ತು ಫೇಸ್ ಲಾಕಿಂಗ್ ಎರಡೂ ಆಯ್ಕೆಯನ್ನು ಒಳಗೊಂಡಿದೆ. ಮೀಡಿಯಾ ಟೆಕ್ ಡೈಮೆನ್ಶನ್ 6000 ಪ್ರೊಸೆಸರ್ ಅನ್ನು ಬಳಸಲಾಗಿದೆ.
ಇದನ್ನೂ ಓದಿ: 50MP ಕ್ಯಾಮೆರಾ, 4700 mAh ಬ್ಯಾಟರಿಯುಳ್ಳ AI ವೈಶಿಷ್ಟ್ಯದ 5G ಸ್ಮಾರ್ಟ್‌ಫೋನ್ ಮೇಲೆ 17 ಸಾವಿರ ರೂಪಾಯಿ ಡಿಸ್ಕೌಂಟ್
ನೋಕಿಯಾ ಕಂಪನಿಯ ಈ ಸ್ಮಾರ್ಟ್‌ಫೋನ್ ಸುಧಾರಿತ ಮತ್ತು ಗುಣಮಟ್ಟದ ಕ್ಯಾಮೆರಾ ಒಳಗೊಂಡಿದೆ. 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ. ಅಲ್ಟ್ರಾ ವೈಡ್ ಕ್ಯಾಮೆರಾ 8MP ಮತ್ತು ಫ್ರಂಟ್ ಕ್ಯಾಮೆರಾ 32 ಮೆಗಾಪಿಕ್ಸೆಲ್ ಹೊಂದಿದೆ. ಈ ಮೊಬೈಲ್‌ನಿಂದ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಝೂಮ್ ವಿಷಯ ನೋಡೋದಾದ್ರೆ 20x ವರೆಗೆ Zoom ಮಾಡಬಹುದು.
108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆ ನೋಕಿಯಾದ 5G ಸ್ಮಾಲ್ ಫೋನ್ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದೆ. 30 ವ್ಯಾಟ್ ಚಾರ್ಜಿಂಗ್ ಜೊತೆ 6000mAh ಬ್ಯಾಟರಿಯನ್ನು ಹೊಂದಿದ್ದು, 40 ರಿಂದ 50 ನಿಮಿಷದಲ್ಲಿ ಚಾರ್ಜ್ ಫುಲ್ ಆಗುತ್ತದೆ. ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಮಾಡಿದ್ರೆ ಯಾವುದ ಅಡೆತಡೆಯಿಲ್ಲದೇ 2 ದಿನ ಬಳಸಬಹುದು. ಸದ್ಯ ಈ ಸ್ಮಾರ್ಟ್‌ಫೋನ್‌ನನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲ್ಲ. ಸದ್ಯ ಸ್ಮಾಲ್ ಫೋನ್ ಬೆಲೆ 4,999 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯ ಗಾತ್ರದ ಸ್ಮಾರ್ಟ್‌ಫೋನ್ ಬೆಲೆ 10,000 ರೂ.ವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್