ನಿನ್ನೆ ಡಿಕೆ ಸುರೇಶ್ ಸಮರ್ಥನೆ, ಇಂದು ಸಚಿವ ಜಮೀರ್ ಅಹ್ಮದ್ 'ಕರಿಯ' ಹೇಳಿಕೆ ಖಂಡಿಸಿದ ಡಿಸಿಎಂ ಡಿಕೆ ಶಿವಕುಮಾರ!

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಡ 'ಕರಿಯಾ'ಎಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನ ನಿನ್ನೆ ಸಹೋದರ ಮಾಜಿ ಎಂಪಿ ಡಿಕೆ ಸುರೇಶ್ ಸಮರ್ಥಿಸಿಕೊಂಡ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಜಮೀರ್ ಹೇಳಿಕೆಯನ್ನ ಖಂಡಿಸಿ ಅಚ್ಚರಿ ಮೂಡಿಸಿದ್ದಾರೆ.

Karnataka DCM DK Shivakumar reacts about minister zameer ahmed khan statement against hd kumaraswamy rav

ಬೆಂಗಳೂರು (ನ.16) ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಡ 'ಕರಿಯಾ'ಎಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನ ನಿನ್ನೆ ಸಹೋದರ ಮಾಜಿ ಎಂಪಿ ಡಿಕೆ ಸುರೇಶ್ ಸಮರ್ಥಿಸಿಕೊಂಡ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಜಮೀರ್ ಹೇಳಿಕೆಯನ್ನ ಖಂಡಿಸಿ ಅಚ್ಚರಿ ಮೂಡಿಸಿದ್ದಾರೆ.

ಹೌದು ಹೆಚ್‌ಡಿ ಕುಮಾರಸ್ವಾಮಿ ವಿರುದ್ಡ 'ಕರಿಯಾ' ಪದ ಬಳಕೆಗೆ ಒಕ್ಕಲಿಗರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ ರಾಜ್ಯದ್ಯಂತ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸುತ್ತಿದೆ ಈ ನಡುವೆ ಜಮೀರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿದ ಉಪಮುಖ್ಯಮಂತ್ರಿ ಡಿಕ ಶಿವಕುಮಾರ ಅವರು, 'ನಾನು ಇಂಥ ಹೇಳಿಕೆಯನ್ನು ಒಪ್ಪೋದಿಲ್ಲ, ಅವರು ಏನು ಬೇಕಾದರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ಆದರೆ ನಾನು ಪಕ್ಷದ ಅಧ್ಯಕ್ಷನಾಗಿ, ಆನ್ ರೆಕಾರ್ಡ್ ಆಗಿ ಹೇಳ್ತಿದ್ದೇನೆ, ಜಮೀರ್ ಕರಿಯ-ಬಿಳಿಯ ಅನ್ನೋದು ಸರಿಯಲ್ಲ ಎಂದರು.

ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ 'ಕಳ್ಳ' ಎಂದಾಗ ಯಾಕೆ ಚರ್ಚಿಸಲಿಲ್ಲ? ಸಚಿವ ಜಮೀರ್ ಬೆನ್ನಿಗೆ ನಿಂತ ಡಿಕೆ ಸುರೇಶ್

ಜಮೀರ್ ವಿರುದ್ಡ ಕ್ರಮ ತಗೋತೀರಾ?

ಜಮೀರ್ ಹೇಳಿಕೆ ವಿರುದ್ಧ ಏನು ಕ್ರಮ ತಗೊತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನ ಆಮೇಲೆ ನೊಡೋಣ ಎಂದರು, ಇದೇ ವೇಳೆ ವಕ್ಫ್ ನೋಟಿಸ್ ವಿರುದ್ಡ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರ ಸಂಬಂಧ ಪ್ರಸ್ತಾಪಿಸಿ, ಬಿಜೆಪಿಯವರು ಮೂರ್ಖತನ ಮಾಡುತ್ತಿದ್ದಾರೆ. ವಕ್ಫ್ ನೋಟಿಸ್ ವಿಚಾರ ಬಿಜೆಪಿ ಕಾಲದ್ದು, ಅವರ ಕಾಲದಲ್ಲೇ ಪಹಣಿಗಳು ಬರ್ತಿವೆ. ಅದನ್ನ ನಮ್ಮವರು ನೋಡಿಲ್ಲ.ಈಗ ಅದರ ಬಗ್ಗೆ ಮಾತನಾಡ್ತಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿಯಲ್ಲೇ ಭಿನ್ನಮತ ಆಗ್ತಿದೆ. ಅವರದು ಏನು ಬಣವೋ ಗೊತ್ತಿಲ್ಲ ಎಂದರು ಇದೇ ವೇಳೆ ನಾವು ಮಾತಾಡಿದ್ರೆ ನೀವು ಕವರ್ ಮಾಡಲ್ಲ, ಅವರು ಮಾತನಾಡಿದ್ರೆ ಕವರ್ ಮಾಡ್ತೀರಾ? ಎಂದು ಮಾಧ್ಯಮಗಳ ಮೇಲೆಯೇ ಡಿಕೆ ಶಿವಕುಮಾರ ಗರಂ ಆದರು.

ನಾನು ಮಠದ ಹುಡುಗ, ಆದಿ ಚುಂಚನಗಿರಿಶ್ರೀ ಮಡಿಲಲ್ಲಿ ಬೆಳೆದವ: ಸಚಿವ ಜಮೀರ್ ಅಹ್ಮದ್

ಬಿಜೆಪಿ  ಶಾಸಕರನ್ನ ಖರೀದಿ ಮಾಡ್ತಿದ್ದಾರೆ ಅಂತ ಆರೋಪ ಮಾಡ್ತಿದ್ದಾರೆ. ಆದರೆ ಇವರು(ಬಿಜೆಪಿ) ಹಿಂದೆ ಅವರು ಖರೀದಿ‌ಮಾಡಿದ್ದು ಏನು? ಕುರಿಗಳನ್ನ ತಾನೇ ಅವರು ಖರೀದಿ‌ಮಾಡಿದ್ದು? ಅಶ್ವಥ್ ನಾರಾಯಣ್ ಶ್ರೀನಿವಾಸಗೌಡ ಮನೆಗೆ ಹಣ ಕಳಿಸಿಲ್ವೇ? ಸದನದಲ್ಲೇ ಇದರ ಬಗ್ಗೆ ಚರ್ಚೆ ಆಗಲಿಲ್ವಾ? ಮೊದಲು ಸಾವಿರ ಕೋಟಿ ಕಲೆಕ್ಟ್ ಮಾಡಿದ್ಯಾರು? ಮೊದಲು ಅಲ್ಲಿಂದ ಶುರುಮಾಡಿ. ಸಿಎಂ ಸಿದ್ದರಾಮಯ್ಯ ಬಹಿರಂಗಗೊಳಿಸಿದ ನಂತರ ಇದೆಲ್ಲ ಶುರುವಾಗಿದೆ ಎಂದರು.

Latest Videos
Follow Us:
Download App:
  • android
  • ios