ಹತ್ರಾಸ್‌ನ ಅಜಿತ್ ಖಾತೆಗೆ ತಾಂತ್ರಿಕ ದೋಷದಿಂದಾಗಿ ಊಹಿಸಲಾಗದಷ್ಟು ದೊಡ್ಡ ಮೊತ್ತ ಜಮೆಯಾಯಿತು. ಕ್ಯಾಲ್ಕುಲೇಟರ್‌ನಲ್ಲೂ ಲೆಕ್ಕ ಹಾಕಲಾಗದ ಈ ಮೊತ್ತ, ಜಮ್ಮು ಕಾಶ್ಮೀರದ ಬ್ಯಾಂಕ್ ಶಾಖೆಯಿಂದ ಜಮೆಯಾಗಿದ್ದು ಪತ್ತೆಯಾಗಿದೆ. ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಅಜಿತ್ ತನ್ನ ಉಳಿದ ಹಣದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಹತ್ರಾಸ್(ಮೇ.06) ಭಾರತದ ಶ್ರೀಮಂತರ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸಂಪತ್ತುಗಳು ಲಕ್ಷ ಲಕ್ಷ ಕೋಟಿ ರೂಪಾಯಿ. ಇವರಿಗೆ ಪೈಪೋಟಿ ನೀಡುವ ಹಲವು ಉದ್ಯಮಿಗಳಿದ್ದಾರೆ. ಇವರೆಲ್ಲಾ ಉದ್ಯಮಿ ಸಾಮ್ರಾಜ್ಯ ಕಟ್ಟಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಆದರೆ ಒಂದೇ ದಿನದಲ್ಲಿ ಈ ಉದ್ಯಮಿಗಳನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ಅನ್ನೋ ದಾಖಲೆ ಬರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹತ್ರಾಸ್ ಗ್ರಾಮದ ಅಜಿತ್ ಅನ್ನೋ ಬಡಪಾಯಿ ವಿಶ್ವದ ಎಲ್ಲಾ ಶ್ರೀಮಂತರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾನೆ. ಒಂದು ಲಕ್ಷ ರೂಪಾಯಿ ಅಂದರೆ ಒಟ್ಟು 6 ಸಂಖ್ಯೆ, ಆದರೆ ಈತನ ಖಾತೆಗೆ ಜಮೆ ಆಗರುವ ಮೊತ್ತದ ಒಟ್ಟು ಸಂಖ್ಯೆ 36.

ಹಣ ಲೆಕ್ಕ ಹಾಕಲು ವಿಫಲವಾದ ಕ್ಯಾಲ್ಕುಲೇಟರ್
ಉತ್ತರ ಪ್ರದೇಶದ ಹತ್ರಾಶ್ ಜಿಲ್ಲೆಯ ಅಜಿತ್ ಕೆಲ ಸಮಯದ ಹೊತ್ತಿಗೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈತನ ಖಾತೆಯ ಮೊತ್ತ ಲೆಕ್ಕ ಹಾಕಲು ಸಾಮಾನ್ಯ ಕ್ಯಾಲ್ಯುಕುಲೇಟರ್ ಸಾಲುತ್ತಿಲ್ಲ. ಇದರಲ್ಲಿ ಇಷ್ಟು ಸಂಖ್ಯೆ ಬರುತ್ತಿಲ್ಲ. ಸಾಮಾನ್ಯವಾಗಿ ನಗದು ಹಣ ಎಣಿಸುವುದು ಪ್ರಯಾಸ, ಆದರೆ ಇಲ್ಲಿ ಖಾತೆಯಲ್ಲಿ ಎಷ್ಟು ಹಣ ಇದೆ ಅನ್ನೋದು ಹೇಳುವುದು ಪ್ರಯಸವಾಗಿತ್ತು.

ಮುಕೇಶ್ ಅಂಬಾನಿಗೆ ಜಾಕ್‌ಪಾಟ್, ಒಂದೂವರೆ ತಿಂಗಳಲ್ಲಿ 100 ಮಿಲಿಯನ್ ಬಂಪರ್

ಅಜಿತ್ ಖಾತೆಗೆ ಜಮೆ ಆದ ಮೊತ್ತವೆಷ್ಟು?
ಅಜಿತ್ ಖಾತೆಗೆ ಜಮೆ ಆದ ಮೊತ್ತದ ಒಟ್ಟು ಸಂಖ್ಯೆ 36. ಎಷ್ಟು ಅನ್ನೋದು ಲೆಕ್ಕ ಹಾಕುವುದು ಸುಲಭದ ಮಾತಲ್ಲ. ಹೀಗಾಗಿ ಅಜಿತ್ ಖಾತೆಗೆ ಜಮೆ ಆದ ಮೊತ್ತ ನೀವೆ ಓದಿ. 1,00,13,56,00,00,01,39,54,21,00,23,56,00,00,01,39,542 ರೂಪಾಯಿ ಅಜಿತ್ ಖಾತೆಗೆ ಜಮೆ ಆಗಿದೆ. ಇದು ಎಷ್ಟು ಲಕ್ಷ ಕೋಟಿ ಅಥವಾ ಕೋಟಿ ಕೋಟಿ ಆಗಲಿದೆ ಅನ್ನೋದು ಲೆಕ್ಕ ಹಾಕುವುದು ಸವಾಲಿನ ಕೆಲಸ. 

ಸಾಮಾನ್ಯ ಅಜಿತ್‌ಗೆ ಜಾಕ್‌ಪಾಟ್
ಹತ್ರಾಸ್ ಗ್ರಾಮದ ಅಜಿತ್ ಸಾಮಾನ್ಯ ವ್ಯಕ್ತಿ. ವ್ಯಾಪಾರ ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾನೆ. ಈತ ತನ್ನ ಖಾತೆಯಿಂದ ಒಮ್ಮೆ 1,800 ರೂಪಾಯಿ ಹಾಗೂ ಮತ್ತೊಮ್ಮೆ 1,400 ರೂಪಾಯಿ ಡ್ರಾ ಮಾಡಿದ್ದಾರೆ. ಈತನ ಅಗತ್ಯ, ಖಾತೆಯಲ್ಲಿರುವ ಬ್ಯಾಲೆನ್ಸ್ ನೋಡಿಕೊಂಡು ಹಣ ಡ್ರಾ ಮಾಡಿದ್ದಾನೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ ತಮ್ಮ ಖಾತೆಯಲ್ಲಿ ಎಣಿಸಲು ಸಾಧ್ಯವಾಗದಷ್ಟು ಹಣ ಇದೆ ಎಂದಿದ್ದಾರೆ. ಅಜಿತ್ ಹಿರಿ ಹಿರಿ ಹಿಗ್ಗಿದ್ದಾರೆ. ಹಣ ಎಷ್ಟಿದೆ ಎಂದು ಚೆಕ್ ಮಾಡಿದಾಗ ಅಚ್ಚರಿಗೊಂಡಿದ್ದಾರೆ. ಕಾರಣ ಈ ಹಣ ಎಷ್ಟು ಅನ್ನೋದು ಲೆಕ್ಕಮಾಡಲು ಸಾಧ್ಯವಾಗದಷ್ಟಿತ್ತು. ಈ ಮೊತ್ತ ವಿಶ್ವದ ಶ್ರೀಮಂತ ವ್ಯಕ್ತಿಯ ಆಸ್ತಿಗಿಂತ ಹೆಚ್ಚಿತ್ತು.

ಇದೇ ವೇಳೆ ಬ್ಯಾಂಕ್ ಸಿಬ್ಬಂದಿಗಳು ಇದು ತಾಂತ್ರಿಕ ಸಮಸ್ಯೆಯಿಂದ ಆಗಿದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಈ ಕುರಿತು ಪೊಲೀಸರ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ. ಇದರಂತೆ ಪೊಲೀಸರಿಗೆ ಮಾಹಿತಿ ನೀಡಿದ ಅಜಿತ್‌ಗೆ ಸೈಬರ್ ಪೊಲೀಸರ ಸಂಪರ್ಕಿಸಲು ಸೂಚಿಸಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರದ ಬ್ಯಾಂಕ್ ಶಾಖೆಯಿಂದ ಈ ಹಣ ಜಮೆ ಆಗಿರುವುದು ಪತ್ತೆಯಾಗಿದೆ. ತಾಂತ್ರಿಕ ಅಡಚಣೆಗಳಿಂದ ಭಾರಿ ಮೊತ್ತ ಜಮೆ ಆಗಿದೆ ಅನ್ನೋದು ಪತ್ತೆಯಾಗಿದೆ. ವಿಚಾರಣೆ ವೇಳೆ ಸೈಬರ್ ಪೊಲೀಸರು ಅಜಿತ್ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ.

ಆತಂಕಗೊಂಡಿರುವ ಅಜಿತ್
ಪೊಲೀಸರ ತನಿಖೆ, ಇಷ್ಟು ಮೊತ್ತ ನೋಡಿದ ಅಜಿತ್ ಆತಂಕಗೊಂಡಿದ್ದಾರೆ. ಸೈಬರ್ ವಂಚನೆಯಲ್ಲಿ ತನ್ನನ್ನು ಸುಲಿಸಿಕಿದ್ದಾರೆ ಎಂದು ಆತಂಕಗೊಂಡಿದ್ದಾರೆ. ಇಷ್ಟೇ ಅಲ್ಲ ತನ್ನ ಖಾತೆಯಲ್ಲಿ 3 ರಿಂದ 4 ಸಾವಿರ ರೂಪಾಯಿ ಇದೆ. ಈ ಹಣವನ್ನು ಸೈಬರ್ ವಂಚಕರ ದೋಚದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. 

ಏಪ್ರಿಲ್‌ನಲ್ಲಿ ಈ 5 ರಾಶಿಗೆ ಜಾಕ್‌ಪಾಟ್: ಬಾಬಾ ವಂಗಾ ಭವಿಷ್ಯ