ಶಿಕ್ಷಣ ನೀತಿ ಬದಲಾಗದೆ ದೇಶದ ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾಲಾ ಶಿಕ್ಷಣ ವ್ಯವಸ್ಥೆ ಊಳಿಗಮಾನ್ಯ ಪದ್ಧತಿಯತ್ತ ಸಾಗುತ್ತಿದ್ದು, ದಾರ್ಶನಿಕರ ವಿಚಾರಗಳು ಮೂಲೆಗುಂಪಾಗುತ್ತಿವೆ ಎಂದು ಅಭಿಪ್ರಾಯ.
- Home
- News
- State
- Karnataka News Live: ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು - ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ
Karnataka News Live: ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು - ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಗುರುವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಶವಯಾತ್ರೆ’ ನಡೆಸಲು ರಾಜ್ಯ ಬಿಜೆಪಿಯು ನಿರ್ಧರಿಸಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರ ವಿವಿಧ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರು. ಬಾಕಿ ಉಳಿಸಿಕೊಂಡಿದೆ. ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ಹಣವಿಲ್ಲದ ಪರಿಸ್ಥಿತಿಯಲ್ಲೂ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಖಂಡಿಸಿ ಪಕ್ಷದ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ‘ದಿವಾಳಿ ಸರ್ಕಾರದ ಶವಯಾತ್ರೆ’ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
Karnataka News Live ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು - ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ
Karnataka News Live ರಾಜ್ಯ ಸರ್ಕಾರದ ಆರ್ಥಿಕ ದಿವಾಳಿಗೆ ಬಿಜೆಪಿ ಖಂಡನೆ; ನಿನ್ನೆ ಚೊಂಬು ಚಳುವಳಿ, ಇಂದು ಶವಯಾತ್ರೆ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು 'ಖಾಲಿ ಚೊಂಬು' ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಹಣಕಾಸು ಇಲಾಖೆಯ ರಹಸ್ಯ ಪತ್ರವು ಸರ್ಕಾರದ ಆರ್ಥಿಕ ದುಸ್ಥಿತಿಯನ್ನು ಬಯಲಿಗೆಳೆದಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಗುರುವಾರ ರಾಜ್ಯಾದ್ಯಂತ 'ದಿವಾಳಿ ಸರ್ಕಾರದ ಶವಯಾತ್ರೆ' ನಡೆಸಲು ಬಿಜೆಪಿ ನಿರ್ಧರಿಸಿದೆ.