11:45 PM (IST) May 06

ಮಾನವ ಅಭಿವೃದ್ಧಿ ಇಂಡೆಕ್ಸ್‌ನಲ್ಲಿ ಭಾರತ ಜಿಗಿತ, ವಿಶ್ವಸಂಸ್ಥೆ UNDP ಸೂಚ್ಯಂಕ ಪಟ್ಟಿ ಬಿಡುಗಡೆ

ಆಯುಷ್ಯ, ಶಿಕ್ಷಣ ಮತ್ತು ಆದಾಯದಲ್ಲಿನ ಸುಧಾರಣೆಗಳಿಂದಾಗಿ ಭಾರತದಲ್ಲಿ ಮಹತ್ತರ ಸುಧಾರಣೆಗಳಾಗಿದೆ. ಇದರ ಪರಿಣಾಮ ಭಾರತದ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದ ಶ್ರೇಯಾಂಕ 30 ಕ್ಕೆ ಏರಿಕೆಯಾಗಿದೆ.

ಪೂರ್ತಿ ಓದಿ
10:38 PM (IST) May 06

ಮನೋಕಾಮನೆ ಈಡೇರಿಸುವ ಮ್ಯಾನಿಫೆಸ್ಟೇಷನ್​ ಜಾರ್​: ಮಾಡುವುದು ಬಲು ಸುಲಭ...

ನಾವು ಅಂದುಕೊಂಡದ್ದು ಆಗಿ, ನಮ್ಮ ಮನೋಕಾಮನೆಗಳು ಈಡೇರಬೇಕು ಎಂದರೆ ಹೀಗೆ ಮಾಡಿ ನೋಡಬೇಕಂತೆ. ಇದು ಮ್ಯಾನಿಫೆಸ್ಟೇಷನ್​ ಜಾರ್​.ಏನಿದು? ಏನಿದರ ಪ್ರಯೋಜನ? 

ಪೂರ್ತಿ ಓದಿ
10:33 PM (IST) May 06

ಕಾರಾವಾರ, ರಾಯಚೂರಿನಲ್ಲಿ ನಡೆಯಬೇಕಿದ್ದ ಯುದ್ಧ ಮಾಕ್ ಡ್ರಿಲ್ ರದ್ದು

ಪೆಹಲ್ಗಾಂ ದಾಳಿಗೆ ಪ್ರತೀಕಾರಕ್ಕೆ ರೆಡಿಯಾಗಿರುವ ಭಾರತ ಇದೀಗ ಮೇ.7 ರಂದು ಯುದ್ಧದ ತುರ್ತ ಪರಿಸ್ಥಿತಿ ಜಾಗೃತಿ ಮೂಡಿಸಲು ಮಾಕ್ ಡ್ರಿಲ್ ನಡೆಸಲು ಕೇಂದ್ರ ಸೂಚಿಸಿದೆ. ಇದರಂದೆ ದೇಶಾದ್ಯಂತ ತಯಾರಿ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಕಾರವಾರ ಹಾಗೂ ರಾಯಚೂರಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ. 

ಪೂರ್ತಿ ಓದಿ
09:56 PM (IST) May 06

ಮೈಸೂರಿನಲ್ಲಿರಲು ಮೂವರು ಅಪ್ರಾಪ್ರ ಪಾಕಿಸ್ತಾನಿಯರಿಂದ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ

ಪೆಹಲ್ಗಾಂ ದಾಳಿ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿಯರು ಭಾರತ ತೊರೆಯಲು ಸೂಚನೆ ನೀಡಿತ್ತು. ಇದೀಗ ಮೂವರು ಅಪ್ರಾಪ್ತ ಪಾಕಿಸ್ತಾನಿಯರು ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪೂರ್ತಿ ಓದಿ
09:13 PM (IST) May 06

ಪತ್ನಿ, ಪ್ರಿಯಕರ ಮತ್ತು ನರ್ಸ್ ಗೆಳತಿ; ಗಂಡನಿಗೆ ಓವರ್ ಡೋಸ್ ಇಂಜೆಕ್ಷನ್!

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಂಡನಿಗೆ ಪ್ರಿಯಕರನೊಂದಿಗೆ ಸೇರಿ ಹೆಂಡತಿಯೇ ಓವರ್‌ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆಸ್ಪತ್ರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಪೂರ್ತಿ ಓದಿ
08:44 PM (IST) May 06

ಆಧಾರ್​ ಕಾರ್ಡ್​ನಲ್ಲಿಯೋ ಜನ್ಮದಿನ ಆನ್​ಲೈನ್​ನಲ್ಲಿ ಬದಲಿಸಬಹುದಾ? ಇಲ್ಲಿದೆ ಪುಲ್​ ಡಿಟೇಲ್ಸ್​...

ಆಧಾರ್​ ಕಾರ್ಡ್​ನಲ್ಲಿಯೋ ಜನ್ಮದಿನ ಆನ್​ಲೈನ್​ನಲ್ಲಿ ಬದಲಿಸಲು ಅವಕಾಶ ಇದೆಯೇ? ಪ್ರೊಸೀಜರ್​ ಏನು? ಇಲ್ಲಿದೆ ಪುಲ್​ ಡಿಟೇಲ್ಸ್​...

ಪೂರ್ತಿ ಓದಿ
08:35 PM (IST) May 06

ವಿರಾಟ್ ಕೊಹ್ಲಿ ನೆರವಿಗೆ ಬಂದ ಎಬಿ ಡಿವಿಲಿಯರ್ಸ್, ಟೀಕಿಸಿದ್ದ ಗವಾಸ್ಕರ್-ಸೆಹ್ವಾಗ್‌ಗೆ ಗಪ್‌ಚುಪ್

ಆರ್‌ಸಿಬಿ ಪರ ಸದಾ ಮಿಡಿಯುವ ಎಬಿ ಡಿವಿಲಿಯರ್ಸ್ ಇದೀಗ ವಿರಾಟ್ ಕೊಹ್ಲಿ ನೆರವಿಗೆ ಬಂದಿದ್ದಾರೆ. ಕೊಹ್ಲಿ ಟೀಕಿಸಿದ್ದ ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್‌ಗೆ ಇದನ್ನು ನುಂಗಿಕೊಳ್ಳಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ. ಕೊಹ್ಲಿ ಪರ ಎಬಿಡಿ ಹೇಳಿದ್ದೇನು? ಟೀಕಾಕಾರಾ ಬಾಯಿ ಮುಚ್ಚಿಸಿದ್ದು ಹೇಗೆ? 

ಪೂರ್ತಿ ಓದಿ
08:23 PM (IST) May 06

RCB ಗೆಲುವಿಗೆ ಮೇಕೆ ಬಲಿ; ವಿರಾಟ್ ಕೊಹ್ಲಿಯ ಮೂವರು ಅಭಿಮಾನಿಗಳ ಬಂಧನ

ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಚಿತ್ರದುರ್ಗದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಮೇಕೆ ಬಲಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ
08:19 PM (IST) May 06

ನಕ್ಸಲ್‌ ನಿಗ್ರಹ ಆಪರೇಷನ್‌: IED ಬ್ಲಾಸ್ಟ್‌ನಿಂದ ಎಡಗಾಲು ಕಳೆದುಕೊಂಡ CRPF ಸಹಾಯಕ ಕಮಾಂಡೆಂಟ್‌ ಸಾಗರ್‌ ಬೋರಾಡೆ!

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಾಗರ್ ಬೋರಾಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಐಇಡಿ ಸ್ಫೋಟದಲ್ಲಿ ಗಾಯಗೊಂಡ ಸೈನಿಕನನ್ನು ರಕ್ಷಿಸಲು ಹೋದಾಗ ಬೋರಾಡೆ ಅವರು ತಮ್ಮ ಎಡಗಾಲನ್ನು ಕಳೆದುಕೊಂಡಿದ್ದಾರೆ.

ಪೂರ್ತಿ ಓದಿ
07:42 PM (IST) May 06

ರಾಜ್ಯದಲ್ಲೇ ಮೊದಲ ಕೃತಕ ಹೃದಯ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ, ಇಬ್ಬರು ರೋಗಿಗಳು ಚೇತರಿಕೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇಬ್ಬರು ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. ಇದು ಬ್ಯಾಟರಿ ಚಾಲಿತ ಹೃದಯವಾಗಿದೆ. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ನಡೆದ ಮೈಲಿಗಲ್ಲೇನು?

ಪೂರ್ತಿ ಓದಿ
07:29 PM (IST) May 06

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ನೌಕರ, ಸಿಕ್ಕಿಬಿದ್ದ ಇಬ್ಬರು ಕಂದಾಯ ಅಧಿಕಾರಿಗಳು!

ಕಂದಾಯ ಇಲಾಖೆಯ ನೌಕರನೊಬ್ಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣದಲ್ಲಿ ಇಬ್ಬರು ಕಂದಾಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಸಿಕ್ಕಿಬಿದ್ದಿದ್ದಾರೆ. ಶಾಲಾ ದಾಖಲೆಗಳನ್ನು ತಿದ್ದಿ, ಸುಳ್ಳು ವರದಿಗಳನ್ನು ಸಲ್ಲಿಸಿ ನೌಕರನನ್ನು ರಕ್ಷಿಸಲು ಯತ್ನಿಸಿದ ಆರೋಪ ಅವರ ಮೇಲಿದೆ.

ಪೂರ್ತಿ ಓದಿ
07:18 PM (IST) May 06

ಒಂದಾ ನಾವು ಉಳೀಬೇಕು ಇಲ್ಲಾ ಜಗತ್ತೇ ನಾಶವಾಗಬೇಕು, ಪಾಕ್ ಸಚಿವನಿಂದ ನ್ಯೂಕ್ಲಿಯರ್ ಬೆದರಿಕೆ

ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಖತೆ ಮುಗಿಯಲಿದೆ. ಆದರೆ ನಾವು ಉಳಿಯಬೇಕು. ಇದಕ್ಕಾಗಿ ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ನ್ಯೂಕ್ಲಿಯರ್ ಬೆದರಿಕೆ ಹಾಕಿದ್ದಾನೆ. 

ಪೂರ್ತಿ ಓದಿ
07:03 PM (IST) May 06

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ

ಸಾಮಾಜಿಕ ಮಾಧ್ಯಮ ಬಳಕೆ ವಿಪರೀತವಾಗಿ ಹೆಚ್ಚಿದೆ. ಚಿಕ್ಕ ಮಕ್ಕಳು ಕೂಡ ಫೋನ್‌ಗಳಿಗೆ ಅಂಟಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ನಕಾರಾತ್ಮಕ ಪರಿಣಾಮಗಳಿವೆ ಎಂದು ತಜ್ಞರು ಹೇಳುತ್ತಲೇ ಇದ್ದಾರೆ. ಮಕ್ಕಳಲ್ಲಿ ಇದು ಹೆಚ್ಚು ಕಂಡುಬರುತ್ತಿದೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಪೂರ್ತಿ ಓದಿ
06:57 PM (IST) May 06

ದೇವರಿಗೂ ಮೊದಲು ಜಿರಳೆಗಳಿಗೆ ನೈವೇದ್ಯ ಅರ್ಪಿಸುವ ದೇಗುಲವಿದು

ಇಲ್ಲೊಂದು ದೇವಾಲಯದಲ್ಲಿ ಜಿರಳೆಗೂ ಗೋವುಗಳಂತೆ ಗೌರವ ನೀಡಿ ಮೊದಲ ಪ್ರಸಾದ ಅಥವಾ ಭೋಜನವನ್ನು ಅವುಗಳಿಗೆ ನೀಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?

ಪೂರ್ತಿ ಓದಿ
06:15 PM (IST) May 06

ಯುದ್ಧ ತಯಾರಿ ನಡುವಿನ ಮಾಕ್‌ ಡ್ರಿಲ್‌ನಿಂದ ನಾಳೆ ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಇದೆಯಾ?

ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರಕ್ಕೆ ಸಜ್ಜಾಗುತ್ತಿರುವ ಭಾರತ ನಾಳೆ ದೇಶದ ಎಲ್ಲಾ ರಾಜ್ಯದಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚಿಸಿದೆ. ಯುದ್ಧ ಸನ್ನವೇಶದ ಅಣಕು ಪ್ರದರ್ಶನದಿಂದ ನಾಳೆ ಶಾಲೆ, ಕಾಲೇಜು, ಕಚೇರಿಗಳಿಗೆ ರಜೆ ಇಜೆಯಾ?

ಪೂರ್ತಿ ಓದಿ
06:10 PM (IST) May 06

1ಕೆಜಿ ಚಿನ್ನ, 4 ಸೂಟ್‌ಕೇಸ್‌ ಹಣ, ಎಕರೆಗಟ್ಟಲೇ ಭೂಮಿ: ಟಾಕ್ ಆಫ್ ದಿ ಟೌನ್ ಆಯ್ತು ಮರ್ವಾಡಿಗರ ಮದ್ವೆ ಗಿಫ್ಟ್‌

ರಾಜಸ್ತಾನದಲ್ಲಿ ನಡೆದ ಮದುವೆಯೊಂದರಲ್ಲಿ ವಧುವಿಗೆ ಆಕೆಯ ಸೋದರ ಮಾವನ ಮನೆಯವರು 15 ಕೋಟಿ ಮೌಲ್ಯದ ಉಡುಗೊರೆ ನೀಡಿದ್ದಾರೆ.

ಪೂರ್ತಿ ಓದಿ
06:08 PM (IST) May 06

ದೇಶದಲ್ಲಿ ಮದ್ಯದ ಬೆಲೆ ಗೋವಾದಲ್ಲಿ ಅತಿ ಕಡಿಮೆ, ಕರ್ನಾಟಕದಲ್ಲಿ ಅತ್ಯಂತ ದುಬಾರಿ ಏಕೆ?

ಭಾರತದಲ್ಲಿ ಮದ್ಯದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಲೆಯನ್ನು ಹೊಂದಿದ್ದರೆ, ಗೋವಾ ರಾಜ್ಯದಲ್ಲಿ ಅತಿ ಕಡಿಮೆ ಮದ್ಯದ ಬೆಲೆ ಇದೆ. ಈ ವ್ಯತ್ಯಾಸಕ್ಕೆ ಕಾರಣವೇನು?

ಪೂರ್ತಿ ಓದಿ
05:27 PM (IST) May 06

ರಾಖಿ ಸಾವಂತ್ 'ಜೈ ಪಾಕಿಸ್ತಾನ', ಆಕೆಯನ್ನ ದೇಶದಿಂದ ಒದ್ದೋಡಿಸ್ತೀವಿ ಎಂದ ಎಂಎನ್ಎಸ್‌!

ನಟಿ ರಾಖಿ ಸಾವಂತ್ ಪಾಕಿಸ್ತಾನವನ್ನು ಬೆಂಬಲಿಸಿ 'ಜೈ ಪಾಕಿಸ್ತಾನ್' ಎಂದು ಘೋಷಣೆ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
05:24 PM (IST) May 06

ಬೆಳಗಾಗುವಷ್ಟರಲ್ಲಿ ಅಂಬಾನಿ,ಅದಾನಿ ಹಿಂದಿಕ್ಕಿದ ಯುಪಿ ಬಡಪಾಯಿ, ಈಗ ವಿಶ್ವದ ನಂಬರ್ 1 ಶ್ರೀಮಂತ

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಉತ್ತರ ಪ್ರದೇಶದ ಬಡಪಾಯಿ ಮುಕೇಶ್ ಅಂಬಾನಿ,ಗೌತಮ್ ಅದಾನಿ, ಅಷ್ಟೇ ಯಾಕೆ ಎಲಾನ್ ಮಸ್ಕ್ ಬ್ಯಾಂಕ್ ಬ್ಯಾಲೆನ್ಸ್ ಹಿಂದಿಕ್ಕಿದ ಘಟನೆ ನಡೆದಿದೆ. ಈ ಬಡಪಾಯಿ ಹಣ ಡ್ರಾ ಮಾಡುವ ಮೊತ್ತ 1,400 ರೂ, 500 ರೂ ಹೀಗೆ. ಆದರೆ ಈತನ ಖಾತೆಗೆ ಜಮೆ ಆಗಿರುವ ಮೊತ್ತ ಬರೋಬ್ಬರಿ 36 ಡಿಜಿಟ್. 

ಪೂರ್ತಿ ಓದಿ
05:09 PM (IST) May 06

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ 20 ಅಡಿ ಆಳಕ್ಕೆ ಬಿದ್ದ ಮಹಿಳೆ

Noida Dog Attack: ನೋಯ್ಡಾದಲ್ಲಿ ನಾಯಿ ದಾಳಿ ಭಯದಿಂದ 20 ಅಡಿ ಆಳಕ್ಕೆ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಪೂರ್ತಿ ಓದಿ