ಇಲ್ಲೊಂದು ದೇವಾಲಯದಲ್ಲಿ ಜಿರಳೆಗೂ ಗೋವುಗಳಂತೆ ಗೌರವ ನೀಡಿ ಮೊದಲ ಪ್ರಸಾದ ಅಥವಾ ಭೋಜನವನ್ನು ಅವುಗಳಿಗೆ ನೀಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
ಜಿರಳೆಗಳನ್ನು ಕಂಡರೆ ಕೆಲವು ಮನುಷ್ಯರು ಅದಕ್ಕಿಂತ ಆಕಾರದಲ್ಲಿ ನೂರು ಪಟ್ಟು ದೊಡ್ಡ ಆಕಾರವನ್ನು ಹೊಂದಿದ್ದರೂ ಕೂಡ ಅಲ್ಲಿಂದ ಎದ್ದು ಓಡುತ್ತಾರೆ. ಇನ್ನು ಕೆಲ ಹೆಣ್ಣು ಮಕ್ಕಳು ಕಿರುಚಿ ಬೊಬ್ಬೆ ಹೊಡೆಯುತ್ತಾರೆ. ಮತ್ತೆ ಕೆಲವರು ಅದು ಬಟ್ಟೆಗಳನ್ನು ಕತ್ತರಿಸುತ್ತದೆ. ಅಡುಗೆ ಮನೆಯಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತದೆ ಎಂದು ಹೇಳಿ ಸಾಯಿಸಲು ನೋಡುತ್ತಾರೆ. ಆದರೆ ಇಲ್ಲೊಂದು ದೇವಾಲಯದಲ್ಲಿ ಜಿರಳೆಗೂ ಗೋವುಗಳಂತೆ ಗೌರವ ನೀಡಿ ಮೊದಲ ಪ್ರಸಾದ ಅಥವಾ ಭೋಜನವನ್ನು ಅವುಗಳಿಗೆ ನೀಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
ಭೂಮಿಯ ಮೇಲಿನ ಸಕಲ ಜೀವಿಗಳಲ್ಲೂ ಭಗವಂತನಿದ್ದಾನೆ ಎಂದು ನಂಬುವ ಸನಾತನ ಧರ್ಮದಲ್ಲಿ ಎಲ್ಲವೂಗಳಿಗೂ ಸಮಾನವಾದ ಸ್ಥಾನಮಾನವಿದೆ. ಇದಕ್ಕಾಗಿ ಪ್ರಾಣಿಗಳನ್ನು ಕೂಡ ದೇಗುಲದಲ್ಲಿ ಪೂಜಿಸಲಾಗುತ್ತದೆ. ಗೋವುಗಳು, ಆನೆಗಳು ನಮ್ಮ ದಕ್ಷಿಣ ಭಾರತದ ದೇಗುಲಗಳ ಪ್ರಮುಖ ಭಾಗವಾಗಿದೆ. ಹಾಗೆಯೇ ಹಂದಿ, ನಾಯಿ ಬೆಕ್ಕು ಮುಂತಾದ ಪ್ರಾಣಿಗಳನ್ನು ಪೂಜೆ ಮಾಡಲಾಗುತ್ತದೆ. ಕೆಲವು ದೇಗುಲಗಳಲ್ಲಿ ಪೂಜೆಯ ನಂತರದ ಮೊದಲ ಪ್ರಸಾದವನ್ನು ಭಗವಂತನಿಗೆ ಅರ್ಪಿಸುವುದಕ್ಕೂ ಮೊದಲು ಪ್ರಾಣಿಗಳಿಗೆ ಅರ್ಪಿಸಲಾಗುತ್ತದೆ. ಆದರೆ ಕೀಟಗಳ ಆರಾಧನೆ ನಮ್ಮಲ್ಲಿ ತೀರಾ ವಿರಳ, ಕೀಟಗಳಿಗೆ ಪ್ರಾಶಸ್ತ್ಯ ನೀಡಿದ ಉದಾಹರಣೆಯನ್ನು ನೀವು ಕೇಳಿರುವುದು ತೀರಾ ಅಪರೂಪ. ಆದರೆ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರವಾದ ಬದರಿನಾಥದಲ್ಲಿ ಕೀಟಕ್ಕೂ ಮೊದಲ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.
ಉತ್ತರಾಖಂಡ್ ರಾಜ್ಯದ ಚಾರ್ ಧಾಮ ಅಥವಾ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬದರಿನಾಥದಲ್ಲಿ ಭಗವಂತನಿಗೆ ನೈವೇದ್ಯವನ್ನು ಅರ್ಪಿಸುವುದಕ್ಕೂ ಮೊದಲು ಪ್ರಾಣಿ ಪಕ್ಷಿ ಹಾಗೂ ಕೀಟಗಳಿಗೆ ಅರ್ಪಿಸಲಾಗುತ್ತದೆ. ಭಾರತದ ಪ್ರಾಚೀನ ದೇಗುಲದಲ್ಲಿ ಒಂದಾದ ಈ ಬದರಿನಾಥದ ಭಗವಂತ ಹೇಳಿಕೇಳಿ ಪ್ರಾಣಿಪ್ರಿಯ ಪಶುಪತಿನಾಥನ ಮತ್ತೊಂದು ರೂಪ. ಇಲ್ಲಿನ ವಿಶೇಷ ನಂಬಿಕೆಗಳು ಈ ದೇಗುಲವನ್ನು ಮತ್ತಷ್ಟು ವಿಶೇಷವಾಗಿಸಿದೆ. ಬದರಿನಾಥ ದೇವಾಲಯದಲ್ಲಿ ಭಗವಂತನಿಗೆ ನೈವೇದ್ಯ ಅರ್ಪಿಸುವ ಮೊದಲು ಹಲವು ಪ್ರಾಣಿ ಪಕ್ಷಿಗಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ, ಇದರಲ್ಲಿ ಜಿರಳೆಗಳು ಕೂಡ ಸೇರಿವೆ.ಇದು ಕೇಳಲು ವಿಚಿತ್ರವೆನಿಸಿದರೂ ನಿಜ.
ಉತ್ತರಾಖಂಡದ ಸ್ಥಳೀಯ ಭಾಷೆಯಲ್ಲಿ ಈ ಜಿರಳೆಗಳನ್ನು ಜೋಡು ಸಾಂಗ್ಲ ಎನ್ನುತ್ತಾರೆ. ಪ್ರತಿದಿನ ಮಧ್ಯಾಹ್ನ ಭಗವಾನ್ ಬದರಿನಾಥನಿಗೆ ರಾಜಭೋಗ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಆದರೆ ಅದಕ್ಕೂ ಮೊದಲು ಇಲ್ಲಿ ಜಿರಳೆಗಳಿಗೆ ನೈವೇದ್ಯ ಅರ್ಪಿಸುವ ಪದ್ಧತಿ ಇದೆ. ಭಗವಾನ್ ಬದರಿನಾಥ ರಾಜಭೋಗ ಸ್ವೀಕರಿಸುವ ಮೊದಲು ತನ್ನೆಲ್ಲಾ ಪ್ರಾಣಿ ಪಕ್ಷಿಗಳು ಕೂಡ ಆಹಾರ ಸೇವಿಸಿ ತೃಪ್ತಿಪಡಬೇಕು ಎಂದು ಭಾವಿಸುತ್ತಾನೆ ಇದೇ ನಂಬಿಕೆಯಿಂದಾಗಿ ಇತರ ಪ್ರಾಣಿ ಪಕ್ಷಿಗಳ ಜೊತೆಗೆ ಜಿರಳೆಗಳಿಗೂ ಇಲ್ಲಿ ಮೊದಲು ನೈವೇದ್ಯ ಅರ್ಪಿಸಲಾಗುತ್ತದೆ.
ಬದರಿನಾಥ ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನ ಜಿರಳೆಗಳಿಗೆ ಅನ್ನದ ನೈವೇದ್ಯ ಅರ್ಪಿಸಲಾಗುತ್ತದೆ. ಅದನ್ನು ತಪ್ತಕುಂಡದ ಬಳಿ ಗರುಡ ಕುಟಿಯಲ್ಲಿ ಇಡಲಾಗುತ್ತದೆ. ಅಲ್ಲಿ ಜಿರಳೆಗಳು ಈ ಆಹಾರವನ್ನು ಸೇವಿಸಲು ಬರುತ್ತವೆ. ನಂತರ ಬದರಿನಾಥನಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಈ ಪದ್ಧತಿಯನ್ನು 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಆರಂಭಿಸಿದರು ಎಂಬ ನಂಬಿಕೆ ಇದೆ.


