Asianet Suvarna News Asianet Suvarna News

ಪರಿಸ್ಥಿತಿ ಎಲ್ಲಿಗ್ ಬಂತು ನೋಡಿ! ಮಕ್ಕಳಿಗೆ ಹೆಸ್ರಿಡೋಕೂ ChatGPT ಬೇಕು

ಮಕ್ಕಳ ಹೆಸರು ನಮ್ಮ ಭಾವನೆ ಜೊತೆ ಥಳುಕು ಹಾಕಿಕೊಂಡಿದೆ. ಎಷ್ಟೋ ಆಲೋಚನೆ ಮಾಡಿ, ಮನಸ್ಸಿಗೆ ಇಷ್ಟವಾಗುಚವ ಹೆಸರನ್ನು ಇಡ್ತೇವೆ. ಆದ್ರೆ ಕಾಲ ಬದಲಾಗಿದೆ. ಜನರು ಟ್ರೆಂಡ್ ಕೇಳ್ತಿದ್ದಾರೆ. ಸ್ವಂತ ಆಲೋಚನೆಗಿಂತ ಕೃತಕ ಬುದ್ಧಿಮತ್ತೆ ಮೇಲೆ ಹೆಚ್ಚು ಅವಲಂಬಿತರಾಗ್ತಿದ್ದಾರೆ. 
 

Parents Turn To Chatgpt For Babys Name artificial intelligence usage roo
Author
First Published Jul 5, 2023, 3:36 PM IST

ಹೆಸರಿನಲ್ಲೇನಿದೆ ಅಂತಾ ಕೆಲವರು ನಿಮ್ಮನ್ನು ಪ್ರಶ್ನೆ ಮಾಡ್ಬಹುದು, ಆದ್ರೆ ಹೆಸರಿನಲ್ಲಿ ಸಾಕಷ್ಟಿದೆ ಅಂತಾ ನಾವು ಹೇಳ್ತೇವೆ. ಒಬ್ಬ ವ್ಯಕ್ತಿಯನ್ನು ಕರೆಯುವಾಗ ಆತನ ಹೆಸರು ಮುಖ್ಯವಾಗುತ್ತದೆ. ಕರೆಯಲು, ಬರೆಯಲು ಕಷ್ಟವಾಗುವ ಹೆಸರಿಟ್ರೆ ಅಥವಾ ವಿಚಿತ್ರ ಅರ್ಥ ನೀಡುವ ಹೆಸರಿಟ್ರೆ ಮಕ್ಕಳು ಎಲ್ಲರ ಮುಂದೆ ಜೋಕರ್ ಗಳಾಗ್ತಾರೆ. ಮಕ್ಕಳಿಗೆ ನಾಮಕರಣ ಮಾಡುವ ಮೊದಲು ನೂರಾರು ಬಾರಿ ಪಾಲಕರು ಆಲೋಚನೆ ಮಾಡ್ಬೇಕು. ಈ ಹೆಸರು ಮಕ್ಕಳಿಗೆ ಶಾಶ್ವತವಾಗಿರುತ್ತದೆ. ಮಕ್ಕಳು ವಯಸ್ಸಾದ್ಮೇಲೆ ಆ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಆದ್ರೆ ಪಾಲಕರಿಟ್ಟ ಹೆಸರು ಯಾವಾಗ್ಲೂ ವಿಶೇಷವಾಗಿರುತ್ತದೆ.

ಹಿಂದೆ ಜಾತಕ (Horoscope) ನೋಡಿ ಅದ್ರಲ್ಲಿ ಬಂದ ಅಕ್ಷರದಿಂದ ನಾಮಕರಣ ಮಾಡ್ತಿದ್ದರು. ಅಜ್ಜ, ಅಜ್ಜಿ, ಮುತ್ತಜ್ಜಿ ಹೆಸರು (Name) ಗಳನ್ನು ಮೊಮ್ಮಕ್ಕಳಿಗೆ ಇಟ್ಟು ಕೈತೊಳೆದುಕೊಳ್ತಿದ್ದರು. ಆದ್ರೆ ಈಗ ಜಗತ್ತು ಬದಲಾಗಿದೆ. ಹಿಂದೆ ಪುಸ್ತಕ ನೋಡಿ, ಸ್ನೇಹಿತರನ್ನು ವಿಚಾರಿಸಿ ಒಂದು ಹೆಸರನ್ನು ಆಯ್ಕೆ ಮಾಡ್ತಿದ್ದ ಜನರು ಈಗ ಕೃತಕ ಬುದ್ದಿಮತ್ತೆ (Artificial intelligence ) ಮೊರೆ ಹೋಗ್ತಿದ್ದಾರೆ.  ಚಾಟ್‌ಜಿಪಿಟಿಯ ಆಗಮನದ ನಂತರ ಜಗತ್ತು ಬದಲಾಗಿದೆ. ಎಲ್ಲ ಪ್ರಶ್ನೆಗಳಿಗೂ ಚಾಟ್‌ಜಿಪಿಟಿಯಲ್ಲಿ ಉತ್ತರ ಹುಡುಕುವ ಜನರು ಹೆಸರು ಬಿಡ್ತಾರಾ?. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಹೆಸರನ್ನು ಚಾಟ್‌ಜಿಪಿಟಿಯಲ್ಲಿ ಹೇಗೆ ಪತ್ತೆ ಮಾಡಿದೆ ಎಂದು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ.

ಸ್ನೇಹ ಪರಿಶುದ್ಧವಾಗಿರ್ಬೇಕು! ವಿಷಜಂತುಗಳಿಂದ ದೂರವಿದ್ದು, ಹಗುರವಾಗಿರಿ!

ರೆಡ್ಡಿಟ್ ನಲ್ಲಿ ಈ ವಿಷ್ಯವನ್ನು ಮಹಿಳೆ ಹಂಚಿಕೊಂಡಿದ್ದಾಳೆ. ನಾನು ಇಷ್ಟಪಡುವ ಮಗುವಿನ ಹೆಸರನ್ನು ಹೇಳುವಂತೆ ಮಹಿಳೆ ಚಾಟ್‌ಜಿಪಿಟಿ ಗೆ ಪ್ರಶ್ನೆ ಮಾಡಿದ್ದಾಳೆ. ತನ್ನ ಅಭಿರುಚಿಯನ್ನು ಎಐ ಮುಂದೆ ಹೇಳಿದ ಮಹಿಳೆ, ನಾನು ಕೊನೆ ಹೆಸರನ್ನು ಮೊದಲು ಹೆಸರಾಗಿಡಲು ಬಯಸ್ತೇನೆ ಅಂದಿದ್ದಾಳೆ. ಆಗ ಚಾಟ್‌ಜಿಪಿಟಿ 20 ಹೆಸರುಗಳ ಪಟ್ಟಿ ನೀಡಿದೆ. ಆದ್ರೆ ಇದ್ರಲ್ಲಿರುವ ಹೆಸರು, ಮಹಿಳೆ ಬಯಸಿದ್ದಕ್ಕಿಂತ ಹೆಚ್ಚು ಆಕರ್ಷಕವಾಗಿತ್ತಂತೆ. ಹಾಗಾಗಿ ಮತ್ತೊಮ್ಮೆ ಚಾಟ್‌ಜಿಪಿಟಿಗೆ ಮಹಿಳೆ ಪ್ರಶ್ನೆ ಮಾಡಿದ್ದಾಳೆ. ರೇಗನ್ ಮತ್ತು ಬ್ರೂಕ್ಸ್ ನನ್ನ ಇಬ್ಬರು ಮಕ್ಕಳ ಹೆಸರಾಗಿದ್ದು, ಅದಕ್ಕೆ ಹೊಂದುವ ಹೆಸರು ಸೂಚಿಸುವಂತೆ ಮಹಿಳೆ ಚಾಟ್‌ಜಿಪಿಟಿಗೆ ತಿಳಿಸಿದ್ದಾಳೆ. ಆಗ ಚಾಟ್‌ಜಿಪಿಟಿ ಮತ್ತೊಂದಿಷ್ಟು ಹೆಸರಿನ ಪಟ್ಟಿ ನೀಡಿದೆ. ನಾನು ಅದ್ರಲ್ಲಿ ಆಯ್ಕೆ ಮಾಡಿಕೊಳ್ತಿದ್ದೇನೆ ಎಂದ ಮಹಿಳೆ, ನಿಮಗೆ ಅಗತ್ಯವಿದ್ದಲ್ಲಿ ನಾನು ಅದನ್ನು ಹಂಚಿಕೊಳ್ಳಲು ಬಯಸ್ತೇನೆ ಎಂದಿದ್ದಾಳೆ. ಬರೀ ಈ ಮಹಿಳೆ ಮಾತ್ರವಲ್ಲ, ಚಾಟ್‌ಜಿಪಿಟಿ ಮೂಲಕ ಅನೇಕರು ತಮ್ಮ ಮಕ್ಕಳಿಗೆ ಹೆಸರು ಹುಡುಕಿದ್ದಾರೆ. ಕೆಲವರಿಗೆ ಮಕ್ಕಳಿಗಿಡಲು ಸೂಕ್ತ ಹೆಸರು ಸಿಕ್ಕಿದ್ರೆ ಮತ್ತೆ ಕೆಲವರು ನಿರಾಸೆಗೊಡಿದ್ದಾಳೆ. ಮಹಿಳೆ ಈ ವಿಷ್ಯ ಪೋಸ್ಟ್ ಮಾಡ್ತಿದ್ದಂತೆ ಕಮೆಂಟ್ ನಲ್ಲಿ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕೂಲ್ ಸ್ವಭಾವದವರು ನೀವಾಗಿದ್ದರೆ, ಈ ತಪ್ಪು ಯಾವತ್ತೂ ಮಾಡೋಲ್ಲ!

ಪತಿ – ಪತ್ನಿ ಗಲಾಟೆಗೆ ಕಾರಣವಾಗಿತ್ತು ಚಾಟ್‌ಜಿಪಿಟಿ ನೀಡಿದ ಹೆಸರು : ಕೆಲ ದಿನಗಳ ಹಿಂದೆ ಚಾಟ್‌ಜಿಪಿಟಿ ನೀಡಿದ ಹೆಸರು, ಪತಿ – ಪತ್ನಿ ಗಲಾಟೆಗೆ ಕಾರಣವಾಗಿದ್ದ ಸುದ್ದಿ ವೈರಲ್ ಆಗಿತ್ತು. ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ. ಪತ್ನಿಯೊಬ್ಬಳು, ಮಗುವಿಗೆ ಹೆಸರು ಹುಡುಕುವಂತೆ ಪತಿಗೆ ಕೇಳಿದ್ದಾಳೆ. ಆಲಸಿ ಪತಿ, ಚಾಟ್ ಜಿಪಿಟಿ ಮೊರೆ ಹೋಗಿದ್ದಾನೆ. ಈ ವಿಷ್ಯ ಪತ್ನಿಗೆ ಗೊತ್ತಾಗಿ ಗಲಾಟೆ ಮಾಡಿದ್ದಾಳೆ. ಮಗುವಿನ ಅಪ್ಪ ಯಾರು, ನೀನಾ ಇಲ್ಲ  ಚಾಟ್‌ಜಿಪಿಟಿಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಆಕೆ, ಪತಿ ಎರಡು ಬಾರಿ ಚಾಟ್‌ಜಿಪಿಟಿನಲ್ಲಿ ಮಗುವಿನ ಹೆಸರು ಕೇಳಿದ್ದಾನೆ. ಅದ್ಯಾವುದೂ ನನಗೆ ಇಷ್ಟವಾಗಿರಲಿಲ್ಲ. ಮಕ್ಕಳಿಗೆ ಹೆಸರಿಡುವುದು ಸಾರ್ಥಕ ಹಾಗೂ ಮಹತ್ವದ ಕೆಲಸ. ಆದ್ರೆ ಆ ಹೆಸರನ್ನು ಚಾಟ್‌ಜಿಪಿಟಿಗೆ ಕೇಳುವುದು ಸೂಕ್ತವಲ್ಲವೆಂದು ಆಕೆ ಹೇಳಿದ್ದಳು.  

Follow Us:
Download App:
  • android
  • ios