ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯ ಚೇತರಿಕೆ ಕಂಡು ಬಂದಿಲ್ಲ ಎಂದು ವರದಿಯಾಗಿದೆ.
Karnataka News Live: ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ

ಬೆಂಗಳೂರು: ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗುರುವಾರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Karnataka News Live 23 April 2026ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ
Karnataka News Live 23 April 20269 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ
9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಯಾವ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ?
Karnataka News Live 23 April 2026ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು
ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು, ಬೈಕ್ ಹಾಗೂ ಕಾರು ಅಪಘಾತಕ್ಕೀಡಾಗಿ ದುರಂತ ಸಂಭವಿಸಿದೆ. ಮತ್ತೊರ್ವ ಶಿಕ್ಷಕ ಗಭೀರವಾಗಿ ಗಾಯಗೊಂಡಿದ್ದಾರೆ.
Karnataka News Live 23 April 2026ಬೆಂಗಳೂರು - ಗಿರಿನಗರ ಇಂಡಿಯನ್ ಬ್ಯಾಂಕ್ ನಲ್ಲಿ ಗ್ರಾಹಕರಿಟ್ಟ ಕೋಟಿ ಕೋಟಿ ಮೌಲ್ಯದ ಚಿನ್ನ ಮಾಯ!
Karnataka News Live 23 April 2026Kodagu - ಅನಾಥ ಆಶ್ರಮದಲ್ಲಿ ಮದುವೆ ಸಂಭ್ರಮ - ಪೂವಣ್ಣನೊಂದಿಗೆ ಹಸೆಮಣೆ ಏರಿದ ಮೈನಾ
ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು.
Karnataka News Live 23 April 2026ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?
ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿಗೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?, ಪೋಷಕರು, ಶೈಕ್ಷಣಿಕ ತಜ್ಞರು ಹೇಳುತ್ತಿರುವುದೇನು? ಹಿಂದಿ ಭಾಷೆಗೆ ಗ್ರೇಡ್ ಸಿಸ್ಟಮ್ ಸಾಧಕ ಬಾಧಕಗಳೇನು?
Karnataka News Live 23 April 2026ಅಂಗಡಿ ಪಾಲಾಗುತ್ತಿದ್ದ 400 ಕೆಜಿ ಅನ್ನ ಭಾಗ್ಯದ ಅಕ್ಕಿ ಅಧಿಕಾರಿಗಳಿಂದ ಜಪ್ತಿ
Karnataka News Live 23 April 2026ಗೆಲ್ತಾರಾ or ಬೇರೋಬ್ರನ್ನ ಗೆಲ್ಲಿಸ್ತಾರಾ? ಏನಾಗಲಿದೆ ನಟ ದಳಪತಿ ವಿಜಯ್ ರಾಜಕೀಯ ಭವಿಷ್ಯ?
ಕೆಲವರು ನನ್ನನ್ನು ಪದೇ ಪದೇ 'ನೀನೊಬ್ಬ ನಟ, ನೀನೊಬ್ಬ ನಟ' ಎಂದು ಹೇಳುತ್ತಿದ್ದಾರೆ. ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ಒಂದು ವಿಷಯ ನೆನಪಿರಲಿ, ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸುತ್ತಿಲ್ಲ. ನೀವು ಮಾಡುತ್ತಿರುವುದು ಬೃಹನ್ನಾಟಕ. ನಾನು ಇಲ್ಲಿಗೆ ಬಂದಿರುವುದು ಅಧಿಕಾರಕ್ಕಾಗಿ ಅಲ್ಲ, ಜನರ ಸೇವೆ ಮಾಡಲು..
Karnataka News Live 23 April 2026ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಅಂತ ಫಸ್ಟ್ ಕ್ಲಾಸಲ್ಲಿ ಪಾಸಾದ ಬಾಲಕಿ ಸಾವಿಗೆ ಶರಣು - ಚಿತ್ರದುರ್ಗದಲ್ಲೇ ಫೇಲಾಗಿದ್ದಕ್ಕೆ ಬಾಲಕ ಸಾವು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದ ಕಾರಣಕ್ಕೆ ಮೈಸೂರಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿನಿ ಹಾಗೂ ಚಿತ್ರದುರ್ಗದಲ್ಲಿ ಒಂದು ಅಂಕದಿಂದ ಫೇಲಾದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ.
Karnataka News Live 23 April 2026SSLCಯಲ್ಲಿ ಟೈಲರ್ ಮಗಳು ಇಂದು ರಾಜ್ಯಕ್ಕೆ ಟಾಪರ್ - ಕಾಫಿನಾಡಿನ ಬೃಂದಾ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕಿ ಕೀರ್ತಿ!
ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ.
Karnataka News Live 23 April 202610 ವರ್ಷ ಯಂಗ್ ಆಗಿ ಕಾಣಬೇಕಾ? ಜಪಾನಿಯರ ಈ ಸ್ಕಿನ್‌ಕೇರ್ ಟಿಪ್ಸ್ ನಿಮ್ಮ ಲುಕ್ ಬದಲಿಸುತ್ತೆ!
ಈಗಿನ ಕಾಲದಲ್ಲಿ ಗ್ಲೋಯಿಂಗ್ ಮತ್ತು ಯಂಗ್ ಸ್ಕಿನ್ ಯಾರಿಗೆ ತಾನೇ ಬೇಡ ಹೇಳಿ? ಆದ್ರೆ, ಎಷ್ಟೇ ಪ್ರಾಡಕ್ಟ್ಸ್ ಬಳಸಿದ್ರೂ ಅಂದುಕೊಂಡ ರಿಸಲ್ಟ್ ಸಿಗೋದಿಲ್ಲ. ಇಂಥ ಟೈಮ್‌ನಲ್ಲಿ ಜಪಾನೀಸ್ ಸ್ಕಿನ್‌ಕೇರ್ ರೂಟಿನ್ ಒಂದು ಒಳ್ಳೆ ಆಪ್ಷನ್.
Karnataka News Live 23 April 2026ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಮಗ್ರ ಅಭಿವೃದ್ಧಿ ಯೋಜನೆ - 340 ಕೋಟಿ ರೂ ಬದಲು 95 ಕೋಟಿ ರೂಗೆ ಇಳಿಕೆ!
Karnataka News Live 23 April 2026ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್ ಪಕ್ಷ ಉಳಿದಿಲ್ಲ - ನಿಖಿಲ್ ಕುಮಾರಸ್ವಾಮಿ
ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್ ಪಕ್ಷ ಉಳಿದಿಲ್ಲ. ಮುಂದೆಯೂ ಅಂತಹ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Karnataka News Live 23 April 2026ಇಂಡಿಯಾ ಕೂಟದ ನಡೆಯಿಂದ ಸಂಸದರ ಸ್ಥಾನ ಕುಸಿಯುವ ಸಾಧ್ಯತೆ - ಸಂಸದ ಡಾ.ಸಿ.ಎನ್.ಮಂಜುನಾಥ್
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೆ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ 129 ರಿಂದ 195ಕ್ಕೆ ಹೆಚ್ಚಳವಾಗುತ್ತಿತ್ತು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹರಿಹಾಯ್ದರು.
Karnataka News Live 23 April 2026ರಾಜ್ಯದಲ್ಲಿ ಇಂಧನ ಬಿಕ್ಕಟ್ಟು ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಸ್ಟೇಟ್ ಕೋ-ಆರ್ಡಿನೇಟರ್ ಸ್ಪಷ್ಟನೆ
Karnataka News Live 23 April 2026ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಬಿಜೆಪಿಯೇ ಕಾರಣ - ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ
ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅದಕ್ಷ ಆಡಳಿತವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka News Live 23 April 2026ಪವಿತ್ರಾ ಗೌಡ ಅಲ್ಲ, ರೇಣುಕಾಸ್ವಾಮಿನೂ ಅಲ್ಲ; ಸತ್ಯ ಹೇಳ್ಬೇಕು ಅಂದ್ರೆ- ದರ್ಶನ್ ದುಸ್ಥಿತಿಗೆ ಅಸಲಿ ಕಾರಣ ಇವರು?
ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಸಮಯದಲ್ಲಿ ದರ್ಶನ್ ಸ್ನೇಹಿತರಾಗಿದ್ದವರು, ಮುಂದೆಯೂ ದಾಸನ ಜೊತೆಗಿದ್ದುಬಿಟ್ಟಿದ್ರೆ ದರ್ಶನ್ ಇಂಥಾ ತಪ್ಪು ಮಾಡ್ತಾ ಇರಲಿಲ್ಲ. ಅವರನ್ನ ಕಳೆದುಕೊಂಡಿದ್ದೇ ದಾಸನ ಇವತ್ತಿನ ಸ್ಥಿತಿಗೆ ಕಾರಣ ಅಂತಾರೆ ದರ್ಶನ್ ಅವರನ್ನು ಹತ್ತಿರದಿಂದ ಬಲ್ಲವರು.
Karnataka News Live 23 April 2026ಸಾಹಸಕ್ಕೆ ಹೊಸ ಅರ್ಥ ಕೊಟ್ಟ ಯಶ್ - ‘ಟಾಕ್ಸಿಕ್’ನಲ್ಲಿ ಗನ್‌ಫೂ ಆ್ಯಕ್ಷನ್ ಹೈಲೈಟ್
ಆ್ಯಕ್ಷನ್ ಅದ್ಭುತವಾಗಿ ಬರಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಜೆ.ಜೆ ಪೆರ್ರಿ ಎಂಬ ಅದ್ಭುತ ಆ್ಯಕ್ಷನ್ ಡೈರೆಕ್ಟರ್ ಅನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.
Karnataka News Live 23 April 2026ಬಣ್ಣ ಬಣ್ಣದ ಬಲೂನ್ ಮಾರಿ ಬದುಕುತ್ತಿರುವವನ ಮಗಳಿಗೆ 623 ಅಂಕ! ಗ್ಯಾರೇಜ್‌ನಲ್ಲಿ ಕೆಲಸ ಮಾಡುವವನ ಮಗನಿಗೆ 98%!
Karnataka News Live 23 April 20269ನೇ ತಿಂಗಳಲ್ಲಿ ಅಮೆರಿಕಾಗೆ ಬಂದು ಮಗು ಹೆರುತ್ತಾರೆ - ಭಾರತ, ಚೀನಾ ವಲಸಿಗರ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ರಾಜಕೀಯ ವಿಶ್ಲೇಷಕ ಮೈಕಲ್ ಸ್ಯಾವೇಜ್ ಅವರ ವಿವಾದಿತ ಪಾಡ್‌ಕಾಸ್ಟ್ ವೀಡಿಯೋವನ್ನು ಮರುಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಸ್ಯಾವೇಜ್ ಭಾರತ ಮತ್ತು ಚೀನಾವನ್ನು 'ನರಕದ ಹೊಂಡ' ಎಂದು ಕರೆದಿದ್ದು, ಅಮೆರಿಕದ ಜನ್ಮಸಿದ್ಧ ಪೌರತ್ವ ಕಾನೂನನ್ನು ಟೀಕಿಸಿದ್ದಾರೆ.