ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರಂತೆ.
ಬೀದರ್‌ಗೆ ಸತ್ಯಶೋಧನಾ ಸಮಿತಿ - ರೆಬೆಲ್ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ

ಬೆಂಗಳೂರು (ಜೂ.27): ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ನಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿರುವ ಮಾತು ಸಾಕಷ್ಟು ಕುತೂಹಲ ಮೂಡಿಸಿದೆ. ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಭಾರೀ ಬದಲಾವಣೆ ಆಗುವುದು ನಿಶ್ಚಿತ. ಅದರ ಸುಳಿಗಾಳಿ ಈಗ ಬೀಸಲು ಆರಂಭಿಸಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಮೂರು ಪವರ್ ಸೆಂಟರ್ಗಳಿವೆ, ಹೀಗಾಗಿ ಸಿಎಂ ಸಿದ್ಧರಾಮಯ್ಯ ಮೊದಲ ಅವಧಿಯ ಸಿಎಂ ಆಗಿದ್ದ ರೀತಿಯಲ್ಲಿ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 27th June:ಬೀದರ್‌ಗೆ ಸತ್ಯಶೋಧನಾ ಸಮಿತಿ - ರೆಬೆಲ್ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ
Karnataka News Live 27th June:ಸನ್ನಿ ಲಿಯೋನ್ ತಾಯಿ, ಇಮ್ರಾನ್ ಹಶ್ಮಿ ತಂದೆ; ಈ ಸೆಲೆಬ್ರಿಟಿಸ್‍ಗೆ ಬಿಹಾರದಲ್ಲಿ 20 ವರ್ಷದ ಮಗ?
ಬಿಹಾರದಲ್ಲಿ 20 ವರ್ಷದ ಮಗನ ಪೋಷಕರಾಗಿದ್ದಾರಾ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ? ಇಂತದೊದ್ದ ಚರ್ಚೆ ಶುರುವಾಗಲು ಕಾರಣ ಬಿಹಾರದ ವಿದ್ಯಾರ್ಥಿಯ ರೋಚಕ ಘಟನೆ.
Karnataka News Live 27th June:ಕೈಗಾರಿಕೆಗಳು ಬೇಕು ನಿಜ, ಜೀವ ತೆಗೆಯೋದಕ್ಕಲ್ಲ - ಛಲವಾದಿ ನಾರಾಯಣಸ್ವಾಮಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಭೇಟಿ ನೀಡಿದರು.
Karnataka News Live 27th June:ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ, ದೇಶದ ಚುನಾವಣೆಯಲ್ಲಿ ಮಹಾ ಕ್ರಾಂತಿ
ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ಕ್ರಾಂತಿಗೆ ನಾಂದಿ ಹಾಡಿದೆ.
Karnataka News Live 27th June:ಭಾರಿ ಮಳೆಯಿಂದ ನಾಳೆ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ
ಕರ್ನಾಟಕದ ಹಲವು ಜಿಲ್ಲೆಗಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಕೆಲ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
Karnataka News Live 27th June:ಬೈಕ್ ರ‍್ಯಾಲಿ ವೇಳೆ ಸ್ಕಿಡ್ ಆಗಿ ಬಿದ್ದ ಮಾಜಿ ಸಚಿವೆ ರೇಣುಕಾಚಾರ್ಯಾಗೆ ಗಾಯ, ಆಸ್ಪತ್ರೆ ದಾಖಲು
ಮಾಜಿ ಸಚಿವ, ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದಾರೆ. ಬೈಕ್ ರ‍್ಯಾಲಿ ವೇಳೆ ಮಾಜಿ ಸಚಿವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
Karnataka News Live 27th June:ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರೇ ಮುಂದುವರಿಕೆ - ಛಲವಾದಿ ನಾರಾಯಣಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Karnataka News Live 27th June:ನೆಟ್‌ಫ್ಲಿಕ್ಸ್ ಸೇರಿ 19 ಉಚಿತ ಒಟಿಟಿ , 120 ಜಿಬಿ ಡೇಟಾ ಫ್ಯಾಮಿಲಿ ಪ್ಲಾನ್ ಪರಿಚಯಿಸಿದ ವಿಐ
ನೆಟ್‌ಫ್ಲಿಕ್ಸ್ ಸೇರಿದಂತೆ 19 ಒಟಿಟಿ ಪ್ಲಾಟ್‌ಫಾರ್ಮ್, 120 ಜಿಬಿ ಡೇಟಾ ಸೇರಿದಂತೆ ಹತ್ತು ಹಲವು ಸೌಲಭ್ಯದ ವಿಐ ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಘೋಷಣೆಯಾಗಿದೆ. ಈ ಪ್ಲಾನ್ ಸೌಲಭ್ಯವೇನು?
Karnataka News Live 27th June:ರಾಜ್ಯ ಸರ್ಕಾರದ ಬಳಿ ಶ್ವೇತಪತ್ರವಿಲ್ಲ, ಬ್ಲ್ಯಾಕ್‌ಪೇಪರ್ ಇದೆ - ಸಂಸದ ಬೊಮ್ಮಾಯಿ
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅವರ ಬಳಿ ಶ್ವೇತಪತ್ರ ಇಲ್ಲ, ಬ್ಲ್ಯಾಕ್‌ಪೇಪರ್ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ ₹1 ಲಕ್ಷ ಸಾಲ ಹೊರಿಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
Karnataka News Live 27th June:ನಾನು ಸಲಹೆ ಕೊಟ್ಟಿದ್ದಕ್ಕೆ ಪ್ರಿಯಾಂಕ ಚೋಪ್ರಾಗೆ ಮಿಸ್ ವರ್ಲ್ಡ್,ಮತ್ತೆ ಜಗಳ ಶುರು ಮಾಡಿದ ಯುಕ್ತಾ
ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ಕಿರೀಟ ಪಡೆದಿದ್ದು ಆಕೆಯ ಸೌಂದರ್ಯದಿಂದ ಅಲ್ಲ, ನನ್ನ ಸಲಹೆಯಿಂದ ಎಂದು ಯುಕ್ತಾ ಹೇಳಿದ್ದಾಳೆ. ಈ ಮೂಲಕ ಯುಕ್ತಾ ಹಾಗೂ ಪ್ರಿಯಾಂಕಾ ಚೋಪ್ರಾ ನಡುವಿನ ಮಿಸ್ ವರ್ಲ್ಡ್ ಜಗಳ ಶುರುವಾಗಿದೆ.
Karnataka News Live 27th June:ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ - ಸಚಿವ ಕೃಷ್ಣ ಬೈರೇಗೌಡ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡಲು ಸ್ವಾತಂತ್ರವಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡೋಣ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Karnataka News Live 27th June:ಮನೆ ಪಕ್ಕ ಸೊಸೆ ಹೂತಿಟ್ಟ ಪ್ರಕರಣಕ್ಕೆ ಟ್ವಿಸ್ಟ್, ಹತ್ಯೆಗೂ ಮುನ್ನ ಬಯಕೆ ತೀರಿಸಿಕೊಂಡಿದ್ದ ಮಾವ
ಸೊಸೆ ನಾಪತ್ತೆಯಾಗಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ 2 ತಿಂಗಳಲ್ಲಿ ಆಕೆಯ ಮೃತದೇಹ 10 ಅಡಿ ಆಳದಲ್ಲಿ ಹೂತಿಟ್ಟ ಘಟನೆಗೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೊಸೆಯನ್ನು ಹತ್ಯೆ ಮಾಡುವ ಮೊದಲು ಆಕೆಯಯನ್ನು ಸ್ವತಃ ಮಾವನೇ ಹರಿದು ಮುಕ್ಕಿದ. ಈ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು.
Karnataka News Live 27th June:ಸೂಚನೆ ಬಾರದ ಹಿನ್ನೆಲೆ ಎಂಡಿಸಿಸಿ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ - ಶಾಸಕ ಜಿ.ಟಿ.ದೇವೇಗೌಡ
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.
Karnataka News Live 27th June:ಇದೇ ಮೊದಲ ಬಾರಿಗೆ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್
ಏಲಿಯನ್ ಇದೆಯಾ? ಇದ್ದರೆ ಎಲ್ಲಿ ವಾಸ? ಈ ಪ್ರಶ್ನೆಗಳಿಗೆ ಉತ್ತರ ಹುಡುಕು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇದೇ ಮೊದಲ ಬಾರಿ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದೆ.
Karnataka News Live 27th June:ಸಂಬಂಧಿ ಅನಾರೋಗ್ಯದಿಂದ ಚೇತರಿಕೆ - ಶಿವನಿಗೆ ಪೂಜೆ ಮಾಡಿದ ಮುಸ್ಲಿಂ ಮಹಿಳೆ ವೀಡಿಯೋ ವೈರಲ್
ಕಾನ್ಪುರದ ಶಿವ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Karnataka News Live 27th June:Calf raises for Sugar - ಕುಳಿತಲ್ಲೇ 10 ನಿಮಿಷ ಹೀಗೆ ಮಾಡಿದ್ರೆ ಶುಗರ್ ಸಮಸ್ಯೆ ಮಾಯ! ಇವ್ರ ಅನುಭವ ಕೇಳಿ...
ಮಧುಮೇಹ ಸಮಸ್ಯೆ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ದಿನಗಳಲ್ಲಿ ಕುಳಿತಲ್ಲಿಯೇ 10 ನಿಮಿಷ ಹಿಮ್ಮಡಿಯ ವ್ಯಾಯಾಮ ಹೇಳಿದ್ದಾರೆ ಇವರು. ಅವರ ಅನುಭವ ಕೇಳಿ...
Karnataka News Live 27th June:ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿ - ಡಿ.ಕೆ.ಶಿವಕುಮಾರ್
ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಗೊಂಡ ಕಾವೇರಿ ಪೂಜೆ ಕಾರ್ಯಕ್ರಮದ ಕೃಪೆಯಿಂದ ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
Karnataka News Live 27th June:ಪರಿಸರ ನಿಯಮ ಪಾಲನೆ ಜೊತೆಗೆ ಅಭಿವೃದ್ಧಿಗೆ ಬದ್ದ - ಬೆಂವಿವಿ ಕುಲಪತಿ ಡಾ.ಜಯಕರ
ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂವಿವಿ ಕುಲಪತಿ ಡಾ.ಜಯಕರ ಸ್ಪಷ್ಟಪಡಿಸಿದರು.
Karnataka News Live 27th June:ಪಬ್‌ಜಿ ಲವರ್ ಜೊತೆ ಗೇಮ್, ಅಡ್ಡ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿ ಪತ್ನಿ ಪರಾರಿ
ಪತ್ನಿ ಪಬ್‌ಜಿ ಆಟದಲ್ಲಿ ಪ್ರೀತಿ ಶುರುವಾಗಿದೆ. ಇದನ್ನು ಅರಿತ ಗಂಡ, ಪತ್ನಿಯ ಪಬ್‌ಜಿ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾನೆ. ನಮ್ಮ ನಡುವೆ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿದ್ದಾಳೆ.ಇಷ್ಟೇ ಅಲ್ಲ ಮಕ್ಕಳು, ಪತಿ ಬಿಟ್ಟು ಪರಾರಿಯಾಗಿದ್ದಾಳೆ.