- Home
- Entertainment
- Sandalwood
- ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
ನಟಿ ಮೇಘನಾ ರಾಜ್ ಅವರು ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಸಂಗಾತಿಯ ಅಗತ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬರಿಗೂ ಕಷ್ಟ-ಸುಖ ಹಂಚಿಕೊಳ್ಳಲು ಒಬ್ಬ ಜೊತೆಗಾರ ಬೇಕು ಎಂದಿರುವ ಅವರು, ತಮ್ಮ ತಂದೆ ಸುಂದರ ರಾಜ್ ಅವರ ಆಶಯದಂತೆಯೇ ಸಹಬಾಳ್ವೆಯ ಕುರಿತು ಸಕಾರಾತ್ಮಕ ಸೂಚನೆ ನೀಡಿದ್ದಾರೆ.

ಮನದ ಮಾತು
'ಪ್ರತಿಯೊಬ್ಬರಿಗೂ ಸಂಗಾತಿ ಬೇಕು, ಆತ ಗಂಡನಾಗಿಯೇ ಅಂತಲ್ಲ, ಆದರೆ ಜೊತೆಗಾರನಾಗಿ ಇರಬೇಕು. ಒಂದು ಗಂಡಿಗೆ ಒಂದು ಹೆಣ್ಣು ಹೌದಾದರೂ, ಎಲ್ಲಾ ಸಂದರ್ಭದಲ್ಲಿಯೂ ಅದು ಹಾಗೆಯೇ ಆಗಬೇಕೆಂದೇನೂ ಇಲ್ಲ.ಕೊನೆ ಪಕ್ಷ ನಮ್ಮ ಕಷ್ಟ-ಸುಖ ಮಾತನಾಡಲು ಆದರೂ ಜೊತೆಗಾರ ಬೇಕು ಎನ್ನುವ ಮೂಲಕ ನಟಿ ಮೇಘನಾ ರಾಜ್ ಇದೇ ಮೊದಲ ಬಾರಿಗೆ ತಮ್ಮ ಜೀವನದ ಅತಿ ದೊಡ್ಡ ನಿರ್ಧಾರದ ಬಗ್ಗೆ ಓಪನ್ ಆಗಿ ಮನದ ಮಾತುಗಳನ್ನು ಹೇಳುವ ಮೂಲಕ, ಅವರ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ. Rayane Mithun ಎನ್ನುವ ಇಂಗ್ಲಿಷ್ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಹೇಳಿದ್ದಾರೆ.
ಮದುವೆಯ ಬಗ್ಗೆ ಪ್ರಶ್ನೆ
ಇದಾಗಲೇ ಮೇಘನಾ ರಾಜ್ ಅವರಿಗೆ ಮದುವೆಯ ಬಗ್ಗೆ ಹಲವಾರು ರೀತಿಯ ಪ್ರಶ್ನೆಗಳು ಬರುತ್ತಲೇ ಇವೆ. ಚಿರು ನಿಧನರಾಗಿ ಆರು ವರ್ಷವಾಗುತ್ತಾ ಬಂದರೂ, ಮೇಘನಾ ಇದುವರೆಗೆ ತಮ್ಮ ಮತ್ತೊಂದು ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಈ ಹಿಂದೆ ನಟಿ ಮದುವೆಯಾಗುವುದೇ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಪ್ರೀತಿ ಕಂಡುಕೊಳ್ಳುವ ಬಗ್ಗೆ ಸದ್ಯ ಏನೂ ಮನಸ್ಸಿನಲ್ಲಿ ಇಲ್ಲ. ಬಹುಶಃ ಅದು ಮುಂದೆ ಬಂದರೂ ಬರಬಹುದು ಎಂದಿದ್ದರು.
ಆಗ ನಟಿ ಏನು ಹೇಳಿದ್ದರು?
ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ. ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಸದ್ಯ ಇನ್ನೊಂದು ಲವ್ ಬಗ್ಗೆ ನಾನು ಮಾನಸಿಕವಾಗಿ ರೆಡಿಯಾಗಿಲ್ಲ. ಹಾಗೆಂದು ಅದು ಆಗುವುದೇ ಇಲ್ಲವೆಂದೇನಲ್ಲ. ಮುಂದೊಮ್ಮೆ ಏನಾದರೂ ಈ ರೀತಿ ಚಾನ್ಸ್ ಬಂದರೆ, ಆ ಕ್ಷಣದಲ್ಲಿ ಏನು ನಿರ್ಧಾರ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಇನ್ನೊಂದು ಮದುವೆಯಾಗುವ ಸೂಚನೆ ಕೊಟ್ಟಿದ್ದರು. ಆದರೆ ಇದೀಗ ಓಪನ್ ಆಗಿ ಅದರ ಬಗ್ಗೆ ಮಾತನಾಡಿದ್ದಾರೆ.
ಅಪ್ಪನಿಗೂ ಅದೇ ಆಸೆ
ಕೆಲ ದಿನಗಳ ಹಿಂದೆ ಅವರ ತಂದೆ, ಹಿರಿಯ ನಟ ಸುಂದರ ರಾಜ್ ಅವರು, ಮಗಳು ಮದುವೆಯ ಬಗ್ಗೆ ಮಾತನಾಡಿದ್ದರು. ಆಯ್ಕೆ ಅವರದ್ದು. ಬದುಕು ನಡೆಸುವವರು ಅವರದ್ದು. ಆದ್ದರಿಂದ ಆಕೆಯ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಸಮಾಜಕ್ಕೆ ನಾವು ಮಾದರಿಯಾಗಿ ಬದುಕಬೇಕು. ಯಾರೂ ನಮ್ಮ ಬಗ್ಗೆ ತಪ್ಪಾಗಿ ಮಾತನಾಡಬಾರದು. ಇದರ ನಡುವೆಯೇ ಸುಂದರ ಬದುಕಿನ ಆಯ್ಕೆಯನ್ನೂ ಮಾಡಿಕೊಳ್ಳಬೇಕು ಎಂದಿದ್ದರು.
ಸಹಬಾಳ್ವೆಗೆ ಬೇಕು
ಪ್ರತಿಯೊಬ್ಬರಿಗೂ ಗಂಡಿಗೂ ಒಬ್ಬ ಹೆಣ್ಣು ಬೇಕು, ಹಾಗೆಯೇ ಹೆಣ್ಣಿಗೆ ಒಬ್ಬ ಗಂಡು ಬೇಕು. ಹಾಗೆಂದು ಇದು ದೈಹಿಕ ಸಂಬಂಧಕ್ಕೆ ಸೀಮಿತವಲ್ಲ. ಗಂಡ ಮತ್ತು ಹೆಣ್ಣಿನದ್ದು ಮಾನಸಿಕ ದೇವಸ್ಥಾನದ ಸಂಬಂಧವದು. ಆ ಒಂದು ಭಾವನೆಯಲ್ಲಿ ಬದುಕಬೇಕು. ಸಹಬಾಳ್ವೆ ಇರಬೇಕು. ಕೈಹಿಡಿದು ನಡೆಯಬೇಕು. ಗಂಡು ಮತ್ತು ಹೆಣ್ಣು ಎನ್ನುವುದು ದೈವ ನಿಯಮ, ಅದು ಪ್ರಕೃತಿ ನಿಯಮ. ಯಾರು ಒಬ್ಬರ ಮನಸ್ಸನ್ನು ನೋಯಿಸದೇ ಬದುಕಬೇಕು ಎನ್ನುವ ಮೂಲಕ ತಮ್ಮ ಮಗಳ ಬಾಳಿನಲ್ಲಿ ಮತ್ತೊಂದು ಜೀವ ಬರಲಿ ಎನ್ನುವ ಆಶಯವನ್ನು ಅಪ್ಪನಾಗಿ ಸುಂದರರಾಜ್ ಅವರದ್ದು. ಇದೀಗ ಮೇಘನಾ ಅವರು ಅದೇ ದಿಕ್ಕಿನಲ್ಲಿ ಸಾಗಿರುವ ಕಾರಣ ಫ್ಯಾನ್ಸ್ಗೆ ಖುಷಿ ತಂದಿದೆ.
ಮಗನ ಆರೈಕೆ
ಅಷ್ಟಕ್ಕೂ, ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಮಗ ರಾಯನ್ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. 2020ರ ಜೂನ್ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನಾ ರಾಜ್ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಬಹುತೇಕ ಅಭಿಮಾನಿಗಳ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

