Bengaluru: AI ಬಂತು.. ಈ ಸ್ಟಾರ್ಟಪ್‌ನ ಶೇ. 90 ಜನರ ಕೆಲಸ ಹೋಯ್ತು: ನಿಮ್ಮ ಉದ್ಯೋಗಕ್ಕೂ ಕುತ್ತು ಬರ್ಬೋದು ಹುಷಾರ್!

ಬೆಂಗಳೂರಿನ ಟೆಕ್ ಸ್ಟಾರ್ಟ್‌ಅಪ್‌ನ ಸಿಇಒ ಒಬ್ಬರು ತಮ್ಮ ಸಂಸ್ಥೆಯಲ್ಲಿ ಶೇ. 90 ರಷ್ಟು ಸಿಬ್ಬಂದಿ ವಜಾ ಮಾಡಿರುವ ಬಗ್ಗೆ ಟ್ವೀಟ್‌ ಮಾಡಿ ಇದರಿಂದ ಆಗಿರುವ ಲಾಭದ ಬಗ್ಗೆ ಬರೆದುಕೊಂಡಿದ್ದಾರೆ.

bengaluru tech startup founder slammed for twitter post celebrating 90 percent layoffs ash

ಬೆಂಗಳೂರು (ಜುಲೈ 13, 2023): ಇತ್ತೀಚೆಗೆ ಎಲ್ಲೆಲ್ಲೂ ಕೃತಕ ಬುದ್ದಿಮತ್ತೆಯ ಕಾಲ. ಮಾಧ್ಯಮ ಕ್ಷೇತ್ರಕ್ಕೂ ಎಐ (AI) ಕಾಲಿಟ್ಟಿದೆ. ಇದರಿಂದ ಈಗಾಗಲೇ ಉದ್ಯೋಗ ನಷ್ಟವಾಗುತ್ತಿದೆ. ಅಲ್ಲದೆ, ಇದರಿಂದ ಕೋಟ್ಯಂತರ ಜನರ ಉದ್ಯೋಗ ನಾಶವಾಗಬಹುದೆಂಬ ಭೀತಿಯೂ ಕಾಡುತ್ತಿದೆ. ಇದೇ ರೀತಿ, ಬೆಂಗಳೂರಿನ ಟೆಕ್‌ ಸ್ಟಾರ್ಟಪ್‌ ಕಂಪನಿಯೊಂದು ಶೇ. 90 ಉದ್ಯೋಗಿಗಳನ್ನು ಕಿತ್ತುಹಾಕಿರುವ ಬಗ್ಗೆ ಹಾಗೂ ಎಐ ಚಾಟ್‌ಬಾಟ್‌ ಆ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಬೆಂಗಳೂರಿನ ಟೆಕ್ ಸ್ಟಾರ್ಟ್‌ಅಪ್‌ನ ಸಿಇಒ ಒಬ್ಬರು ತಮ್ಮ ಸಂಸ್ಥೆಯಲ್ಲಿ ಶೇ. 90 ರಷ್ಟು ಸಿಬ್ಬಂದಿ ವಜಾ ಮಾಡಿರುವ ಬಗ್ಗೆ ಟ್ವೀಟ್‌ ಮಾಡಿದ್ದು, ಈ ಹಿನ್ನೆಲೆ ಟೀಕೆಗೆ ಒಳಗಾಗಿದ್ದಾರೆ. ವ್ಯಾಪಾರಿಗಳು ತಮ್ಮ ಇ-ಕಾಮರ್ಸ್ ಮಳಿಗೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ದುಕಾನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸುಮಿತ್ ಶಾ ಸೋಮವಾರ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. AI- ಶಕ್ತಗೊಂಡ ಚಾಟ್‌ಬಾಟ್‌ನಿಂದಾಗಿ ಸಪೋರ್ಟ್‌ ಟೀಂನಲ್ಲಿ  90 ಪ್ರತಿಶತ ಸಿಬ್ಬಂದಿ ವಜಾಗೊಳಿಸಬೇಕಾಯಿತು. ಇದರಿಂದ ಕಂಪನಿಗೆ ಲಾಭವಾಯಿತು ಎದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ಅವಿವಾಹಿತ ಪುರುಷರಿಗೆ ಶಾಕಿಂಗ್ ನ್ಯೂಸ್‌: AI ಮೂಲಕ ಸೃಷ್ಟಿಯಾದ ವ್ಯಕ್ತಿಯನ್ನೇ ಮದ್ವೆಯಾದ ಮಹಿಳೆ!

ಚಾಟ್‌ಬಾಟ್‌ನೊಂದಿಗೆ ಜನರಿಗೆ ಮೊದಲ ಪ್ರತಿಕ್ರಿಯೆ ನೀಡಲು ಸಮಯ ಕಡಿಮೆ ಮಾಡಲು ಸಾಧ್ಯವಾಯಿತು.  1 ನಿಮಿಷ ಮತ್ತು 44 ಸೆಕೆಂಡ್‌ಗಳ ಸಮಯದಿಂದ ತತ್‌ಕ್ಷಣಕ್ಕೆ ಬಂದಿದೆ. ಮತ್ತು ಇದರಿಂದ ನಮ್ಮ ವೆಚ್ಚವೂ ಶೇಕಡಾ 85 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಹಾಗೂ, ಈ.ಟ್ವಿಟ್ಟರ್‌ ಥ್ರೆಡ್‌ನಲ್ಲಿ, ಗ್ರಾಹಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ AI ಚಾಟ್‌ಬಾಟ್‌ನ ಕಲ್ಪನೆಯನ್ನು ನಾವು ಹೇಗೆ ಜಾರಿಗೆ ತಂದೆವು ಎಂಬುದನ್ನು ಅವರು ವಿವರಿಸಿದ್ದಾರೆ.

ಆದರೆ ಸುಮಿತ್‌ ಶಾ ಅವರ ಟ್ವೀಟ್‌ಗೆ ಬಹುತೇಕ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು "ಸೂಕ್ಷ್ಮವಲ್ಲ" ಎಂದು ನೆಟ್ಟಿಗರು ಪರಿಗಣಿಸಿದ್ದು ಮತ್ತು "ವಜಾಗೊಳಿಸುವಿಕೆಯನ್ನು ಸಾರ್ವಜನಿಕವಾಗಿ ಸಂಭ್ರಮಿಸುತ್ತಿದ್ದಾರೆ" ಎಂದೂ ಆರೋಪಿಸಿದರು. ಅಲ್ಲದೆ, 90% ವಜಾಗೊಳಿಸುವಿಕೆಯ ವಿರುದ್ಧವೂ ಮಾತನಾಡಿದ್ದಾರೆ. ಬಳಕೆದಾರರೊಬ್ಬರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ, "ನಿರೀಕ್ಷಿಸಿದಂತೆ, ವಜಾಗೊಳಿಸಲಾದ 90% ಸಿಬ್ಬಂದಿಯ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಅವರಿಗೆ ಯಾವ ನೆರವು ನೀಡಲಾಯಿತು?’’ ಎಂದು ಬಳಕೆದಾರ ಕಾಮೆಂಟ್‌ ಮಾಡಿದ್ದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: AI ಎಫೆಕ್ಟ್‌: ನೀವ್‌ ಆರ್ಡರ್‌ ಮಾಡದಿದ್ರೂ ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಟೇಬಲ್‌ಗೆ ಬರುತ್ತೆ ಪಿಜ್ಜಾ!

ಇದಕ್ಕೆ ಬಳಕೆದಾರರಿಗೆ ಪ್ರತಿಕ್ರಿಯೆ ನೀಡಿದ ಸುಮಿತ್ ಶಾ, ವಜಾಗೊಳಿಸಿದ ಉದ್ಯೋಗಿಗಳ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿದರು. ಅಲ್ಲದೆ, ಇದಕ್ಕೆ ಮತ್ತೊಂದು ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನನ್ನ ಸ್ನೇಹಿತ, ನಾನು ಲಿಂಕ್ಡ್‌ಇನ್‌ನಲ್ಲಿ ಸಹಾಯದ ಕುರಿತು ಪೋಸ್ಟ್ ಮಾಡಿದಾಗ ಅಲ್ಲಿ ನೋಡಿ. ಟ್ವಿಟ್ಟರ್‌ನಲ್ಲಿ ಜನರು "ಲಾಭದಾಯಕತೆ" ಅನ್ನು ನೋಡುತ್ತಾರೆ, "ಸಹಾನುಭೂತಿ" ಅಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ - "ಇದು ಕಠಿಣ ನಿರ್ಧಾರ," ಎಂದೂ ಅವರು ಬರೆದಿದ್ದಾರೆ.

ಆದರೂ, ಮತ್ತೊಬ್ಬರು ನೆಟ್ಟಿಗರು “ಡ್ಯೂಡ್, ನೀವು ನಿಮ್ಮ ಸಪೋರ್ಟ್‌ ತಂಡದ 90% ರಷ್ಟು ಜೀವನವನ್ನು ಅಡ್ಡಿಪಡಿಸಿದ್ದೀರಿ ಮತ್ತು ನೀವು ಅದನ್ನು ಸಾರ್ವಜನಿಕವಾಗಿ ಸೆಲಬ್ರೇಟ್‌ ಮಾಡುತ್ತಿದ್ದೀರಿ. ನಿಮ್ಮ ಗ್ರಾಹಕ ಬೆಂಬಲವನ್ನು ಸಹ ನೀವು ನಾಶಪಡಿಸಿದ್ದೀರಿ (ಬಾಟ್‌ಗಾಗಿ ಉತ್ತಮ CSAT ನೊಂದಿಗೆ ನಿರಾಕರಿಸಿ) - ಎಲ್ಲವೂ ಮೂಲಭೂತ ChatGPT ರ್ಯಾಪರ್‌ಗಾಗಿ. ಇದು ನಿಮಗೂ ಸರಿಯಲ್ಲ,” ಎಂದೂ ಮತ್ತೊಬ್ಬರು ಹೇಳಿದರು.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್‌ : ಗೂಗಲ್‌ನಿಂದ ಹೊರಬಂದ AI ಜನಕ

ಇನ್ನೊಬ್ಬ ವ್ಯಕ್ತಿ “ಆದರೆ ನಾವು ಅವರೆಲ್ಲರನ್ನೂ ಹೇಗೆ ವಜಾಗೊಳಿಸಬಹುದು? ಉಳಿದ 10% ಬಗ್ಗೆ ಏನು?’’ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮತ್ತೊಬ್ಬ ಬಳಕೆದಾರ, "ನಾವು ಗ್ರಾಹಕರನ್ನು ಬಾಟ್‌ಗಳೊಂದಿಗೆ ಬದಲಾಯಿಸೋದು ಹೇಗೆ?" ಎಂದು ವ್ಯಂಗ್ಯಭರಿತವಾಗಿ ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: 5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್‌ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

Latest Videos
Follow Us:
Download App:
  • android
  • ios