ನಾನು ಮಠದ ಹುಡುಗ, ಆದಿ ಚುಂಚನಗಿರಿಶ್ರೀ ಮಡಿಲಲ್ಲಿ ಬೆಳೆದವ: ಸಚಿವ ಜಮೀರ್ ಅಹ್ಮದ್
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಮಂಗಳೂರು (ನ.16): ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಸಂಬಂಧ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ನೋಟಿಎಸ್ ಬಂದದ್ದು ನನಗೆ ಗೊತ್ತಿಲ್ಲ. ಆದರೆ ನೋಟಿಸ್ ಕೊಡೋದು ರೂಟೀನ್. ಇಡಿಯವರು ಎಸಿಬಿಗೆ ಫಾರ್ವರ್ಡ್ ಮಾಡಿದ್ದಾರೆ, ಕೇಸ್ ಅಲ್ಲಿಂದ ಲೋಕಾಯುಕ್ತಗೆ ಬಂದಿದೆ. ನೋಟಿಸ್ ಬಂದ ಮೇಲೆ ವಿಚಾರಣೆ ಹೋಗಲೇಬೇಕು ಎಂದರು.
ನಾನು ದೇವೇಗೌಡರ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಂ ನನಗೆ ಬೇಕಾಗಿಲ್ಲ ಅಂತಾ ಹೇಳಿದ್ರು. ಈ ಹಿನ್ನೆಲೆ ಮುಸ್ಲಿಂ ಓಟು ಬೇಡ ಅಂತಾ ದುಡ್ಡು ಕೊಟ್ಟು ಖರೀದಿ ಮಾಡ್ತಿದ್ದೀರಿ ಅಲ್ವ, ಇದು ಎಷ್ಟು ಸರಿ ಅಂತ ನಾನು ಕೇಳಿದ್ದು. ಮುಸ್ಲಿಂ ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವವರು ಅಂತೆಲ್ಲಾ ಲಘುವಾಗಿ ಮಾತನಾಡಿದ್ದಾರೆ. ಅಂಥವರ ಬಳಿ ಯಾಕೆ ಓಟ್ ಕೇಳುತ್ತೀರಿ, ನಿನ್ನೆಯೂ ಕುಮಾರಸ್ವಾಮಿ ಅದೇ ಹೇಳಿದ್ದಾರೆ.ಹೌದು ಸ್ವಾಮಿ ಮುಸ್ಲಿಂರು ಬಡವರು ಅಂಥವರ ಬಳಿ ನೀವು ಓಟು ಕೇಳಬಾರದು ಎಂದರು.
ಅಕ್ರಮ ಆಸ್ತಿ: ಸಚಿವ ಜಮೀರ್ ಅಹ್ಮದ್‌ಗೆ ಲೋಕಾ ಬುಲಾವ್
ಕುಮಾರಸ್ವಾಮಿ ಎಂದರೆ ಯೂಟರ್ನ್:
ಕುಮಾರಸ್ವಾಮಿ ರಾಜಕಾರಣದಲ್ಲಿ ಯಾವಾಗ ಸತ್ಯ ಹೇಳಿದ್ದಾರೆ. ಕುಮಾರಸ್ವಾಮಿಗೆ ಇನ್ನೊಂದು ಹೆಸರೇ ಯೂಟರ್ನ್.ಅವರು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಯೂಟರ್ನ್ ಮಾಡ್ತಾರೆ. ನಾನು ವೈಯಕ್ತಿಕವಾಗಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದೇನೆ. ನನಗೆ ಒಕ್ಕಲಿಗರ ಬಗ್ಗೆ ಗೌರವ ಇದೆ. ಒಕ್ಕಲಿಗ ಸಮುದಾಯದ ಬಗ್ಗೆ ಯಾವ ಹೇಳಿಕೆಯನ್ನೂ ನಾನು ನೀಡಿಲ್ಲ ಎಂದರು.
ನನಗೆ ಅವರು 'ಕುಳ್ಳ' ಅಂತಾರೆ, ನಾನು ಕುಮಾರಸ್ವಾಮಿಗೆ ಪ್ರೀತಿಯಿಂದ 'ಕರಿಯ' ಅಂತೇನೆ: ಸಚಿವ ಜಮೀರ್ ಸ್ಪಷ್ಟನೆ
ನಾನು ಜನತಾದಳಕ್ಕೆ ಬರಲು ಚುಂಚನಗಿರಿ ಸ್ವಾಮೀಜಿ ಕಾರಣ:
ನಾನು ಮಠದ ಹುಡುಗ, ಆದಿ ಚುಂಚನಗಿರಿಯಲ್ಲಿ ಬೆಳೆದವನು ನಾನು. ಜನತಾದಳಕ್ಕೆ ಬರಲು ಆದಿ ಚುಂಚನಗಿರಿ ಸ್ವಾಮೀಜಿಗಳು ಕಾರಣ. ಸ್ಚಾಮೀಜಿ ಬಳಿ ಕೇಳಲು ಹೇಳಿ, ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ, ಕುಮಾರಸ್ವಾಮಿ ಅವರಲ್ಲಿ ಕೇಳಿ ಬೇಕಾದರೆ. ನಾನು ಬೆಳೆದಿರೋದು ಎಲ್ಲಿ ಅಂತ ಅವರಿಗೂ ಗೊತ್ತಿದೆ. ಹೀಗಿರುವಾಗ ಒಕ್ಕಲಿಗರ ಸಮುದಾಯದ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ನಾನು ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ಪುನರುಚ್ಚರಿಸಿದರು.