- Home
- News
- State
- Karnataka news live: ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು
Karnataka news live: ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು

ಬೆಂಗಳೂರು: ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಪುಟ ಪುನಾರಚನೆ ನಡೆಸುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಬೇಕು ಎಂದು ಹೈಕಮಾಂಡ್ಗೆ ಒತ್ತಾಯಿಸಲು ಸುಮಾರು 25 ಶಾಸಕರ ತಂಡ ಇಂದು ಭಾನುವಾರ ದೆಹಲಿಗೆ ತೆರಳಲಿದೆ. ಸಂಪುಟ ಪುನಾರಚನೆ ಮಾಡುವಂತೆ ಪಕ್ಷದಲ್ಲಿ ತೀವ್ರ ಒತ್ತಡವಿದ್ದು, ಹಿರಿಯ ಸದಸ್ಯರು ಸೇರಿ ವಿಧಾನ ಪರಿಷತ್ ಸದಸ್ಯರು, ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತ್ಯೇಕ ಸಭೆ ಮಾಡಿ ಸಂಪುಟ ಪುನಾರಚನೆ ಮಾಡಿ ತಮಗೆ ಸ್ಥಾನ ನೀಡಬೇಕೆಂದು ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು ಸೇರಿ ವಿವಿಧ ಕಾರಣಗಳಿಂದ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಹೈಕಮಾಂಡ್ ಮುಂದೂಡುತ್ತಾ ಬಂದಿದೆ.
Karnataka news live: ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು
Karnataka news live: 28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು
ನೆಲಮಂಗಲದಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ನೇಣಿಗೆ ಶರಣಾಗಿದ್ದಾರೆ. ವಿವಾಹಿತ ಮಹಿಳೆಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Karnataka news live: ದೇವರ ಮೇಲಿನ ನಂಬಿಕೆಯೇ ಹೋಗಿತ್ತು, ನಾನೇನು ತಪ್ಪು ಮಾಡಿದ್ದೆ? KS ಚಿತ್ರಾ ಮನದಾಳದ ಮಾತು
Karnataka news live: ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಎಐ ಬಳಕೆ - ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ವೈದ್ಯಕೀಯ ವೃತ್ತಿಪರರು ಸಹಾನುಭೂತಿ, ನೈತಿಕ ಮೌಲ್ಯಗಳು ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನು ಮರೆಯಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
Karnataka news live: ಗರಿಗರಿ ಮಸಾಲೆ ವಡೆ ತಯಾರಿಸಲು ಹೋಟೆಲ್‌ನವರು ಬಳಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ
Masala Vada Recipe: ಕಡಲೆಬೇಳೆ ವಡೆ. ಹೊರಗೆ ಗರಿಗರಿಯಾಗಿ, ಒಳಗೆ ಖಾರವಾಗಿ, ಬಿಸಿಬಿಸಿ ಚಹಾ ಜೊತೆ ಸವಿದರೆ ಬಾಯಲ್ಲಿ ನೀರೂರುತ್ತೆ. ದಕ್ಷಿಣ ಭಾರತೀಯರ ನೆಚ್ಚಿನ ಸ್ನ್ಯಾಕ್ಸ್ ಅಂದ್ರೆ ಅದು ಕಡಲೆಬೇಳೆ ವಡೆ. ಇದನ್ನು ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಮಾಡಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.
Karnataka news live: ಸಚಿವ ಸಂಪುಟ ಪುನರ್ ರಚಿಸಿ ಹೊಸಬರಿಗೆ ಅವಕಾಶ ಕೇಳುವುದು ತಪ್ಪಲ್ಲ - ಶಾಸಕ ಎ.ಎಸ್. ಪೊನ್ನಣ್ಣ
ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
Karnataka news live: Karnataka CET 2026 - ಸಿಇಟಿ-2026 ಪ್ರವೇಶ ಪತ್ರ ಬಿಡುಗಡೆ ಮಾಡಿದ ಪರೀಕ್ಷಾ ಪ್ರಾಧಿಕಾರ
Karnataka news live: ಗಮನಿಸಿ, ಮಂಗಳೂರು-ಚೆನ್ನೈ ಎಗ್ಮೋರ್ ವಿಶೇಷ ರೈಲು ಓಡಾಟ ವಿಸ್ತರಣೆ, ಈ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಇದೆ
Karnataka news live: ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ
Karnataka news live: ಚಿತ್ರದುರ್ಗ ಹಳಿ ಮೇಲೆ ಕೆಟ್ಟು ನಿಂತ ಹುಬ್ಬಳ್ಳಿ-ಬೆಂಗಳೂರು ರೈಲು, ಟಾಟಾನಗರ ಎಕ್ಸ್‌ಪ್ರೆಸ್ ರೈಲು ಕೂಡ ಸ್ಥಗಿತ!
Karnataka news live: ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಬಾಳಿ, ಮೂಢನಂಬಿಕೆ ಬಿಟ್ಬಾಕಿ - ಸಿಎಂ ಸಿದ್ದರಾಮಯ್ಯ
ದ್ವೇಷ ಬಿಟ್ಟು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Karnataka news live: ಜೆಡಿಎಸ್ ಕೇವಲ ರೈತರಿಗೆ ಸೀಮಿತವಾದ ಪಕ್ಷವಲ್ಲ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಒಂದೇ ಒಂದು ಬಾರಿ ಅವಕಾಶ ನೀಡಿ. ಈ ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನು ಸಂಪೂರ್ಣವಾಗಿ ಬಿಡಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
Karnataka news live: ಬೆಂಗಳೂರು - ಶೋಕಿ ಜೀವನ, ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ ವಿದ್ಯಾರ್ಥಿಗಳು! ಪೊಲೀಸರು ಟ್ರ್ಯಾಕ್ ಮಾಡಿದ್ದೇ ರೋಚಕ!
ಬೆಂಗಳೂರಿನಲ್ಲಿ ಐಷಾರಾಮಿ ಜೀವನಕ್ಕಾಗಿ ಪ್ರತಿಷ್ಠಿತ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಅಪಹರಿಸಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪಿಗಳನ್ನು, ಸಂತ್ರಸ್ತನ ಸ್ನೇಹಿತರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಬಂಧಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
Karnataka news live: ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ - ಸಚಿವ ಶಿವಾನಂದ ಪಾಟೀಲ ಭರವಸೆ
ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು.
Karnataka news live: ಶೂಗಳನ್ನು ತೊಳೆಯೋಕೆ ಸಮಯ ಇಲ್ಲವಾ? ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸಿಂಪಲ್ ಸಲಹೆಗಳು
Karnataka news live: ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನ ; ಎಷ್ಟು ಸಮಯ ಉಳಿತಾಯ?
Karnataka news live: ಶ್ರೀರಂಗಪಟ್ಟಣದ 21 ಗ್ರಾಮ ಪಂಚಾಯ್ತಿಗಳಿಂದ 2,83,34,944 ರೂ ಗುಳುಂ; ವ್ಯಾಪಕ ಅಕ್ರಮ
ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಸುಮಾರು 2.83 ಕೋಟಿ ರೂ. ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಭೂ ವಿನ್ಯಾಸ ನಕ್ಷೆ ಅನುಮೋದನೆಯಲ್ಲೂ ವ್ಯಾಪಕ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.
Karnataka news live: 1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ
ನಟಿ ಸುಧಾರಾಣಿ ಅವರು ನಟ ಆಮೀರ್ ಖಾನ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 1988ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿಯಾಗಿದ್ದರೂ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
Karnataka news live: ಲಕ್ಷ್ಮೀ ನಿವಾಸದಿಂದ ಮತ್ತೊಂದು ಪ್ರಮುಖ ಪಾತ್ರ ಮುಕ್ತಾಯ; ಇನ್ಮುಂದೆ ಇವರಿಬ್ಬರದ್ದೇ ಆಟ?
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಪ್ರಮುಖ ಪಾತ್ರ ಮುಕ್ತಾಯಗೊಳಿಸಲಾಗಿದೆ. ಈ ಹಿಂದೆ ಹಲವು ಪಾತ್ರಗಳು ಕಣ್ಮರೆಯಾಗಿದ್ದು, ಇದೀಗ ಜಾನು ವಾಪಸ್ ಬಂದಿರುವುದರಿಂದ ಕಥೆಯು ಜಾನು ಮತ್ತು ಜಯಂತ್ ನಡುವಿನ ಸಂಘರ್ಷದತ್ತ ಸಾಗುವ ಸೂಚನೆ ನೀಡಿದೆ.
Karnataka news live: Karna Serial - ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್ಸಮ್ ಅರ್ಜುನ್ ; ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್ ರಾಜ್ ಶಾಕ್
ಕರ್ಣ ಸೀರಿಯಲ್ನಲ್ಲಿ ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ್ ಹೊಸ ಪ್ಲ್ಯಾನ್ ಮಾಡಿದ್ದು, ಇದಕ್ಕೆ ತಿರುಗೇಟು ನೀಡಲು ಕರ್ಣ ಸಿದ್ಧನಾಗಿದ್ದಾನೆ. ಆದರೆ, ಎಲ್ಲರ ಊಹೆಗಳನ್ನು ಮೀರಿ 'ಸೀತಾರಾಮ' ಖ್ಯಾತಿಯ ಗಗನ್ ಚಿನ್ನಪ್ಪ, ಅರ್ಜುನ್ ಆಗಿ ನಿಧಿಯನ್ನು ಮದುವೆಯಾಗಲು ಎಂಟ್ರಿ ಕೊಟ್ಟಿದ್ದಾನೆ.