200 ಎಕರೆ ಪ್ರತ್ಯೇಕ ಪಾರ್ಕ್:  ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕರ್ನಾಟಕವನ್ನು ರಕ್ಷಣೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶದ ರಾಜಧಾನಿಯನ್ನಾಗಿಸುವ ಗುರಿ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಕರ್ನಾಟಕ ರಕ್ಷಣಾ-ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶಕ್ಕೆ ರಾಜಧಾನಿಯಾಗಬೇಕು. ಅದಕ್ಕಾಗಿ 200 ಎಕರೆ ಪ್ರತ್ಯೇಕ ಪಾರ್ಕ್‌ ಸ್ಥಾಪಿಸಬೇಕು ಹಾಗೂ 100 ಎಕರೆಯಲ್ಲಿ ಏವಿಯಾನಿಕ್ಸ್‌ ಮತ್ತು ಸೆನ್ಸಾರ್‌ ಪಾರ್ಕ್‌ ಆರಂಭಿಸುವ ಕುರಿತು ಚಿಂತನೆಯಿದ್ದು, ಅದನ್ನು ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯದ ಕೈಗಾರಿಕಾ ವಲಯಗಳ ಭವಿಷ್ಯದ ಕುರಿತಂತೆ ಎಂ.ಬಿ.ಪಾಟೀಲ್‌ ಅವರು ಖನಿಜ ಭವನದಲ್ಲಿ ಏರೋಸ್ಪೇಸ್‌ ಮತ್ತು ರಕ್ಷಣೆ, ಮಶಿನ್‌ ಟೂಲ್ಸ್‌, ಆಟೋ-ಇವಿ ಮತ್ತು ಪರಿಸರ ಸ್ನೇಹಿ ಇಂಧನ ವಲಯಗಳ ವಿಷನ್‌ ಗ್ರೂಪ್‌ಗಳ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಎಂ.ಬಿ. ಪಾಟೀಲ್‌, ಕರ್ನಾಟಕವು ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಕ್ಷೇತ್ರಗಳಿಗೆ ಅಗತ್ಯವಾದ ಪರೀಕ್ಷಾ ಕೇಂದ್ರ ಮತ್ತು ಕಾಮನ್‌ ಫೆಸಿಲಿಟಿ ಸೆಂಟರ್‌ ಸ್ಥಾಪಿಸುವ ವಿಚಾರವಿದ್ದು, ಈ ಕುರಿತು ಅಗತ್ಯ ನೀಲಿನಕ್ಷೆ ಸಿದ್ಧಪಡಿಸಬೇಕು ಎಂದು ಹೇಳಿದರು.

ಬೆಂಗಳೂರು-ಮೈಸೂರು ನಡುವೆಯೂ ಕಾರಿಡಾರ್‌

 ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಧಾರವಾಡ-ವಿಜಯಪುರ-ಬೆಳಗಾವಿ ರಕ್ಷಣಾ ಕಾರಿಡಾರ್‌ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ಸರ್ಕಾರದ ಬಳಿ ಕೇಳಲಾಗಿದ. ಅವುಗಳ ಜತೆಗೆ ಬೆಂಗಳೂರು-ಮೈಸೂರು ನಡುವೆಯೂ ಕಾರಿಡಾರ್‌ಗೂ ಚಿಂತನೆ ನಡೆಸಲಾಗಿದೆ ಎಂದರು.

Scroll to load tweet…

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ಐಕೆಎಫ್‌ ಕಾರ್ಯನಿರ್ವಾಹಕ ಅಧಿಕಾರಿ ಜೋತ್ಸ್ನಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಉದ್ಯಮಿಗಳಾದ ಅಪ್ಪಾರಾವ್‌ ವೆಂಕಟ ಮಲ್ಲವರಪು, ಜೀವೀಶ್‌ ಗುರುಮೂರ್ತಿ ಇತರರಿದ್ದರು.

Scroll to load tweet…