ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್: ಕನ್ನಡ ಕುವರಿ ದಾನ್ವಿ ಸುರೇಶ್ ಗೌಡಗೆ ಬೆಳ್ಳಿ ಪದಕ
ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.

ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್
ಬೆಂಗಳೂರು (ಮಾ.31): ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯ ಮತ್ತು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಬೆಳ್ಳಿ ಪದಕ
ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಸಾಧನೆ ಸುಲಭ ಅನ್ನೋದನ್ನ ದಾನ್ವಿ ಸುರೇಶ್ ಗೌಡ ಸಾಬೀತುಪಡಿಸಿದ್ದಾಳೆ. ಮಾರ್ಚ್ 26 ರಿಂದ 29 ರವರೆಗೆ ಚೆನ್ನೈನಲ್ಲಿ ಆಯೋಜಿಸಲಾಗಿದ್ದ 'ಅಸ್ಮಿತಾ ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿ 2025-26'ರಲ್ಲಿ ದಾನ್ವಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಪ್ರಬಲ ಪೈಪೋಟಿ
ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದ ದಾನ್ವಿ, ರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಳು. ಈ ಯಶಸ್ಸಿನ ಹಿಂದೆ ಸನ್ ಮಾರ್ಷಲ್ ಆರ್ಟ್ಸ್‌ನ ವಾಕೋ ಇಂಡಿಯಾ ತರಬೇತುದಾರರಾದ ದತ್ತು, ಸಂತೋಷ್ ಹಾಗೂ ರಾಜು ಅವರ ಕಠಿಣ ಮಾರ್ಗದರ್ಶನವಿದೆ.
ಚಿನ್ನದ ಪದಕ ಗೆಲ್ಲುವ ಗುರಿ
ಈ ಸಾಧನೆಯು ಎಸ್‌ಬಿಎಸ್ ಶಿಕ್ಷಣ ಸಂಸ್ಥೆ ಮತ್ತು ಸನ್ ಮಾರ್ಷಲ್ ಅಕಾಡೆಮಿಗೆ ಅಪಾರ ಹೆಮ್ಮೆ ತಂದಿದೆ ಟ್ರೈನರ್‌ನ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದಿಂದ ಈ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಎಂದು ದಾನ್ವಿ ಹೇಳಿಕೊಂಡಿದ್ದಾಳೆ.
ಎಲ್ಲೆಡೆ ಶ್ಲಾಘನೆ
ಇದೇ ವೇಳೆ ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ವಾಕೋ ಅಂತರಾಷ್ಟ್ರೀಯ ರೆಫ್ರಿ ಶ್ರೀ ರವಿ ಅವರ ಬೆಂಬಲವನ್ನು ಸ್ಮರಿಸಲಾಗಿದ್ದು, ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಕ್ರೀಡಾ ಲೋಕದ ಈ ಉದಯೋನ್ಮುಖ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

