ಗರಿಗರಿ ಮಸಾಲೆ ವಡೆ ತಯಾರಿಸಲು ಹೋಟೆಲ್‌ನವರು ಬಳಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ
Masala Vada Recipe: ಕಡಲೆಬೇಳೆ ವಡೆ. ಹೊರಗೆ ಗರಿಗರಿಯಾಗಿ, ಒಳಗೆ ಖಾರವಾಗಿ, ಬಿಸಿಬಿಸಿ ಚಹಾ ಜೊತೆ ಸವಿದರೆ ಬಾಯಲ್ಲಿ ನೀರೂರುತ್ತೆ. ದಕ್ಷಿಣ ಭಾರತೀಯರ ನೆಚ್ಚಿನ ಸ್ನ್ಯಾಕ್ಸ್ ಅಂದ್ರೆ ಅದು ಕಡಲೆಬೇಳೆ ವಡೆ. ಇದನ್ನು ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಮಾಡಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.

ಚಹಾ ಜೊತೆ ಗರಿಗರಿ ಮಸಾಲೆ ವಡೆ
ಟೀ ಟೈಮ್ ಅಂದ ತಕ್ಷಣ ಎಲ್ಲರಿಗೂ ಬಿಸಿ ಚಹಾ ಜೊತೆ ಗರಿಗರಿ ತಿಂಡಿ ನೆನಪಾಗುತ್ತೆ. ಸಮೋಸ, ಬಜ್ಜಿ, ಪಕೋಡದ ಜೊತೆಗೆ ಕಡಲೆಬೇಳೆ ವಡೆಗೂ ಒಂದು ವಿಶೇಷ ಸ್ಥಾನವಿದೆ. ಹೊರಗಿನಿಂದ ಗರಿಗರಿಯಾಗಿ, ಒಳಗಿನಿಂದ ಮೃದುವಾಗಿರುವ ಈ ಮಸಾಲೆ ವಡೆ ಸಖತ್ ರುಚಿ ಕೊಡುತ್ತದೆ.
ಮನೆಯಲ್ಲೇ ಕಡಿಮೆ ಪದಾರ್ಥ ಬಳಸಿ ಇದನ್ನು ಸುಲಭವಾಗಿ ಹೇಗೆ ಮಾಡೋದು? ಬೇಕಾಗುವ ಸಾಮಗ್ರಿಗಳೇನು ಅಂತ ನೋಡೋಣ.
ಕನಿಷ್ಠ ಎರಡು ಗಂಟೆ ನೆನೆಸಿಡಿ
ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ
ಬಿಸಿಬಿಸಿ ವಡೆ ಸವಿಯಲು ಸಿದ್ಧ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ವಡೆಗಳನ್ನು ನಿಧಾನವಾಗಿ ಕರಿಯಿರಿ. ಅವು ಚಿನ್ನದ ಬಣ್ಣಕ್ಕೆ ಬರುವವರೆಗೆ ಡೀಪ್ ಫ್ರೈ ಮಾಡಿ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಬಿಸಿಬಿಸಿ ಕಡಲೆಬೇಳೆ ವಡೆಯ ಸುವಾಸನೆ ಅದ್ಭುತವಾಗಿರುತ್ತದೆ.
ಇದನ್ನೂ ಓದಿ: 1 ಕೆಜಿ ಚಿಕನ್ ಅಡುಗೆಗೆ ಎಷ್ಟು ಪ್ರಮಾಣದಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು?
ಅಕ್ಕಿ ಹಿಟ್ಟು
ಇನ್ನು ಕೆಲವರು ಮಸಾಲೆ ವಡೆ ಮಿಶ್ರಣದಲ್ಲಿಅರ್ಧ ಟೀ ಸ್ಪೂನ್‌ನಷ್ಟು ಅಕ್ಕಿ ಹಿಟ್ಟು ಸೇರಿಸಿಕೊಳ್ಳುತ್ತಾರೆ. ಅಕ್ಕಿಹಿಟ್ಟು ಸಹ ಮಸಾಲೆವಡೆಯನ್ನು ಮತ್ತಷ್ಟು ಗರಿಗರಿಯನ್ನಾಗಿ ಮಾಡುತ್ತದೆ. ಟೊಮೆಟೊ ಸಾಸ್ ಅಥವಾ ಹಸಿ ಚಟ್ನಿ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಸಂಜೆ ಚಹಾ ಜೊತೆ ಈ ಸ್ನ್ಯಾಕ್ ಸವಿಯಬಹುದು. ಮನೆಗೆ ಅತಿಥಿಗಳು ಬಂದಾಗಲೂ ಇದನ್ನು ಮಾಡಿ ಬಡಿಸಬಹುದು.
ಇದನ್ನೂ ಓದಿ: ಮನೆಯಲ್ಲೇ 100% Organic ತರಕಾರಿ ಬೆಳೆಯಲು ಹಳ್ಳಿ ರೈತ ನೀಡಿದ ಟಿಪ್ಸ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

