MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಆಂಜನೇಯನಿಗೆ 'ನಾಮ' ಹಾಕಿದ ಉದ್ಯಮಿ: ಅಂಜನಾದ್ರಿಗೆ ಕೊಟ್ಟಿದ್ದು ₹2.50Cr ಚಿನ್ನವಲ್ಲ, ತಾಮ್ರ ಲೇಪಿತ 28 ಗ್ರಾಂ ಬಂಗಾರ!

ಆಂಜನೇಯನಿಗೆ 'ನಾಮ' ಹಾಕಿದ ಉದ್ಯಮಿ: ಅಂಜನಾದ್ರಿಗೆ ಕೊಟ್ಟಿದ್ದು ₹2.50Cr ಚಿನ್ನವಲ್ಲ, ತಾಮ್ರ ಲೇಪಿತ 28 ಗ್ರಾಂ ಬಂಗಾರ!

ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.

2 Min read
Author : Sathish Kumar KH
Published : May 11 2026, 01:45 PM IST
Share this Photo Gallery
  • FB
  • TW
  • Linkdin
  • Whatsapp
16
ದೇವರಿಗೆ ಪಂಗನಾಮ ಹಾಕಿದ ಉದ್ಯಮಿ
Image Credit : Asianet News

ದೇವರಿಗೆ ಪಂಗನಾಮ ಹಾಕಿದ ಉದ್ಯಮಿ

ಕೊಪ್ಪಳ: ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದಾನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದ ಉದ್ಯಮಿಯೊಬ್ಬರ ಅಸಲಿ ಮುಖವಾಡ ಈಗ ಬಯಲಾಗಿದೆ. ಅವರು ನೀಡಿದ್ದು ಅಪ್ಪಟ ಚಿನ್ನದ ಆಭರಣಗಳಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred
26
ಏನಿದು ಪ್ರಕರಣ?
Image Credit : Asianet News

ಏನಿದು ಪ್ರಕರಣ?

ಕಳೆದ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಆಗಮಿಸಿ ಅಂಜನಾದ್ರಿ ದೇವಸ್ಥಾನಕ್ಕೆ ಭವ್ಯವಾದ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದಾನವಾಗಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ತಮ್ಮ ಆಪ್ತ ಸ್ನೇಹಿತರಾದ ಮಹೇಶ್ ರೆಡ್ಡಿ ಅವರು ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೇವರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದರು.

Related Articles

Related image1
ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!
Related image2
ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ: ಎಸಿ ಮಾಲಗಿತ್ತಿ ಹೇಳೋದೇನು?
36
ಪರಿಶೀಲನೆ ವೇಳೆ ಬಯಲಾದ ಸತ್ಯ:
Image Credit : Asianet News

ಪರಿಶೀಲನೆ ವೇಳೆ ಬಯಲಾದ ಸತ್ಯ:

ದಾನವಾಗಿ ಪಡೆದ ಆಭರಣಗಳನ್ನು ಜಿಲ್ಲಾಡಳಿತವು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ನಿಯಮದಂತೆ ಪರಿಶೀಲನೆ ನಡೆಸಿತು. ಸಹಾಯಕ ಆಯುಕ್ತರಾದ (AC) ಮಹೇಶ್ ಮಾಲಗಿತ್ತಿ ಅವರ ನೇತೃತ್ವದಲ್ಲಿ ಆಭರಣಗಳ ಖಚಿತತೆ ಪರೀಕ್ಷೆ ನಡೆಸಿದಾಗ ಅಧಿಕಾರಿಗಳಿಗೆ ಭಾರಿ ಶಾಕ್ ಕಾದಿತ್ತು.

46
ತಾಮ್ರಕ್ಕೆ ಚಿನ್ನದ ಲೇಪನ
Image Credit : Kannada Prabha

ತಾಮ್ರಕ್ಕೆ ಚಿನ್ನದ ಲೇಪನ

ಕೋಟಿ ಮೌಲ್ಯದ ಬಂಗಾರ ಎಂದು ನಂಬಲಾಗಿದ್ದ ಆಭರಣಗಳಲ್ಲಿ ಪತ್ತೆಯಾಗಿದ್ದು ಕೇವಲ 28 ಗ್ರಾಂ ಬಂಗಾರ ಮಾತ್ರ! ಉಳಿದಂತೆ ಇಡೀ ಆಭರಣಗಳು ತಾಮ್ರದಿಂದ ಮಾಡಲ್ಪಟ್ಟಿದ್ದು, ಮೇಲೆ ಚಿನ್ನದ ಲೇಪನ (Gold Plated) ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.

56
ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ
Image Credit : Asianet News

ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ

ಉದ್ಯಮಿ ಮಹೇಶ್ ರೆಡ್ಡಿ ಅವರು ಈ ಆಭರಣಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿರಲಿಲ್ಲ. ಉದ್ಯಮಿಯ ಕೋರಿಕೆಯ ಮೇರೆಗೆ ಎರಡು ದಿನಗಳ ಕಾಲ ಮಾತ್ರ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ ಈಗ ಸತ್ಯಾಂಶ ಬಯಲಾದ ಬೆನ್ನಲ್ಲೇ, ಜಿಲ್ಲಾಧಿಕಾರಿಗಳು ಉದ್ಯಮಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಭರಣಗಳ ನಿಖರ ಮೌಲ್ಯ ಮತ್ತು ಅದರ ಅಧಿಕೃತ ಬಿಲ್‌ಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸಲಾಗಿದೆ.

66
ಖಜಾನೆಗೆ ಸೇರದ ಆಭರಣಗಳು:
Image Credit : Asianet News

ಖಜಾನೆಗೆ ಸೇರದ ಆಭರಣಗಳು:

ಅಧಿಕೃತ ದಾಖಲೆಗಳು ಮತ್ತು ಬಿಲ್‌ಗಳಿಲ್ಲದ ಕಾರಣ, ಜಿಲ್ಲಾಡಳಿತವು ಈ ಆಭರಣಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ನಿರಾಕರಿಸಿದೆ. ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದ ಈ ಘಟನೆ ಈಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯ ಜೊತೆ ಬಂದು ಕೋಟಿ ಮೌಲ್ಯದ ದಾನ ಎಂದು ಪ್ರಚಾರ ಪಡೆದ ಉದ್ಯಮಿ, ಈಗ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕೊಪ್ಪಳ
ದೇವಸ್ಥಾನ
ಕರ್ನಾಟಕ ಸುದ್ದಿ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ. 1.50 ರಷ್ಟು ಹೆಚ್ಚಳ - ಸರ್ಕಾರದ ಆದೇಶ ಪ್ರಕಟ
Recommended image2
ಚಿರತೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಿ ಅರಣ್ಯ ಇಲಾಖೆ
Recommended image3
ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ
Related Stories
Recommended image1
ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!
Recommended image2
ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ: ಎಸಿ ಮಾಲಗಿತ್ತಿ ಹೇಳೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved