ಪತ್ನಿ ಪಬ್‌ಜಿ ಆಟದಲ್ಲಿ ಪ್ರೀತಿ ಶುರುವಾಗಿದೆ. ಇದನ್ನು ಅರಿತ ಗಂಡ, ಪತ್ನಿಯ ಪಬ್‌ಜಿ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾನೆ. ನಮ್ಮ ನಡುವೆ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿದ್ದಾಳೆ.ಇಷ್ಟೇ ಅಲ್ಲ ಮಕ್ಕಳು, ಪತಿ ಬಿಟ್ಟು ಪರಾರಿಯಾಗಿದ್ದಾಳೆ.
ಲಖನೌ (ಜೂ. 27) ಮಕ್ಕಳು, ವಿದ್ಯಾರ್ಥಿಗಳು, ಯುವ ಸಮೂಹ ಪಬ್‌ಜಿ ಗೇಮಿಂಗ್ ಚಟಕ್ಕೆ ಬಿದ್ದು ಹಲವು ಅನಾಹುತಗಳು ನಡೆದಿದೆ. ಇದೀಗ ಇದೇ ಪಬ್‌ಜಿ ಸುಂದರ ಸಂಸಾರಕ್ಕೂ ಹುಳಿ ಹಿಂಡಿದ ಘಟನೆ ನಡೆದಿದೆ. ಇಷ್ಟೇ ಅಲ್ಲ, ಈ ಪಬ್‌ಜಿ ಆಟ ಹಾಗೂ ಪಬ್‌ಜಿ ಲವರ್ ಜೊತೆಗಿನ ಸಂಪರ್ಕ ಕಡಿತಗೊಳಿಸಿದರೆ ಗಂಡನ 55 ಪೀಸ್ ಮಾಡಿ ಬಿಸಾಡುತ್ತೇನೆ ಎಂಬ ಬೆದರಿಕೆಯೂ ಬಂದ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದ ಈ ಘಟನೆ ಪಬ್‌ಜಿ ತಲೆಗೇರಿಸಿಕೊಂಡಿರುವ ಕುಟುಂಬ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.
ಪಬ್‌ಜಿಯಲ್ಲಿ ಪಂಟರ್ ಆದ ಪತ್ನಿಗೆ ಆತ್ಮೀಯನಾದ ಶಿವಂ
ಆರಾಧಾನ ಅನ್ನೋ ಕೆಲ ವರ್ಷಗಳ ಹಿಂದೆ ಶೀಲು ಅನ್ನೋ ವ್ಯಕ್ತಿಯ ಮದುವೆಯಾಗಿದ್ದಾಳೆ. ಬಾಂದಾ ಜಿಲ್ಲೆಯಲ್ಲಿ ಇವರ ಸಂಸಾರ ಸಾಗುತ್ತಿತ್ತು. ಗಂಡ ಕೆಲಸಕ್ಕೆ ಹೋದರೆ ಪತ್ನಿ ಮನೆಯಲ್ಲಿ ಪಬ್‌ಜಿ ಆಡುತ್ತಾ ಕಾಲ ಕಳೆಯುತ್ತಿದ್ದಳು. ಆರಂಭದಲ್ಲಿ ಎಲ್ಲವೂ ಒಕೆ ಇತ್ತು. ಆದರೆ ಬರು ಬರುತ್ತಾ ಮಕ್ಕಳ ಆರೈಕೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಪಬ್‌ಜಿ ತಲೆಗೆ ಹತ್ತಿಕೊಂಡಿದೆ. ಪತ್ನಿಯ ಈ ಪಬ್‌ಜಿ ಆಟದಲ್ಲಿ ಶಿವಂ ಅನ್ನೋ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರು ಪಬ್‌ಜಿ ಪಂಟರ್ ಆಗಿದ್ದಾರೆ. ಇವರ ಆತ್ಮೀಯತೆ ಹೆಚ್ಚಾಗಿದೆ.
ರೋಮ್ಯಾಂಟಿಕ್ ರಿಲೇಶನ್‌ಶಿಪ್
ಪಬ್‌ಜಿ ಆಡುತ್ತಾ ಆರಾಧಾನಗೆ ಶಿವಂ ಮೇಲೆ ಪ್ರೀತಿ ಶುರುವಾಗಿದೆ. ಈಕೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯವಳು. ಶಿವಂ ಪಂಜಾಬ್‌ನ ಲುಧಿಯಾನ ಮೂಲದವನು. ಇವರಿಬ್ಬರ ಪ್ರೀತಿ, ರೊಮ್ಯಾಂಟಿಕ್ ರಿಲೇಶನ್‌ಶಿಪ್ ಪಬ್‌ಜಿ ಮೂಲಕ ಗಾಢವಾಗಿದೆ. ಇದೇ ವಿಚಾರದಿಂದ ಗಂಡ ಹಾಗೂ ಹೆಂಡತಿ ಜೊತೆ ಜಗಳ ಶುರುವಾಗಿದೆ. ಪಬ್‌ಜಿ ಆಟ ನಿಲ್ಲಿಸುವಂತೆ ಪತಿ ಸೂಚಿಸಿದ್ದಾನೆ. ಇದನ್ನು ಒಪ್ಪದ ಪತ್ನಿ ಆಟ ಮುಂದುವರಿಸಿದ್ದಾಳೆ. ಹೀಗಾಗಿ ಪ್ರತಿ ದಿನ ಇವರಿಬ್ಬರ ನಡುವೆ ಜಗಳ ಆರಂಭಗೊಂಡಿತ್ತು.
ಪತ್ನಿ ಗದರಿಸಿದ ಬೆನ್ನಲ್ಲೇ ಪ್ರತ್ಯಕ್ಷನಾದ ಶಿವಂ
ಪತ್ನಿ ಆರಾಧಾನಗೆ ಮಕ್ಕಳು, ಪತಿ ಮೇಲೆ ಯಾವ ಆಸಕ್ತಿ ಇರಲಿಲ್ಲ. ಏನಿದ್ದರೂ ಪಬ್‌ಜಿ ಲವರ್ ಶಿವಂ. ಇತ್ತ ಸಂಸಾರದಲ್ಲಿ ಬಿರುಕು ಹೆಚ್ಚಾಗಿತ್ತು. ಹೀಗಾಗಿ ಪತ್ನಿಯನ್ನು ಗದರಿಸಿ, ಬೆದರಿಸಿ ಸರಿಮಾಡುವ ಪ್ರಯತ್ನ ಮಾಡಿದ್ದಾನೆ. ಹೀಗೆ ಪ್ರತಿ ದಿನ ಘರ್ಷಣೆ ಶುರುವಾಗಿದೆ. ಈ ಮಾಹಿತಿ ಶಿವಂಗೂ ತಲುಪಿತ್ತು. ಒಂದು ದಿನ ಶಿವಂ ಏಕಾಏಕಿ ಆರಾಧಾನ ಮನೆಗೆ ಬಂದಿದ್ದ. ಈತನ ನೋಡಿ ಪತಿ ಹಾಗೂ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ.
ಅಡ್ಡ ಬಂದ್ರೆ 55 ಪೀಸ್ ಆಗುತ್ತಿಯಾ
ಪಬ್‌ಜಿ ಲವರ್ ಮನೆಗೆ ಬಂದಿದ್ದ, ಇತ್ತ ಪತ್ನಿಯ ಮನಸ್ಸು ಅರಳಿತ್ತು. ಗಂಡ ಹೊಡೆಯುತ್ತಾನೆ, ನಾನು ಲವರ್ ಜೊತೆ ಹೋಗುತ್ತೇನೆ ಎಂದಿದ್ದಾಳೆ. ಇದು ಕುಟುಂಬಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಮಕ್ಕಳು, ಗಂಡನ ಬಿಟ್ಟು ಅದು ಹೇಗೆ ಹೋಗುತ್ತಿಯಾ ನಾನು ನೋಡುತ್ತೇನೆ ಎಂದು ಪತಿ ಗದರಿಸಿದ್ದಾನೆ. ಈ ವೇಳೆ ನಮಗೆ ಅಡ್ಡಿಯಾದರೆ 55 ಪೀಸ್ ಮಾಡಿ ಬಿಸಾಡುತ್ತೇನೆ ಎಂದು ಎಚ್ಚರಿಸಿ ಲವರ್ ಜೊತೆ ಹೊರಟು ಹೋಗಿದ್ದಾಳೆ. 55 ಪೀಸ್ ಮಾಡಿ ಡ್ರಮ್‌ನಲ್ಲಿ ಹಾಕುತ್ತೇನೆ, ನಮ್ಮ ಹಿಂದೆ ಬರಬೇಡ ಎಂದು ಗದರಿಸಿ ಲವರ್ ಜೊತೆ ತೆರಳಿದ್ದಾಳೆ.
ಶಿವಂ ವಶಕ್ಕೆ ಪಡೆದ ಪೊಲೀಸ್
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಇತ್ತ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದಾರೆ. ಶಿವಂ ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರು ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
