Santosh Lad on RSS ban: ಆರೆಸ್ಸೆಸ್ ಚಟುವಟಿಕೆ ಬ್ಯಾನ್ ವಿಚಾರವಾಗಿ ಪ್ರಿಯಾಂಕ್ ಖರ್ಗೆಗೆ ಬಂದಿರುವ ಬೆದರಿಕೆ ಕರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಒರಿಜಿನಲ್ ಹಿಂದುಗಳು ಖರ್ಗೆಯವರ ಜೊತೆಗಿದ್ದು, ಇಂತಹ ಬೆದರಿಕೆಗಳಿಗೆ ಹೆದರೊಲ್ಲ ಎಂದರು.

ರಾಯಚೂರು (ಅ.16): ನಾವು ಯಾರೂ ಹೆದರೋದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಪ್ರಿಯಾಂಕ್ ಖರ್ಗೆ ಜೊತೆಗಿದೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Add Asianetnews Kannada as a Preferred SourcegooglePreferred

ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆ ಬ್ಯಾನ್ ಮಾಡುವ ವಿಚಾರ ಕುರಿತು ಸಿಎಂಗೆ ಪತ್ರ ಬರೆದ ಹಿನ್ನೆಲೆ ಬೆದರಿಕೆ ಕರೆ ಬಂದಿರುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಯಚೂರಿನಲ್ಲಿ ಮಾತನಾಡಿರು.

ಬೆದರಿಕೆ ಕರೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ. ದೇಶದ ಎಲ್ಲಾ ಒರಿಜಿನಲ್ ಹಿಂದುಗಳು ಅವರ ಜೊತೆಗೆ ಇದ್ದಾರೆ. ಐಡಿಯಾಲಜಿಕಲ್ ಡಿಫರನ್ಸ್ ಇರಬಹುದು. ಈ ರೀತಿ ಬೆದರಿಕೆ ಹಾಕೋದಕ್ಕೆ ಅರ್ಥ ಇರಲ್ಲ. ಯಾರು ಮಾಡಿದ್ದಾರೆ ಗೊತ್ತಿಲ್ಲ. ಈ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದವರು ಯಾರು? ಎರಡು-ಮೂರು ಬಾರಿ ಬ್ಯಾನ್ ಮಾಡಿದವರು ಯಾರು? ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟಾಚು ಮಾಡಿದ್ದಾರಲ್ಲ ಅವರೇ ಬ್ಯಾನ್ ಮಾಡಿದ್ದು. ಯಾಕ್ ಬ್ಯಾನ್ ಮಾಡಿದ್ದು ಅಂತ ಕೇಳಬೇಕು ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಒಬ್ಬ ಪ್ರಧಾನಿ ಜನ್ರಿಗೆ 10 ಸಾವಿರ ಕೊಟ್ಟು ಓಟು ಕೇಳುವ ನಿದರ್ಶನ ಇದೆಯೇನ್ರಿ? ಮೋದಿ ವಿರುದ್ಧ ಲಾಡ್ ವಾಗ್ದಾಳಿ

ನಮ್ಮತ್ತ ಬೆರಳು ಮಾಡಿ ಬೈದ್ರು ನಾವು ಹೆದರೋದಿಲ್ಲ. ನಾವು ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲ್ಲ. ವೈಯಕ್ತಿಕವಾಗಿ ನಾನು ಯಾರ ವಿರುದ್ಧವೂ ಮಾತನಾಡೋದಲ್ಲ, ಮಾತಾಡಿಲ್ಲ. ನಾನು ವಿಚಾರ ದೃಷ್ಟಿಯಿಂದ ಮಾತನಾಡ್ತೇನೆ. ವೈಯಕ್ತಿಕವಾಗಿ ಮಾತಾಡೋದು ಏನಿದೆ. ಇಲ್ಲಿಯವರೆಗೆ ಇಂಟರ್ ವ್ಯೂ ನಲ್ಲಿ ಯಾರಿಗಾದ್ರು ತಪ್ಪು ಮಾಡಿದ್ದು ತೋರ್ಸಿ ಎಂದು ಸವಾಲು ಹಾಕಿದರು. ಪ್ರಿಯಾಂಕ್ ಖರ್ಗೆ ಹೆದರೊ ಅವಶ್ಯಕತೆ ಇಲ್ಲ. ಅವರ ಜೊತೆ ಕಾಂಗ್ರೆಸ್ ಪಕ್ಷ, ಮುಸ್ಲೀಂ, ಸಿಖ್ ರು, ಒರಿಜಿನಲ್ ಹಿಂದುಗಳು ಅವರ ಜೊತೆಗಿದ್ದಿವಿ. ಬೇರೆ ಸಚಿವರಿಗೆ ಏನು ಬೆದರಿಕೆ ಬಂದಿಲ್ಲ, ಬಂದ್ರೆ ಹೇಳ್ತೇವೆ ಎಂದು ಹೇಳಿದ್ದಾರೆ ಎಂದರು.