ಕೇರಳ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಚಿನ್ನಾಭರಣವು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿದ್ದಾಗಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಈ ಘಟನೆ ನಡೆದಿದೆ.
ದೇಶದ ಸುಪ್ರೀಂಕೋರ್ಟ್ ಹೈಕೋರ್ಟ್ ಜಿಲ್ಲಾ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರಿಗೆ ಅತ್ಯಂತ ಉನ್ನತ ದರ್ಜೆಯ ಭದ್ರತೆಯನ್ನು ನೀಡಿರಲಾಗಿರುತ್ತದೆ. ಆದರೆ ಇಂತಹ ಭದ್ರತೆಯನ್ನು ದಾಟಿ ಬಂದು ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಹೌದು ಅಚ್ಚರಿ ಆದರೂ ಸತ್ಯ, ಕೇರಳ ಹೈಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲೇ ಕಳ್ಳತನ ನಡೆದಿದೆ.
ಕೇರಳದ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಕಳ್ಳತನ
ಈ ಕಳ್ಳತನ ಪ್ರಕರಣದಲ್ಲಿ 6 ಗ್ರಾಂ ಚಿನ್ನದ ಒಡವೆಗಳು ಕಳ್ಳತನವಾಗಿದೆ ಎಂದು ವರದಿಯಾಗಿದೆ. ಈ ಚಿನ್ನಾಭರಣವೂ ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ(private secretary) ಸೇರಿದ್ದಾಗಿತ್ತು ಎಂದು ವರದಿಯಾಗಿದೆ. ಕೇರಳದ ಹೈಕೋರ್ಟ್ ಜಡ್ಜ್ (Kerala High Court Judge) ಜಸ್ಟೀಸ್ ಎ. ಬದ್ರುದ್ದೀನ್ (Justice A Badharudeen) ನಿವಾಸದಲ್ಲಿ ಕಳ್ಳತನ ನಡೆದಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಅಚ್ಚರಿಯ ಜೊತೆಗೆ ಆತಂಕವನ್ನು ಮೂಡಿಸಿದೆ. ಇಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಅದು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಡ್ಜ್ ಮಲಗುವ ಕೋಣೆಯಲ್ಲಿದ್ದ ಚಿನ್ನಾಭರಣ
ಜೂನ್ 23ರಂದು ಈ ಘಟನೆ ನಡೆದಿದೆ. ಆದರೆ ಔಪಚಾರಿಕ ದೂರು ದಾಖಲಾದ ನಂತರ ಜೂನ್ 26 ರಂದು ಎಫ್‌ಐಆರ್ ದಾಖಲಿಸಲಾಗಿದೆ. ನ್ಯಾಯಮೂರ್ತಿ ಬಧರುದ್ದೀನ್ ಅವರ ಮಲಗುವ ಕೋಣೆಯಿಂದ ಚಿನ್ನವನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿದ್ದು, ನಗರದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಭಾರೀ ಭದ್ರತೆಯ ಅಧಿಕೃತ ನಿವಾಸದಲ್ಲಿ ಕಳ್ಳತನ ಹೇಗೆ ಸಂಭವಿಸಲು ಸಾಧ್ಯ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಲಾಮಸ್ಸೆರಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ವಾಸದ ಮನೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 305 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ವಿಚಾರಣೆಗೆ ಒಳಪಡಬೇಕಾದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ.
ಕೊಚ್ಚಿಯಲ್ಲಿರುವ ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಘಟನೆ:
ವಿಶೇಷವಾಗಿ ನ್ಯಾಯಾಧೀಶರ ನಿವಾಸಕ್ಕೆ ಪ್ರವೇಶದ ಅನುಮತಿ ಇರುವವರ ವಿಚಾರಣೆ ನಡೆಯಲಿದೆ. ಆದರೂ ಪ್ರಕರಣದ ಸೂಕ್ಷ್ಮತೆಯನ್ನು ಉಲ್ಲೇಖಿಸಿ ಪೊಲೀಸರು ಇಲ್ಲಿಯವರೆಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೆಚ್ಚಿನ ಭದ್ರತಾ ವಲಯದಲ್ಲಿ, ವಿಶೇಷವಾಗಿ ಕೇರಳದ ವಾಣಿಜ್ಯ ರಾಜಧಾನಿಯಾಗಿರುವ ಕೊಚ್ಚಿಯಲ್ಲಿ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಈ ಕಳ್ಳತನ ಪ್ರಕರಣ ನಡೆದಿರುವುದರಿಂದ ಈ ಘಟನೆಯು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇಲ್ಲಿವರೆಗೆ ಯಾವುದೇ ಶಂಕಿತರನ್ನು ಸಾರ್ವಜನಿಕವಾಗಿ ಗುರುತಿಸಲಾಗಿಲ್ಲ, ಮತ್ತು ಕಳ್ಳತನ ಪತ್ತೆಯಾಗದಿರಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಅಧಿಕಾರಿಗಳು ತಮ್ಮ ತನಿಖೆಯ ಭಾಗವಾಗಿ ಆವರಣದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.
