11:00 PM (IST) Mar 30

Karnataka News Liveಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ

ಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ ಶುರುವಾಗಿದೆ. ಶಿವಮೊಗ್ಗದ ಕೆಲೆವೆಡೆ ಸಿಡಿಲಿನ ಆಘಾತ ಜನರನ್ನು ಬೆಚ್ಚಿ ಬೀಳಿಸಿದೆ. ಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿದೆ.

Read Full Story
09:29 PM (IST) Mar 30

Karnataka News LiveSri Raghavendra Mahathme - 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ

'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ 85 ವರ್ಷದ ಸೀತಾಬಾಯಿ ಪಾತ್ರದಲ್ಲಿ ಮಿಂಚುತ್ತಿರುವವರು 23ರ ಯುವ ನಟಿ ಭವಾನಿ ಪುರೋಹಿತ್. ರಂಗಭೂಮಿ ಹಿನ್ನೆಲೆಯುಳ್ಳ ಇವರು, ಎಂಬಿಎ ಪದವೀಧರೆಯಾಗಿದ್ದು, ಈ ಸವಾಲಿನ ಪಾತ್ರವನ್ನು ನಿಭಾಯಿಸಿದ ತಮ್ಮ ಜರ್ನಿ ಮತ್ತು ಆರಂಭಿಕ ತೊಂದರೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
Read Full Story
05:13 PM (IST) Mar 30

Karnataka News LiveToxic ನಾಡಿಯಾ ಪಾತ್ರಕ್ಕೆ ಕಿಯಾರಾ ಬಿಟ್ಟರೆ ಇನ್ನೊಬ್ಬರಿಲ್ಲ - ನಿರ್ದೇಶಕಿ ಗೀತು ಹೇಳಿದ್ದೇನು?

ಜೂ.4ರಂದು ತೆರೆಗೆ ಬರಲಿರುವ ಯಶ್‌ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್‌’. ಚಿತ್ರಕ್ಕೆ ಕಿಯಾರಾ ನಾಯಕಿ. ಅವರನ್ನೇ ಆಯ್ಕೆ ಮಾಡಿದ್ದೇಕೆ ಎಂಬುದಕ್ಕೆ ಕಾರಣ ನೀಡಿದ ನಿರ್ದೇಶಕಿ ಗೀತು. ಶಿಸ್ತು, ಪ್ರಾಮಾಣಿಕತೆ ಇಷ್ಟವಾಗಿ ಕಿಯಾರಾಗೆ ನಾಯಕಿ ಪಟ್ಟ ಎಂದು ವಿವರಣೆ.

Read Full Story
04:38 PM (IST) Mar 30

Karnataka News Liveಒಬ್ಬ ಉತ್ತಮ ರೋಗಿಯಾಗುವುದು ಹೇಗೆ - ಇಲ್ಲಿದೆ ಡಾಕ್ಟರ್ ಶಾಪಿಂಗ್, ಆರೋಗ್ಯ-ಹಣ ಉಳಿಸುವ ಮಾರ್ಗ

ವೈದ್ಯರನ್ನು ಅವಧಿಗೂ ಮುನ್ನ ಬದಲಾಯಿಸುವುದರಿಂದ ಆಗುವ ತಕ್ಷಣದ ಪರಿಣಾಮವೆಂದರೆ ‘ರೀಸೆಟ್ ಬಟನ್ ಎಫೆಕ್ಟ್’ (ಮತ್ತೆ ಮೊದಲಿನಿಂದ ಆರಂಭವಾಗುವ ಪ್ರಕ್ರಿಯೆ). ವೈದ್ಯಕೀಯ ವಿಜ್ಞಾನವು ಸಾಕ್ಷ್ಯಾಧಾರಿತವಾಗಿ ನಡೆಯುತ್ತದೆ.

Read Full Story
02:30 PM (IST) Mar 30

Karnataka News Liveಜೀವಂತ ವ್ಯಕ್ತಿಗೆ ಮರಣ ಪತ್ರ ನೀಡಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ - ಪತ್ನಿ ಮಾಡಿದ ವಂಚನೆ ಬಯಲು!

ಬೆಂಗಳೂರಿನಲ್ಲಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಿಪಿಎಲ್ ಕಾರ್ಡ್ ಲಾಭಕ್ಕಾಗಿ ಪತಿಯ ದಾಖಲೆ ಬಳಸಿ ಅನ್ಯ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ, ಆತ ಮೃತಪಟ್ಟಾಗ ಪತಿಯ ಹೆಸರಲ್ಲೇ ಮರಣ ಪ್ರಮಾಣ ಪತ್ರ ಬರುವಂತೆ ಮಾಡಿದ್ದು ಸ್ವತಃ ಪತ್ನಿಯೇ ಎಂಬುದು ಬಯಲಾಗಿದೆ.

Read Full Story
01:01 PM (IST) Mar 30

Karnataka News Liveಬೋನಿಗೆ ಬಿದ್ದ ಹೆಣ್ಣು ಹುಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಗಂಡುಗಲಿಗಳು

ಹುಲಿ ಜೊತೆ ಸೆಲ್ಫೀ ಫೋಟೊ ತೆಗೆದುಕೊಳ್ಳೋದು ಅಂದ್ರೆ ಸಾಮಾನ್ಯ ಮಾತಲ್ಲ. ಗಟ್ಟಿ ಗುಂಡಿಗೆ ಇದ್ದವರು ಮಾತ್ರ ಹುಲಿರಾಯನ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಅದರಲ್ಲೂ ಹೆಣ್ಣು ಹುಲಿ ಜೊತೆ ನಮ್ಮ ಗಂಡುಗಳು ಮುಗಿಬಿದ್ದು ಸೆಲ್ಫೀ ತೆಗೆದುಕೊಂಡ 'ಸಾಹಸ'ದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

Read Full Story
12:59 PM (IST) Mar 30

Karnataka News Liveಭರ್ಜರಿ ಎಂಟ್ರಿಗೆ ಸಿದ್ಧರಾಗಿ ನಿಂತ ಜ್ಯೇಷ್ಠವರ್ಧನ್.. ಡಾ ವಿಷ್ಣುವರ್ಧನ್ ಮೊಮ್ಮಗನ ಸಿನಿಮಾ ಜರ್ನಿ ಸದ್ಯದಲ್ಲೇ ಶುರು..!

'ಕರ್ನಾಟಕ ರತ್ನ' ಖ್ಯಾತಿಯ ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್‌ ಮೊಮ್ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕರ್ ಮಗನಾಗಿರುವ ಜ್ಯೇಷ್ಠ, ಕುಟುಂಬದ ಪರಂಪರೆ ಎಂಬಂತೆ ನೇರವಾಗಿ ನಟನೆಗೆ ಇಳಿಯಲಿಲ್ಲ.

Read Full Story
12:47 PM (IST) Mar 30

Karnataka News Liveಹೊಸ ಶೆಟ್ರು ಬಳಗ ಸೃಷ್ಟಿಸಿಕೊಂಡ್ರಾ ಕುಂದಾಪುರ ಕುವರ? ಬೇರೆಯವರಿಗೆ ದುಡಿದದ್ದು ಸಾಕು ತತ್ವ ಪಾಲಿಸ್ತಾರಾ ರಿಷಬ್ ಶೆಟ್ರು..?

ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್ ಮತ್ತು ಆಪ್ತರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ. ಇದೇ ವೇಳೆ 'ಎರಡನೇ ಅಧ್ಯಾಯ' ಆರಂಭಿಸುವುದಾಗಿ ಘೋಷಿಸಿದ್ದು, ತಮ್ಮದೇ ನಿರ್ಮಾಣ ಸಂಸ್ಥೆಯಡಿ 'ಕಾಂತಾರ 2' ಮತ್ತು 'ಪರಶುರಾಮ' ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ.
Read Full Story
12:42 PM (IST) Mar 30

Karnataka News LiveMysuru - ಒಣಗಿದ ದಾಸವಾಳದ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ

ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು, ಒಣಗಿದ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಹೂವು ಗಂಟಲಲ್ಲಿ ಸಿಲುಕಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Read Full Story
12:07 PM (IST) Mar 30

Karnataka News Liveಮೊದಲ ಕ್ರಶ್ ಹುಡುಗಿಗೆ ಈಗ ರಿಯಾಕ್ಟ್ ಮಾಡಿದ ವಿಜಯ್ ದೇವರಕೊಂಡ; 2014 ರಲ್ಲಿ ಏನಾಗಿತ್ತು? ಗುಟ್ಟು ರಟ್ಟಾಯ್ತು!

'ಲೈಫ್ ಈಸ್ ಬ್ಯೂಟಿಫುಲ್' ಮತ್ತು 'ಎವಡೆ ಸುಬ್ರಮಣ್ಯಂ' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಮಿಂಚಿದ್ದ ವಿಜಯ್ ಅವರಿಗೆ ಬ್ರೇಕ್ ನೀಡಿದ್ದು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅರ್ಜುನ್ ರೆಡ್ಡಿ'. ಸದ್ಯ 'ಕಿಂಗ್‌ಡಮ್' ನಂತರ ವಿಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಸದ್ಯ 'ರೌಡಿ ಜನಾರ್ದನ' ಎಂಬ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್‌ನಲ್ಲಿ ನಟಿಸುತ್ತಿದ್ದಾರೆ.

Read Full Story
11:40 AM (IST) Mar 30

Karnataka News Liveಯುಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು

ಇತ್ತೀಚೆಗೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ್ದಕ್ಕೆ ಕಲಾವಿದ ಅಶೋಕ್ ಭಟ್ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಯಕ್ಷಗಾನದಲ್ಲಿ ಶಿಳ್ಳೆ ಹಾಕುವುದು ಮೆಚ್ಚುಗೆಯ ಸಂಕೇತವೇ ಅಥವಾ ಕಲೆಗೆ ತೋರುವ ಅಗೌರವವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
11:03 AM (IST) Mar 30

Karnataka News Liveವಯೋಮಿತಿ ಸಮರ - 60 ದಿನ ಸಡಿಲಿಕೆ ನಂತರ ಸರ್ಕಾರದ ವಿರುದ್ಧ ಬೃಹತ್ ಆಂದೋಲನಕ್ಕೆ ಸಜ್ಜಾದ ಪೋಷಕರು

ರಾಜ್ಯದಲ್ಲಿ 1ನೇ ತರಗತಿ ಪ್ರವೇಶಕ್ಕೆ ಸರ್ಕಾರವು 60 ದಿನಗಳ ವಯೋಮಿತಿ ಸಡಿಲಿಕೆ ಮಾಡಿರುವುದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದಂತೆ 5.5 ವರ್ಷ ಪೂರ್ಣಗೊಂಡ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿ, ಸಾಮಾಜಿಕ ಜಾಲತಾಣಗಳ ಆಂದೋಲನವನ್ನು ಪ್ರಾರಂಭಿಸಿದ್ದಾರೆ.

Read Full Story
08:56 AM (IST) Mar 30

Karnataka News LiveRaichur - ಬಾಣಂತಿಯ ನಿಗೂಢ ಸಾವಿಗೆ ದೆವ್ವ ಕಾರಣ? CCTV ದೃಶ್ಯ ನೋಡಿ ಬೆಚ್ಚಿದ ಸ್ಥಳೀಯರು

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ, ಐದು ದಿನದ ಮಗುವನ್ನು ಬಿಟ್ಟು ಬಾಣಂತಿಯೊಬ್ಬರು ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಹಿಂದೆ ದೆವ್ವದ ಕೈವಾಡವಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Read Full Story
08:23 AM (IST) Mar 30

Karnataka News Liveಮೆಲ್ಲಗೆ ಬರ್ತಾನೆ, ಕಾಂಪೌಂಡ್ ಹಾರ್ತಾನೆ; ಅತ್ತಿತ್ತ ನೋಡಿ ಮಹಿಳೆಯರ ಒಳಉಡುಪು ಕದಿತಾನೆ!

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ವಿಕೃತಕಾಮಿಯೊಬ್ಬ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದಾನೆ. ಈತನ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿ ಸ್ಥಳೀಯ ಮಹಿಳೆಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
Read Full Story
08:02 AM (IST) Mar 30

Karnataka News Liveಸಕ್ಕರೆ, ತೈಲ ಕಡಿಮೆ ಮಾಡಿ, ಆರೋಗ್ಯ ಕಾಯ್ದುಕೊಳ್ಳಿ - ಮೋದಿ

ಸಕ್ಕರೆ ಸೇವನೆ ಕಡಿಮೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮನವಿ ಮಾಡಿದರು. ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಭಾಷಣ ಮಾಡಿದ ಅವರು, ‘ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿತಗೊಳಿಸಿ.

Read Full Story
07:41 AM (IST) Mar 30

Karnataka News Liveಬೆಳಗಾವಿ ರೈತ, ಬೆಂಗಳೂರು ಸಂಸ್ಥೆಗೆ ಮೋದಿ ಭೇಷ್‌

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ, ವಿನೂತನ ವಿಧಾನದಲ್ಲಿ ಮೀನು ಸಾಕಣೆ ಮಾಡಿ ಯಶಸ್ಸು ಕಂಡ ಬೆಳಗಾವಿ ತಾಲೂಕಿನ ರೈತ ರಾಜು ಶಿವಲಿಂಗಪ್ಪ ಹುದ್ದಾರ (27) ಅವರನ್ನು ಶ್ಲಾಘಿಸಿದ್ದಾರೆ.

Read Full Story
07:21 AM (IST) Mar 30

Karnataka News Liveಇರಾನ್‌ಗೆ ಟ್ರಂಪ್‌ ಭೂದಾಳಿ ? ತಿಂಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ವಿಕೋಪದತ್ತ

ಇರಾನ್‌ ಮೇಲಿನ ವೈಮಾನಿಕ ದಾಳಿ 1 ತಿಂಗಳಿಂದ ನಡೆದಿರುವ ನಡುವೆಯೇ ಅಮೆರಿಕವು ಇದೀಗ ಖಾರ್ಗ್ ದ್ವೀಪದ ಮೇಲೆ ಹಾಗೂ ಹೋರ್ಮುಜ್‌ ಜಲಸಂಧಿ ಸಮೀಪದ ಪ್ರದೇಶಗಳ ಮೇಲೆ ಭೂಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

Read Full Story
07:09 AM (IST) Mar 30

Karnataka News Live60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ

1962-65ರ ಬ್ಯಾಚಿನಲ್ಲಿ ಓದಿದ್ದ ಸಹಪಾಠಿಗಳು 60 ವರ್ಷಗಳ ನಂತರ ತಮ್ಮ 85-86ರ ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾದರು. ಮೂರು ದಿನಗಳ ಕಾಲ ನಡೆದ ಈ ಅಪರೂಪದ ಮರುಮಿಲನದಲ್ಲಿ, 122 ಸಹಪಾಠಿಗಳ ಪೈಕಿ ಉಳಿದಿರುವ 12 ಮಂದಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದರು.

Read Full Story
07:06 AM (IST) Mar 30

Karnataka News Live2.5 ವರ್ಷದ ಮಗು ಮೇಲೆ ತಂದೆ ರೇಪ್ ಕೇಸ್ - ತಾಯಿ ಅನುಪಸ್ಥಿತಿಯಲ್ಲಿ ಬಾಲಕಿ ಹೇಳಿಕೆ ದಾಖಲಿಗೆ ಹೈಕೋರ್ಟ್‌ ಆಕ್ಷೇಪ

ಎರಡೂವರೆ ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣದಲ್ಲಿ, ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ಅಧೀನ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ಪ್ರಕರಣದಲ್ಲಿ ಹೈಕೋರ್ಟ್ ಹೇಳಿದ್ದೇನು?

Read Full Story
07:04 AM (IST) Mar 30

Karnataka News Liveಟ್ರಂಪ್‌ ವಿರುದ್ಧ ತವರಲ್ಲೇ ಭುಗಿಲೆದ್ದ ಯುದ್ಧ !

ಇರಾನ್‌ ಮೇಲಿನ ಯುದ್ಧ ಸೇರಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನಿಲುವುಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪ್‌ನಲ್ಲಿ ‘ನೋ ಕಿಂಗ್ಸ್‌’ (ಸರ್ವಾಧಿಕಾರ ಬೇಡ) ಹೆಸರಿನ ಬೃಹತ್‌ ರ್‍ಯಾಲಿ ಹಾಗೂ ಪ್ರತಿಭಟನೆಗಳು ಶನಿವಾರ ನಡೆದಿವೆ.

Read Full Story