* ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸುದ್ದಿ* ಸಿಎಂ ಭೇಟಿ ಮಾಡಿದ ಸ್ವಾಮೀಜಿಗಳು* ಸ್ವಾಮೀಜಿಗಳ ಭೇಟಿ ಬಗ್ಗೆ ನಟ ಚೇತನ್ ಪ್ರತಿಕ್ರಿಯೆ* ಈ  ಮಠಗಳು ಸಮಾತಾವಾದಿ ನೀತಿಗಳಿಂದ ದೂರವಿರುತ್ತವೆ ಮತ್ತು ಬ್ರಾಹ್ಮಣ್ಯವನ್ನು ಬಲಗೊಳಿಸುತ್ತವೆ'. 

ಬೆಂಗಳೂರು(ಜು. 21)ಒಂದು ಕಡೆ ನಾಯಕತ್ವ ಬದಲಾವಣೆ, ಸಿಎಂ ಬದಲಾವಣೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ ಇನ್ನೊಂದು ಕಡೆ ನಟ ಚೇತನ್ ಅಹಿಂಸಾ ಇದನ್ನು ತಮ್ಮದೇ ರೀತಿ ವ್ಯಾಖ್ಯಾನಿಸಿದ್ದಾರೆ.

ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಮತ್ತೆ ಬ್ರಾಹ್ಮಣ್ಯದ ಪ್ರಶ್ನೆ ಎತ್ತಿದ್ದಾರೆ. ಚೇತನ್ ಸೋಶಿಯಲ್ ಮೀಡಿಯಾ ಪೋಸ್ಟ್ ನ್ನು ಯಥಾವತ್ ಆಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಚೇತನ್ ಪೋಸ್ಟ್ ಹಂಚಿಕೊಂಡಿದ್ದಾರೆ. 

ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ

'ಲಿಂಗಾಯತ ಮಠಗಳ ಅನೇಕ ಪ್ರಮುಖರು ಯಡಿಯೂರಪ್ಪ ರವರನ್ನ ಭೇಟಿಯಾಗಿದ್ದಾರೆ, ಹಾಗೂ ಯಡ್ಡಿಯೂರಪ್ಪ ರವರನ್ನ CM ಸ್ಥಾನದಿಂದ ಇಳಿಸಿದರೆ ಎಚ್ಚರಿಕೆ' ಎನ್ನುವ ಬೆದರಿಕೆಯನ್ನು ಶಾಸನಕ್ಕೆ ನೀಡಿದ್ದಾರೆ. 

ಇವರ ದೃಷ್ಟಿಕೋನ ಮತ್ತು ಕಾಳಜಿ ಇರುವುದು ಕೇವಲ ಜಾತಿ/ಸಮುದಾಯಗಳ ಸ್ವಾರ್ಥವನ್ನು ಉಳಿಸಿಕೊಳ್ಳುವುದು ಮಾತ್ರವಾಗಿದೆ ಹೊರತು ಬಸವ/ಶರಣರ ಸಿದ್ದಾಂತದಂತೆ ಜೀವಿಸುವುದಲ್ಲ. ಈ ಮಠಗಳು ಸಮಾತಾವಾದಿ ನೀತಿಗಳಿಂದ ದೂರವಿರುತ್ತವೆ ಮತ್ತು ಬ್ರಾಹ್ಮಣ್ಯವನ್ನು ಬಲಗೊಳಿಸುತ್ತವೆ'.