MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ

ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ

ಟಾಕ್ ಶೋವೊಂದರಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮ್ಮ ತಮ್ಮ ಪವನ್ ಕಲ್ಯಾಣ್ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗನ್‌ಗಳ ಮೇಲೆ ವಿಪರೀತ ಆಸಕ್ತಿ ಹೊಂದಿದ್ದ ಪವನ್, ನಕ್ಸಲೈಟ್ ಆಗಿಬಿಡುತ್ತಾನೇನೋ ಎಂದು ತಾವು ಭಯಪಟ್ಟಿದ್ದಾಗಿ ಚಿರಂಜೀವಿ ಹೇಳಿಕೊಂಡಿದ್ದಾರೆ.

2 Min read
Author : Suchethana D
Published : Mar 31 2026, 07:55 PM IST
Share this Photo Gallery
  • FB
  • TW
  • Linkdin
  • Whatsapp
16
'ಪವರ್ ಸ್ಟಾರ್' ಪವನ್ ಕಲ್ಯಾಣ್​
Image Credit : Asianet News

'ಪವರ್ ಸ್ಟಾರ್' ಪವನ್ ಕಲ್ಯಾಣ್​

ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ ಕೋನಿಡೇಲಾ ಕಲ್ಯಾಣ್ ಬಾಬು ಅರ್ಥಾತ್​ 'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan) ಸದ್ಯ 'ಉಸ್ತಾದ್ ಭಗತ್ ಸಿಂಗ್' (Ustaad Bhagat Singh) ಸಿನಿಮಾದಿಂದ ಸದ್ದು ಮಾಡುತ್ತಿದ್ದಾರೆ. ಕಳೆದ ಮಾರ್ಚ್ 19ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾದರೂ ದುರಂಧರ್​-2 ಹೊಡೆತಕ್ಕೆ ಸಿಲುಕಿ ಓಟಿಟಿಯತ್ತ ಮುಖ ಮಾಡಿದೆ.

26
ಸಕತ್​ ಇಂಟರೆಸ್ಟಿಂಗ್​ ಹಳೆಯ ವಿಡಿಯೋ
Image Credit : Asianet News

ಸಕತ್​ ಇಂಟರೆಸ್ಟಿಂಗ್​ ಹಳೆಯ ವಿಡಿಯೋ

ಇವೆಲ್ಲವುಗಳ ನಡುವೆ ಅವರ ಕುರಿತು ಸಕತ್​ ಇಂಟರೆಸ್ಟಿಂಗ್​ ಹಳೆಯ ವಿಡಿಯೋ ಒಂದು ಪುನಃ ವೈರಲ್​ ಆಗುತ್ತದೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ, ನಟನೆಗೆ ಬರದಿದ್ದರೆ ನಕ್ಸಲ್​ ಆಗಿಬಿಡ್ತಿದ್ರಾ ಎನ್ನುವ ಪ್ರಶ್ನೆ ಕಾಡಿದೆ. ಅದಕ್ಕೆ ಕಾರಣ, ಅವರ ಅಣ್ಣ , ನಟ ಚಿರಂಜೀವಿಯವರೇ (Chiranjeevi) ಇದನ್ನು ಹೇಳಿದ್ದು. ಹಳೆಯ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Related Articles

Related image1
ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು
Related image2
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
36
 ಚಿರಂಜೀವಿ ಹೇಳಿದ್ದೇನು?
Image Credit : Social Media

ಚಿರಂಜೀವಿ ಹೇಳಿದ್ದೇನು?

ಪವನ್ ಕಲ್ಯಾಣ್ ಅವರ ಬಾಲ್ಯ, ಯೌವ್ವನ ಸಾಕಷ್ಟು ಅಚ್ಚರಿ ವಿಷಯಗಳನ್ನು ಹೊಂದಿದೆ. ಈಚೆಗೆ ಟಾಕ್ ಶೋವೊಂದರಲ್ಲಿ 'ಮೆಗಾ ಸ್ಟಾರ್‌' ಚಿರಂಜೀವಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮನ ಕುರಿತು ಶಾಕಿಂಗ್​ ನ್ಯೂಸ್ ಹೇಳಿದ್ದಾರೆ. 'ನನ್ನ ತಮ್ಮ ಪವನ್ ಕಲ್ಯಾಣ್ ಎಲ್ಲಿ, ನಕ್ಸಲೈಟ್ (Naxalite) ಆಗಿಬಿಡ್ತಾನೋ ಅಂತ ಭಯಪಟ್ಟಿದ್ದೆ..' ಎಂದೂ ಅವರು ಹೇಳಿಕೊಂಡಿದ್ದಾರೆ.

46
ರಾಜಕೀಯದಲ್ಲೂ ಹೆಸರು
Image Credit : Asianet News

ರಾಜಕೀಯದಲ್ಲೂ ಹೆಸರು

ನಟನೆಯ ಜೊತೆಗೆ ಜನಸೇನಾ ಪಕ್ಷವನ್ನು ಕಟ್ಟಿ ರಾಜಕೀಯವಾಗಿ ಹೆಸರು ಮಾಡಿರೋ ಪವನ್​ ಕಲ್ಯಾಣ್​ ಕುರಿತು ಅಣ್ಣ ಹಂಚಿಕೊಂಡಿರುವ ಇಂಟರೆಸ್ಟಿಂಗ್​ (interesting) ಸುದ್ದಿಗಳಲ್ಲಿ ಇದೂ ಒಂದು. ' ಪವನ್​ ಚಿಕ್ಕ ವಯಸ್ಸಿನಲ್ಲಿ ಯಾವಾಗಲೂ ನಕಲಿ ಗನ್ ಜೊತೆಗೆ ಆಡುತ್ತಿದ್ದನು. ಅವನಿಗೆ ಗನ್​ ಎಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲಿಯೇ ಸದಾ ಮುಳುಗಿರುತ್ತಿದ್ದ. ಆತ ವರ್ತಿಸುತ್ತಿದ್ದ ರೀತಿ ನೋಡಿ, ಎಲ್ಲಿ ನಕ್ಸಲರ ಜೊತೆ ಸೇರಿ ಬಿಡ್ತಾನೋ ಎಂದು ಭಯಗೊಂಡಿದ್ದೆವು' ಎಂದು ಚಿರಂಜೀವಿ ಹೇಳಿದ್ದಾರೆ.

56
ಹಳೆಯ ಘಟನೆ ಮೆಲುಕು
Image Credit : Asianet News

ಹಳೆಯ ಘಟನೆ ಮೆಲುಕು

ಈ ಕುರಿತು ಒಂದು ಇಂಟರೆಸ್ಟಿಂಗ್​ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. 'ಒಮ್ಮೆ ನಾನು ಸಿಂಗಪೂರ್‌ಗೆ ಹೋಗಿದ್ದೆ. ಅಲ್ಲಿಂದ ಏನ್ ತರಬೇಕು ಎಂದು ಕೇಳಿದ್ದೆ. ಪವನ್ ಸೆಮಿ ಆಟೋಮ್ಯಾಟಿಕ್ ಗನ್ ತರ್ತಿಯಾ ಇಲ್ಲಿ ನನಗೆ ಸಿಗುತ್ತಿಲ್ಲ ಎಂದು ಕೇಳಿದ್ದ. ಇದರಿಂದ ನನಗೆ ಆದ ಶಾಕ್​ ಅಷ್ಟಿಷ್ಟಲ್ಲ' ಎಂದಿದ್ದಾರೆ. ಒಂದು ದಿನ ಆತ ಡಮ್ಮಿ ಗನ್ ಇಟ್ಟುಕೊಂಡು ಹೋಗುತ್ತಿದ್ದ. ರೈಲ್ವೇ ಸ್ಟೇಷನ್‌ನಲ್ಲಿ ಆತನನ್ನು ತಡೆದು ನಿಲ್ಲಿಸಲಾಗಿತ್ತು. ಆಮೇಲೆ ಅದು ಡಮ್ಮಿ ಗನ್ (Dummy gun) ಎಂದು ತಿಳಿದ ಮೇಲೆ ಕಳುಹಿಸಿದ್ದರು. ಹೀಗೆ ಗನ್​ ಹುಚ್ಚು ನೋಡಿ ನಕ್ಸಲೈಟ್​ಗೆ ಸೇರುತ್ತಾನೆ ಎಂದು ಹೆದರಿಕೊಂಡಿದ್ದೆವು' ಎಂದಿದ್ದಾರೆ.

66
ತಮ್ಮನ ಬಗ್ಗೆ ಹೆಮ್ಮೆ
Image Credit : Asianet News

ತಮ್ಮನ ಬಗ್ಗೆ ಹೆಮ್ಮೆ

ಪವನ್ ಕಲ್ಯಾಣ್ ಚಿರಂಜೀವಿ ಮಕ್ಕಳಾದ ಸುಷ್ಮಿತಾ (Sushmitha) ಮತ್ತು ರಾಮ್ ಚರಣ್ ಮಧ್ಯೆ ಜಗಳ ತಂದು ಬಿಡುತ್ತಿದ್ದ. ಅವರು ಜಗಳ ಮಾಡುವಾಗ ಎಂಜಾಯ್ ಮಾಡುತ್ತಾ ಇದ್ದ. ಅವನ ತುಂಟಾಟ ಅಷ್ಟಿಷ್ಟಲ್ಲ ಎಂದು ಬಾಲ್ಯದ ನೆನಪು ಮಾಡಿಕೊಂಡಿದ್ದಾರೆ. 'ಪವನ್‌ ಕಲ್ಯಾಣ್‌ ಮುಂದಿನ ದಿನಗಳಲ್ಲಿ ಒಬ್ಬ ದೊಡ್ಡ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ. ನೋವಿಗೆ ಸ್ಪಂದಿಸುವ ಆತನ ಗುಣ, ಏನಾದರೂ ಒಳ್ಳೆಯದು ಮಾಡಬೇಕೆಂಬ ಆತನ ಹಂಬಲವನ್ನು ನಾನು ನೋಡಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ಅದು ಆತನಲ್ಲಿದೆ. ಅವನಿಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅವರೆಲ್ಲಾ ಕೇವಲ ಫ್ಯಾನ್ಸ್ ಅಲ್ಲ, ಭಕ್ತರು. ಎಲ್ಲ ನಟರಿಗೂ ಫ್ಯಾನ್ಸ್ ಇದ್ದಾರೆ. ಆದರೆ ಪವನ್‌ ಕಲ್ಯಾಣ್‌ಗೆ ಭಕ್ತರಿದ್ದಾರೆ. ಪವನ್ ನಟನಾಗುವುದಕ್ಕಿಂತ ಉತ್ತಮ ರಾಜಕೀಯ ನಾಯಕ ಆಗುತ್ತಾರೆ ಎಂದು ಚಿರಂಜೀವಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪವನ್ ಕಲ್ಯಾಣ್
ಚಿರಂಜೀವಿ
ನಕ್ಸಲೈಟ್
ಮನರಂಜನಾ ಸುದ್ದಿ
ರಾಜಕೀಯ ಸುದ್ದಿ
ಆಂಧ್ರ ಪ್ರದೇಶ

Latest Videos
Recommended Stories
Recommended image1
'ನನ್ನ ರಾಮ ಯಾರು..' ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ನಟ ಕಿಶೋರ್‌ ಪೋಸ್ಟ್‌
Recommended image2
ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು
Recommended image3
Now Playing
ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Related Stories
Recommended image1
ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು
Recommended image2
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved