MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ: ಭಾವಿ ಪತಿಯ ಅಂಕಲ್​ ಎಂದು ಕರೆದು ಪೇಚಿಗೆ ಸಿಲುಕಿದ್ದ ಸ್ಟೋರಿ ಇಲ್ಲಿದೆ

2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ: ಭಾವಿ ಪತಿಯ ಅಂಕಲ್​ ಎಂದು ಕರೆದು ಪೇಚಿಗೆ ಸಿಲುಕಿದ್ದ ಸ್ಟೋರಿ ಇಲ್ಲಿದೆ

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೆಪ್ಟೆಂಬರ್‌ನಲ್ಲಿ ಹೊಸ ಅತಿಥಿಯ ಆಗಮನವಾಗಲಿದ್ದು, ಈ ಸಂತಸದ ಸುದ್ದಿಯನ್ನು ಪ್ಯಾರಿಸ್​ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. 

2 Min read
Author : Suchethana D
Published : Mar 31 2026, 12:41 PM IST
Share this Photo Gallery
  • FB
  • TW
  • Linkdin
  • Whatsapp
17
2ನೇ ಮಗುವಿನ ನಿರೀಕ್ಷೆಯಲ್ಲಿ ಭುವನ್​ ಹರ್ಷಿಕಾ ದಂಪತಿ
Image Credit : Instagram

2ನೇ ಮಗುವಿನ ನಿರೀಕ್ಷೆಯಲ್ಲಿ ಭುವನ್​-ಹರ್ಷಿಕಾ ದಂಪತಿ

ನಟ, ಕೋರಿಯೋಗ್ರಾಫರ್​ ಭುವನ್​ ಪೊನ್ನಣ್ಣ ಜೊತೆ 2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹರ್ಷಿಕಾ ಪೂಣಚ್ಚ ಈಗ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. 2004ರ ಅಕ್ಟೋಬರ್​ನಲ್ಲಿ ಮೊದಲ ಮಗಳು ಮಗುವಿಗೆ ತ್ರಿದೇವಿಗೆ ಜನ್ಮ ನೀಡಿದ್ದ ನಟಿ ಇದೀಗ ಇನ್ನೊಂದು ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಅಂದಹಾಗೆ ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದವರು, 2023ರ ಆಗಸ್ಟ್‌ 24ರಂದು ವಿರಾಜಪೇಟೆಯ ಅಮ್ಮತ್ತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

27
ಮಗಳ ಜೊತೆ ಪೋಸ್​
Image Credit : Asianet News

ಮಗಳ ಜೊತೆ ಪೋಸ್​

ಮೊದಲ ಮಗಳ ಜೊತೆ ಪ್ಯಾರಿಸ್ ಐಫಿಲ್ ಟವರ್ ಎದುರು ನಿಂತು ಹರ್ಷಿಕಾ ಹಾಗೂ ಭುವನ್ ಫೋಟೋ ಹಂಚಿಕೊಂಡಿದ್ದಾರೆ. ‘ಈ ಸೆಪ್ಟೆಂಬರ್‌ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರ್ಪಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಮನಸ್ಸು ತುಂಬಿವೆ ಮತ್ತು ಸ್ಕ್ರಿಪ್ಟ್ ಪರಿಪೂರ್ಣವಾಗಿ ಕಾಣುತ್ತದೆ. ಧನ್ಯವಾದಗಳು’ ಎಂದು ಶೀರ್ಷಿಕೆ ನೀಡಲಾಗಿದೆ.

Related Articles

Related image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Related image2
Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
37
ದಂಪತಿ ಲವ್​ ಸ್ಟೋರಿ
Image Credit : bhuvann ponnanna instagram

ದಂಪತಿ ಲವ್​ ಸ್ಟೋರಿ

ತಮ್ಮ ಮತ್ತು ಭುವನ್​ ಪೊನ್ನಣ್ಣ ಅವರ ಕುತೂಹಲದ ಲವ್​ ಸ್ಟೋರಿಯನ್ನು ಸಂದರ್ಶನವೊಂದರಲ್ಲಿ ನಟಿ ತೆರೆದಿಟ್ಟಿದ್ದರು. ಭುವನ್​ ಅವರನ್ನು ಮೊದಲ ಬಾರಿಗೆ ಅರಿಯದೇ ಅಂಕಲ್​ ಎಂದ ಕುತೂಹಲದ ವಿಷಯವನ್ನು ಹೇಳಿದ್ದ ನಟಿ, ಆ ತಪ್ಪಿಗೆ ಏನಾಯ್ತು ಎಂಬುದನ್ನೂ ತಿಳಿಸಿದ್ದರು. ಭುವನ್​ ಅವರನ್ನು ಮೊದಲ ಬಾರಿಗೆ ಮೀಟ್​ ಆದಾಗ ಏನು ಅನ್ನಿಸ್ತು ಎನ್ನುವ ಪ್ರಶ್ನೆಗೆ ಹರ್ಷಿಕಾ ಅವರು, ಜೋರಾಗಿ ನಗುತ್ತಾ ಮೊದಲ ಬಾರಿಗೆ ಭುವನ್​ ಅವರನ್ನು ಭೇಟಿಯಾಗಿದ್ದು ತುಂಬಾ ತುಂಬಾ ಫನ್ನಿಯಾಗಿದೆ ಎಂದರು.

47
ಅಂಕಲ್​ ಎಂದಿದ್ದ ನಟಿ
Image Credit : bhuvann ponnanna instagram

ಅಂಕಲ್​ ಎಂದಿದ್ದ ನಟಿ

ಅದರ ಬಗ್ಗೆ ವಿವರಿಸಿದ ನಟಿ, 'ನನ್ನ ಅಂಕಲ್​ ಕಾಲ್​ ಮಾಡಿ ಒಂದು ಫ್ಯಾಷನ್​ ಷೋ ಮಾಡ್ತಾ ಇದ್ದೇವೆ. ಇಂಟರ್​ನ್ಯಾಷನಲ್​ ಫ್ಯಾಷನ್​ ಕೋರಿಯೋಗ್ರಾಫರ್​ ಒಬ್ಬರು ನಿಮಗೆ ಕೋರಿಯೋಗ್ರಾಪ್​ ಮಾಡ್ತಾರೆ. ಅವರು ಕೂಡ ಕೊಡವನೇ ಅಂತ ಹೇಳಿದ್ರು. ನಾನು ಓಕೆ ಅಂದೆ. ನನ್ನ 60 ವರ್ಷದ ಅಂಕಲ್​ ಫೋನ್​ ಮಾಡಿ, ಒಬ್ಬರು ಇಂಟರ್​ನ್ಯಾಷನಲ್​ ಲೆವೆಲ್​ ಕೋರಿಯೋಗ್ರಾಫರ್​ ಫೋನ್​ ಮಾಡ್ತಾರೆ ಎಂದಾಗ ಎಲ್ಲರಿಗೂ ಏನು ಅನಿಸತ್ತಪ್ಪ, ಅವರು ಕೂಡ ಒಬ್ಬರು ಅಂಕಲ್ಲೇ ಇರ್ಬೋದು ಎಂದು.

57
ಫೋನ್​ ಕಾಲ್​
Image Credit : bhuvann ponnanna instagram

ಫೋನ್​ ಕಾಲ್​

ಆಮೇಲೆ ಅಲ್ಲಿಂದ ಕಾಲ್​ ಬಂತು, ಹರ್ಷಿಕಾ ಪೂಣಚ್ಚ ಅವ್ರು ಮಾತಾಡೋದಾ ಕೇಳಿದ್ರು. ನಾನು ಹೌದು ಅಂಕಲ್​ ಹೇಳಿ ಅಂದೆ. ಆಗ ಅತ್ತ ಕಡೆಯ ವಾಯ್ಸ್​ ಪಾಸ್​ ಆಗೋಯ್ತು. ಆದರೆ ನನಗೆ ಅರ್ಥ ಆಗ್ಲಿಲ್ಲ. ನಾನೇ ಕಂಟಿನ್ಯೂ ಮಾಡಿ, ನೀವು ಕಾಲ್​ ಮಾಡ್ತೀರಿ ಅಂತ ಜಯಾ ಅಂಕಲ್​ ಹೇಳಿದ್ರು ನನಗೆ. ಅಂಕಲ್​ ನೀವು ಹೇಳಿದ್ದಲ್ಲಿ ನಾನು ಬರ್ತೇನೆ ಎಂದೆ' ಎನ್ನುತ್ತಲೇ ಆ ದಿನ ನಡೆದ ಘಟನೆಯನ್ನು ನಟಿ ಮೆಲುಕು ಹಾಕಿದ್ದಾರೆ.

67
ಶಾಕ್​ ಆಗಿದ್ದ ನಟಿ
Image Credit : bhuvann ponnanna instagram

ಶಾಕ್​ ಆಗಿದ್ದ ನಟಿ

ಅವರು ಆಗ ಓಕೆ ಓಕೆ, ರಿಹರ್ಸಲ್​ಗೆ ಬನ್ನಿ. ಕೊಡವ ಸಮಾಜದಲ್ಲಿ. ನಾನು ವೇಟ್​ ಮಾಡ್ತೇನೆ ಎಂದು ಹೇಳಿ ಫೋನ್​ ಇಟ್ಟರು. ನಾನು ಅಲ್ಲಿ ಹೋದಾಗ, ಆ ಕಡೆಯಿಂದ ಮಾಡೆಲ್​ ರೀತಿಯಲ್ಲಿ ಒಬ್ಬ ಸುಂದರ ಬರ್ತಾ ಇದ್ರು. ನಾನೇನೋ ಇವ್ರು ಮಾಡೆಲ್​ ಇರ್ಬೇಕು ಅಂದುಕೊಂಡು ಸುಮ್ಮನಾದೆ. ಆಮೇಲೆ ಅವ್ರೇ ಬಂದು ಹಲೋ ನಾನು ಭುವನ್​ ಪೊನ್ನಣ್ಣ ಎಂದು ಹೇಳಿದಾಗ ಶಾಕ್​ ಆಗೋಯ್ತು. ಏಕೆಂದ್ರೆ ನನ್ನ ಅಂಕಲ್​ ಅವರ ಹೆಸರು ಹೇಳಿದ್ರು. ಇವ್ರನ್ನೇ ನಾನು ಅಂಕಲ್​ ಎಂದು ಕರೆದುಬಿಟ್ನಾ ಎಂದು ಕಂಗಾಲಾಗಿ ಹೋಗಿ ಏನು ಹೇಳಬೇಕು ಎಂದೇ ತಿಳಿಯಲಿಲ್ಲ ಎಂದು ಮೊದಲ ಬಾರಿ ಭುವನ್​ ಅವರನ್ನು ಮೀಟ್​ ಆಗಿರೋ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

77
ಸೇಡು ತೀರಿಸಿಕೊಂಡಿದ್ದ "ಅಂಕಲ್​"
Image Credit : bhuvann ponnanna instagram

ಸೇಡು ತೀರಿಸಿಕೊಂಡಿದ್ದ "ಅಂಕಲ್​"

ನಾನು ಅಂಕಲ್​ ಎಂದು ಕರೆದ ರಿವೇಂಜ್​ ತೀರಿಸಿಕೊಳ್ಳಲು 22 ಸಲ ನನ್ನನ್ನು ನಡೆಸಿದರು. ಅದೇ ಮೊದಲು ನಾನು ನನ್ನ ಗಂಡನನ್ನು ಮೀಟ್​ ಆಗಿದ್ದು ಎಂದಿದ್ದಾರೆ ಹರ್ಷಿಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಹರ್ಷಿಕಾ ಪೂಣಚ್ಚ
ಸ್ಯಾಂಡಲ್‌ವುಡ್
ಮದುವೆ
ಪ್ರೇಮ ವಿವಾಹ
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
ವಿಜಯ್ ದೇವರಕೊಂಡ ಮೇಲೆ ಈ ಬಾಲಿವುಡ್ ನಟಿಗೆ ಸೀಕ್ರೆಟ್ ಕ್ರಶ್ ಇತ್ತಂತೆ! ಬಹಿರಂಗವಾಗಿಯೇ ಒಪ್ಪಿಕೊಂಡ 'ಟಾಕ್ಸಿಕ್ ನಟಿ'
Recommended image2
ಕರ್ನಾಟಕದಲ್ಲೂ ಗಳಿಕೆಯಲ್ಲಿ ನಂ.1 ಸ್ಥಾನಕ್ಕೇರಿದ 'ಧುರಂಧರ್ 2'.. 'ಬಾಹುಬಲಿ 2' ದಾಖಲೆ ಪುಡಿಪುಡಿ!
Recommended image3
ಕಥೆಯನ್ನು 6 ತಿಂಗಳು ಕಾಯಿಸಿದ ಡಾಲಿ.. ಕೊನೆಗೂ, ಗೆಳೆಯನ ಕಥೆ-ನಿರ್ದೇಶನಕ್ಕೆ ನಿರ್ಮಾಪಕನಾಗಿ ಧನಂಜಯ್ 'ಅಸ್ತು'..!
Related Stories
Recommended image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Recommended image2
Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved