Asianet Suvarna News Asianet Suvarna News

'ಬ್ರಾಹ್ಮಣ ಸಭಾಗೆ ಅಶೋಕ್‌ ಹಾರನಹಳ್ಳಿ ರಾಜೀನಾಮೆ ನೀಡಲಿ'

  • ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ವಿರುದ್ಧ ವಂಚನೆ ಆರೋಪ
  • ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯ
KN venkatanarayana Demands For ashok haranahalli resignation to Brahmana Mahasabha snr
Author
Bengaluru, First Published Oct 16, 2021, 12:16 PM IST
  • Facebook
  • Twitter
  • Whatsapp

 ಬೆಂಗಳೂರು (ಅ.16):  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ (Brahmana Mahasabha) ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್‌ ಜನರಲ್‌ (Advocate general) ಅಶೋಕ್‌ ಹಾರನಹಳ್ಳಿ (Ashok Harnalli) ವಿರುದ್ಧ ವಂಚನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ (Resignation) ನೀಡಬೇಕು ಎಂದು ಮಹಾಸಭಾ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಕೆ.ಎನ್‌. ವೆಂಕಟನಾರಾಯಣ (KN Venkatanarayana) ಒತ್ತಾಯಿಸಿದ್ದಾರೆ.

ಛತ್ತೀಸಗಢ: ಬ್ರಾಹ್ಮಣರ ಅವಹೇಳನ ಕೇಸಲ್ಲಿ ಸಿಎಂ ತಂದೆ ಬಂಧನ

ವಿಪ್ರನುಡಿ ಮಾಜಿ ಸಂಪಾದಕರೂ ಆಗಿರುವ ವೆಂಕಟನಾರಾಯಣ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಹಾಸನದ (hassan) ಮಲ್ನಾಡ್‌ ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಮತ್ತು ಇತರೆ ಐವರು ಪದಾಧಿಕಾರಿಗಳ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಕೊಲೆ ಬೆದರಿಕೆ ಆರೋಪ ಸಂಬಂಧ ಭಜರಂಗದಳದ ಜಿಲ್ಲಾಧ್ಯಕ್ಷ ಹೇಮಂತ್‌ ಕುಮಾರ್‌ (Hemanth Kumar) ದೂರು ದಾಖಲಿಸಿದ್ದಾರೆ. 

ಅದರ ವಿಚಾರಣೆ ನಡೆಸಿರುವ ಹಾಸನದ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು (JMFC court) ದೂರು ಕುರಿತು ವರದಿ ಸಲ್ಲಿಸುವಂತೆ ಪೋಲೀಸರಿಗೆ (Police) ಆದೇಶಿಸಿದ್ದಾರೆ. ಆದ್ದರಿಂದ ತಮ್ಮ ಮೇಲೆ ಆರೋಪಗಳು ಕೇಳಿ ಬಂದಿರುವ ಕಾರಣ ನೈತಿಕ ಹೊಣೆ ಹೊತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್‌ ಹಾರನಹಳ್ಳಿ ಅವರು ರಾಜೀನಾಮೆ (Resignation) ನೀಡಬೇಕು ಎಂದು ಕೆ.ಎನ್‌.ವೆಂಕಟನಾರಾಯಣ ಒತ್ತಾಯಿಸಿದ್ದಾರೆ.

ಸದಸ್ಯರಿಗೆ ಹೆಲ್ತ್ ಕಾರ್ಡ್

 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ   ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರ್ನಳ್ಳಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಸದಸ್ಯರುಗಳಿಗೆ ವಿಶೇಷವಾಗಿ ಹೊರತಂದಿರುವ ಯುನೈಟೆಡ್‌ ಆಸ್ಪತ್ರೆ ಹೆಲ್ತ್‌ಕಾರ್ಡನ್ನು ನೀಡಿದ್ದರು.  ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಹೆಲ್ತ್‌ಕಾರ್ಡ್‌ ಸೌಲಭ್ಯವನ್ನು ಬ್ರಾಹ್ಮಣ ಮಹಾಸಭಾದ ಸದಸ್ಯರುಗಳಿಗೆ ನೀಡಲಾಗಿತ್ತು.

'ಸ್ವಾಮೀಜಿಗಳಿಂದ BSY ಭೇಟಿ ಬ್ರಾಹ್ಮಣ್ಯವನ್ನು ಬಲಗೊಳಿಸುತ್ತದೆ'

ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿಕ್ರಮ್‌ ಸಿದ್ದಾರೆಡ್ಡಿ, ಈ ಹೆಲ್ತ್‌ಕಾರ್ಡ್‌ ಮೂಲಕ ಸದಸ್ಯರು ಹಾಗೂ ಅವರ ಕುಟುಂಬದವರು ತಮ್ಮ ಆರೋಗ್ಯದ ಹಲವಾರು ಅವಶ್ಯಕತೆಯನ್ನು ಅತಿಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಇಸಿಜಿ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ಲ್ಯಾಬೋರೇಟರಿ ಪರೀಕ್ಷೆಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಕನ್ಸ್‌ಲ್ಟೇಶನ್‌ನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

Follow Us:
Download App:
  • android
  • ios