10:30 PM (IST) Mar 31

Karnataka News Live 31 March 2026 ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್ - ಕನ್ನಡ ಕುವರಿ ದಾನ್ವಿ ಸುರೇಶ್ ಗೌಡಗೆ ಬೆಳ್ಳಿ ಪದಕ

ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.

Read Full Story
09:57 PM (IST) Mar 31

Karnataka News Live 31 March 2026 ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು, ಮಣಿಪಾಲ ಆಸ್ಪತ್ರೆ ತೀವ್ರ ನಿಘಾ ಘಟಕಕ್ಕೆ ದಾಖಲು

ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು, ಮಣಿಪಾಲ ಆಸ್ಪತ್ರೆ ತೀವ್ರ ನಿಘಾ ಘಟಕಕ್ಕೆ ದಾಖಲು, ವೈದ್ಯರ ತಂಡ ಸಚಿವರಿಗೆ ಚಿಕಿತ್ಸೆ ನೀಡುತ್ತಿದೆ. ಡಿ ಸುಧಾಕರ್ ಆರೋಗ್ಯದ ಅಪ್‌ಡೇಟ್ ಇಲ್ಲಿದೆ.

Read Full Story
08:53 PM (IST) Mar 31

Karnataka News Live 31 March 2026 ಹಿಂದೂ-ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆ - ಬಿ.ವೈ.ವಿಜಯೇಂದ್ರ

ಹಿಂದೂ ಮತ್ತು ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆಯಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Read Full Story
07:55 PM (IST) Mar 31

Karnataka News Live 31 March 2026 ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ

ಟಾಕ್ ಶೋವೊಂದರಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮ್ಮ ತಮ್ಮ ಪವನ್ ಕಲ್ಯಾಣ್ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗನ್‌ಗಳ ಮೇಲೆ ವಿಪರೀತ ಆಸಕ್ತಿ ಹೊಂದಿದ್ದ ಪವನ್, ನಕ್ಸಲೈಟ್ ಆಗಿಬಿಡುತ್ತಾನೇನೋ ಎಂದು ತಾವು ಭಯಪಟ್ಟಿದ್ದಾಗಿ ಚಿರಂಜೀವಿ ಹೇಳಿಕೊಂಡಿದ್ದಾರೆ.

Read Full Story
07:45 PM (IST) Mar 31

Karnataka News Live 31 March 2026 'ನನ್ನ ರಾಮ ಯಾರು..' ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ನಟ ಕಿಶೋರ್‌ ಪೋಸ್ಟ್‌

ನಟ ಕಿಶೋರ್ ಅವರು ರಾಮನ ಕುರಿತು ತಮ್ಮ ವಿಭಿನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ವ್ಯವಸ್ಥೆಗಾಗಿ ವಾಲಿಯನ್ನು ಕೊಂದ, ಸೀತೆಯನ್ನು ಕಾಡಿಗಟ್ಟಿದ ರಾಮನಿಗಿಂತ, ಸಹಾನುಭೂತಿಯಿಂದ ಎಲ್ಲವನ್ನೂ ಪ್ರಶ್ನಿಸುವ, ಸಂವಾದಕ್ಕೆ ಒತ್ತು ನೀಡುವ ಮಾನವೀಯ ರಾಮನೇ 'ನನ್ನ ರಾಮ' ಎಂದು ಅವರು ಪ್ರತಿಪಾದಿಸಿದ್ದಾರೆ.

Read Full Story
07:01 PM (IST) Mar 31

Karnataka News Live 31 March 2026 ಕೆಡಿ ಧ್ರುವ ಸರ್ಜಾಗೆ ಸಮಂತಾ ಸವಾಲ್ - ‘ಮಾ ಇಂಟಿ ಬಂಗಾರಂ’ ಕದನಕ್ಕಿಳಿದ ಸ್ಯಾಮ್

ಸಮಂತಾ ರುತ್ ಪ್ರಭು.. ಈ ಹೆಸ್ರು ಸೌತ್ ಸಿನಿ ಇಂಡಸ್ಟ್ರಿಯ ಪ್ರೈಡ್​.. ಯಾಕಂದ್ರೆ ಕಳೆದ 15 ವರ್ಷದಿಂದ ಸಮಂತಾ ತೆಲುಗು ಚಿತ್ರರಂಗವನ್ನ ಆಳುತ್ತಿದ್ದಾರೆ. ರಶ್ಮಿಕಾರಂತಹ ಸ್ಟ್ರಾಂಗೆಸ್ಟ್​​ ನಟಿಯರು ಬಂದ್ರು ಅವರಿಗಿಂತ ಗಟ್ಟಿಗಿತ್ತಿ.

Read Full Story
06:59 PM (IST) Mar 31

Karnataka News Live 31 March 2026 ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?

ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಹೈದರಾಬಾದ್‌ನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಆಡುಗೋಡಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

Read Full Story
06:55 PM (IST) Mar 31

Karnataka News Live 31 March 2026 ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ - ವಿಡಿಯೋ ಮೂಲಕ ವೈದ್ಯರ ಮಾಹಿತಿ

ಮೈಸೂರಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವನ್ನು ತಿಂದು ಮಗುವೊಂದು ಉಸಿರುಗಟ್ಟಿ ಮೃತಪಟ್ಟಿದೆ. ಈ ರೀತಿಯ ಘಟನೆಗಳು ನಡೆದಾಗ ಮಗುವಿನ ಜೀವ ಉಳಿಸಲು ತಕ್ಷಣವೇ ಮನೆಯಲ್ಲಿ ಯಾವ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ವಿವರಿಸಿದ್ದಾರೆ.
Read Full Story
06:30 PM (IST) Mar 31

Karnataka News Live 31 March 2026 ಕುಚಿಕುಗಳಾದ ವಿಜಯ್​ ಸೇತುಪತಿ-ರಿಷಬ್ ಶೆಟ್ಟಿ - ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ!

ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್​ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್​ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ.

Read Full Story
06:06 PM (IST) Mar 31

Karnataka News Live 31 March 2026 ಕಾಲಿಟ್ಟಲ್ಲೆಲ್ಲಾ ಧೂಳು.. ಕಟ್ಟಿದ್ದು ಹೇಗೆ ಕೋಟಿಗಳ ಕೋಟೆ..? ಇದು ರಿಯಲ್ ರಾಕಿ ಭಾಯ್ ರೋಚಕ ಕಥೆ!

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ 'ಕೆಜಿಎಫ್‌'ಗೂ ಮೊದಲು ಮತ್ತು ಕೆಜಿಎಫ್ ನಂತರ ಅಂತ ಡಿವೈಡ್ ಮಾಡಬೇಕು.

Read Full Story
05:57 PM (IST) Mar 31

Karnataka News Live 31 March 2026 ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​ - ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story
04:32 PM (IST) Mar 31

Karnataka News Live 31 March 2026 ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ - ಮೂವರು ಆರೋಪಿಗಳು ವಶಕ್ಕೆ

ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ.

Read Full Story
04:23 PM (IST) Mar 31

Karnataka News Live 31 March 2026 ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ಮುಂದೆ ದುಬಾರಿ - 100% ರೋಡ್ ಟ್ಯಾಕ್ಸ್ ವಿನಾಯಿತಿಗೆ ರಾಜ್ಯ ಸರ್ಕಾರ ಬ್ರೇಕ್!

ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿದ್ದ ಸಂಪೂರ್ಣ ರಸ್ತೆ ತೆರಿಗೆ ವಿನಾಯಿತಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಇನ್ನು ಮುಂದೆ, ವಾಹನದ ಬೆಲೆಗೆ ಅನುಗುಣವಾಗಿ 5% ರಿಂದ 10% ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುವುದು. 

Read Full Story
04:01 PM (IST) Mar 31

Karnataka News Live 31 March 2026 IPL 2026 - ಪಂಜಾಬ್ ಕಿಂಗ್ಸ್ ಚಾಲೆಂಜ್ ಗೆಲ್ಲುತ್ತಾ ಗುಜರಾತ್ ಟೈಟಾನ್ಸ್?

ಮುಲ್ಲಾನ್‌ಪುರದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ರಾಷ್ಟ್ರೀಯ ತಂಡಕ್ಕೆ ಮರಳಲು ಯತ್ನಿಸುತ್ತಿರುವ ಹೊಸ ನಾಯಕರಾದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಮೇಲೆ ಎಲ್ಲರ ಕಣ್ಣಿದ್ದು, ಎರಡೂ ತಂಡಗಳು ಗೆಲುವಿನ ಆರಂಭದ ನಿರೀಕ್ಷೆಯಲ್ಲಿವೆ.
Read Full Story
03:07 PM (IST) Mar 31

Karnataka News Live 31 March 2026 'ಪ್ರತಿ ಕಚ್ಚುವಿಕೆಯಲ್ಲಿ ಆನಂದ..' ಕನ್ನಡ ಕುಲಗೆಡಿಸಿದ ಬ್ಯಾಟರ್‌ ಬ್ಯಾಕ್ಸ್‌ಗೆ ನೆಟ್ಟಿಗರ ಛೀಮಾರಿ

ಬೆಂಗಳೂರಿನಲ್ಲಿ 'ಬ್ಯಾಟರ್ ಬಾಕ್ಸ್' ಎಂಬ ಕಂಪನಿಯು ತನ್ನ ಜಾಹೀರಾತಿನಲ್ಲಿ "Enjoyment in every bite" ಎಂಬುದನ್ನು 'ಪ್ರತಿ ಕಚ್ಚುವಿಕೆಯಲ್ಲಿ ಆನಂದ' ಎಂದು ತಪ್ಪಾಗಿ ಭಾಷಾಂತರಿಸಿದೆ. ಈ ಭಾಷಾ ಪ್ರಮಾದವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
01:41 PM (IST) Mar 31

Karnataka News Live 31 March 2026 ಐಪಿಎಲ್ ಪಂದ್ಯಗಳಿಗೆ 3, ಅಂತಾರಾಷ್ಟ್ರೀಯ ಪಂದ್ಯಗಳಿಗೆ 2, ಶಾಸಕರಿಗೆ ಉಚಿತ ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಗೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ, ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ ಮೂರು ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ಉಚಿತ ಟಿಕೆಟ್‌ ನೀಡಲು ಕೆಎಸ್‌ಸಿಎ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ ಹೆಚ್ಚಳ, ಹೊಸ ಕ್ರೀಡಾಂಗಣದ ಬಗ್ಗೆಯೂ ಚರ್ಚೆ.

Read Full Story
12:53 PM (IST) Mar 31

Karnataka News Live 31 March 2026 'ನಿಮ್ಮಂಥ ಕಳ್ಳೆತ್ತು ದೇಶದಲ್ಲೇ ಇಲ್ಲ.." ಬಿಜೆಪಿ ಕಳ್ಳೆತ್ತು ಎಂಬ ಸಿಎಂ ಹೇಳಿಕೆಗೆ ಚಲವಾದಿ ನಾರಾಯಣಸ್ವಾಮಿ ತಿರುಗೇಟು

ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಮುಖಂಡ ಚಲುವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಜನರೇ ಮಣ್ಣು ಮುಚ್ಚಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Read Full Story
12:51 PM (IST) Mar 31

Karnataka News Live 31 March 2026 Tumakuru - ಹೆಂಡ್ತಿಯೊಂದಿಗೆ ಅಕ್ರಮ ಸಂಬಂಧ ಶಂಕೆ - ತಮ್ಮನ ಹೊಟ್ಟೆಗೆ ಚಾಕು ಚುಚ್ಚಿದ ಅಣ್ಣ

 ಅಣ್ಣನೇ ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.

Read Full Story
12:41 PM (IST) Mar 31

Karnataka News Live 31 March 2026 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ - ಭಾವಿ ಪತಿಯ ಅಂಕಲ್​ ಎಂದು ಕರೆದು ಪೇಚಿಗೆ ಸಿಲುಕಿದ್ದ ಸ್ಟೋರಿ ಇಲ್ಲಿದೆ

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೆಪ್ಟೆಂಬರ್‌ನಲ್ಲಿ ಹೊಸ ಅತಿಥಿಯ ಆಗಮನವಾಗಲಿದ್ದು, ಈ ಸಂತಸದ ಸುದ್ದಿಯನ್ನು ಪ್ಯಾರಿಸ್​ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. 

Read Full Story
12:19 PM (IST) Mar 31

Karnataka News Live 31 March 2026 ಅನ್ಯಧರ್ಮಿಯರಿಂದ ತುಳುನಾಡು ದೈವಕ್ಕೆ ಅಪಮಾನ; ಮದುಮಗ ಅಬ್ದುಲ್‌ಗೆ ಕೊರಗಜ್ಜನ ವೇಷ ತೊಡಿಸಿ ಎಳೆದೊಯ್ದು ಅಪಹಾಸ್ಯ

ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Read Full Story