ಮಲೆನಾಡಿಗೂ ಬಂದ್ಳು ಕೃತಕ ಸುಂದರಿ; ಸಹ್ಯಾದ್ರಿ ಟಿವಿ ಚಾನೆಲ್‌ಗೂ ಎಐ ನಿರೂಪಕಿ!
ದೇಶದಲ್ಲಿ ಸದ್ಯ ಕೃತಕ ಬುದ್ಧಿಮತ್ತೆಯ ನ್ಯೂಸ್ ಆ್ಯಂಕರ್‌ಗಳ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಕುವೆಂಪು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ಸೃಷ್ಟಿಸಿದ್ದಾರೆ.
ಶಿವಮೊಗ್ಗ (ಜು.18) ದೇಶದಲ್ಲಿ ಸದ್ಯ ಕೃತಕ ಬುದ್ಧಿಮತ್ತೆಯ ನ್ಯೂಸ್ ಆ್ಯಂಕರ್‌ಗಳ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಕುವೆಂಪು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ಸೃಷ್ಟಿಸಿದ್ದಾರೆ.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ಕೂಡಿಕೊಂಡು ನಡೆಸುವ ಸಹ್ಯಾದ್ರಿ ಚಾನೆಲ್‌ನಲ್ಲಿ ಮೊದಲ ಬಾರಿಗೆ ಗೀತಾ ಎಂಬ ಹೆಸರಿನ ಎಐ ನಿರೂಪಕಿಯ ಮೂಲಕ ನ್ಯೂಸ್ ಓದಿಸಲಾಗಿದೆ. ಜಿಲ್ಲೆಯಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ಬಿಬಂದಿಯ ಪ್ರಯತ್ನಕ್ಕೆ ಹಲವರು ಶಹಬ್ಬಾಸ್ ಎಂದಿದ್ದಾರೆ. ಅಪ್ಪಟ ಮಲೆನಾಡು ಭಾಷೆಯಲ್ಲಿ ಸುದ್ದಿ ಓದುವ ಕೃತಕ ಆ್ಯಂಕರ್ ಗೀತಾಳ ಕಾರ್ಯನಿರ್ವಹಣೆ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
AI ಬಂತು.. ಈ ಸ್ಟಾರ್ಟಪ್‌ನ ಶೇ. 90 ಜನರ ಕೆಲಸ ಹೋಯ್ತು: ನಿಮ್ಮ ಉದ್ಯೋಗಕ್ಕೂ ಕುತ್ತು ಬರ್ಬೋದು ಹುಷಾರ್!
ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ಸತ್ಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸಂಪಾದಕಾರದ ಕೆ.ಟಿ.ಸಿಂಧು, ಎಂ.ಮನೋಜ್, ಕೆ.ಶ್ವೇತಾ, ಎಸ್.ಭವಾನಿ, ಆರ್.ಸುಶ್ಮಿತಾ, ಬಿ.ಆರ್.ಪೂಜಾ ಹಾಗೂ ಆರ್.ಅಭಿಷೇಕ್ ಅವರು ಕೃತ ಬುದ್ಧಿಮತ್ತೆಯ ಈ ಪ್ರಯೋಗವನ್ನು ಸಾಕಾರಗೊಳಿಸಿದ್ದಾರೆ. ತಾಂತ್ರಿಕ ತಂಡದಲ್ಲಿ ಜಿ.ಪಿ.ವಿನಯ್, ಎನ್.ಜೆ.ಸಚಿನ್, ಎಸ್.ಸುನೀಲ್ ಹಾಗೂ ದೊರೆ ಅರಸ್ ಕೈ ಜೋಡಿಸಿದ್ದಾರೆ.
- ಸಹ್ಯಾದ್ರಿ ಚಾನೆಲ್‌ಗೆ ಕೃತಕ ಸುದ್ದಿ ನಿರೂಪಕಿ !
ಪರಿಸ್ಥಿತಿ ಎಲ್ಲಿಗ್ ಬಂತು ನೋಡಿ! ಮಕ್ಕಳಿಗೆ ಹೆಸ್ರಿಡೋಕೂ ChatGPT ಬೇಕು