ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ರಾಜಕೀಯ ವಿಶ್ಲೇಷಕ ಮೈಕಲ್ ಸ್ಯಾವೇಜ್ ಅವರ ವಿವಾದಿತ ಪಾಡ್‌ಕಾಸ್ಟ್‌ ವೀಡಿಯೋವನ್ನು ಮರುಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಸ್ಯಾವೇಜ್ ಭಾರತ ಮತ್ತು ಚೀನಾವನ್ನು 'ನರಕದ ಹೊಂಡ' ಎಂದು ಕರೆದಿದ್ದು, ಅಮೆರಿಕದ ಜನ್ಮಸಿದ್ಧ ಪೌರತ್ವ ಕಾನೂನನ್ನು ಟೀಕಿಸಿದ್ದಾರೆ.

ವಿವಾದಿತ 'ನರಕದ ಹೊಂಡ' ವಿಡಿಯೋ ಹಂಚಿಕೊಂಡ ಅಮೆರಿಕಾ ಅಧ್ಯಕ್ಷ

ವಾಷಿಂಗ್ಟನ್‌: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಅಮೆರಿಕಾದ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ಅವರ ವಿವಾದಿತ ಪಾಡ್‌ಕಾಸ್ಟ್‌ ವೀಡಿಯೋವನ್ನು ಮತ್ತೆ ಹಂಚಿಕೊಂಡು ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳಾದ ಚೀನಾ ಹಾಗೂ ಭಾರತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅದರಲ್ಲಿ ಮೈಕಲ್ ಸ್ಯಾವೇಜ್ ಅವರು ಭಾರತ ಹಾಗೂ ಚೀನಾವನ್ನು ಹೆಲ್‌ ಹೋಲ್(ನರಕದ ಹೊಂಡ) ಎಂದು ಕರೆದಿದ್ದಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆಗಳನ್ನು ತರುವಂತೆ ಕರೆ ಆಕ್ರೋಶದಿಂದ ಕರೆ ನೀಡುವ ಅವರು ಏಷ್ಯಾದ ಎರಡು ರಾಷ್ಟ್ರಗಳ ಜನರು ಒಂಬತ್ತನೇ ತಿಂಗಳಲ್ಲಿ ಮಗುವನ್ನು ಹೆರಲು ಅಮೆರಿಕಕ್ಕೆ ಬರುತ್ತಾರೆ ಮತ್ತು ಕಾನೂನು ಅವರನ್ನು ತಕ್ಷಣ ಅಮೆರಿಕದ ನಾಗರಿಕರನ್ನಾಗಿ ಮಾಡುತ್ತದೆ ಎಂದು ಸ್ಯಾವೇಜ್ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಮೆರಿಕಾದ ಪೌರತ್ವ ಕಾನೂನಿಗೆ ಟ್ರಂಪ್ ವಿರೋಧ

ಅಮೆರಿಕಾ ಅಧ್ಯಕ್ಷ ಟ್ರಂಪ್ ಸ್ಯಾವೇಜ್ ಅವರ ವಿಡಿಯೋವನ್ನು ಮತ್ತೆ ಹಂಚಿಕೊಂಡಿರುವ ಟ್ರಂಪ್ ಅಮೆರಿಕಾದ ಜನ್ಮಸಿದ್ಧ ಪೌರತ್ವ ಕಾನೂನಿನ ಬಗ್ಗೆ ಸುಪ್ರೀಂಕೋರ್ಟ್ ವಾದವನ್ನು ಟೀಕಿಸಿದ್ದಾರೆ. ಮೈಕಲ್ ಸ್ಯಾವೇಜ್ ಅವರು ಅಮೆರಿಕಾದಲ್ಲಿ ಯಾರಿಗೇ ಆಗಲಿ ಮಗು ಜನಿಸಿದ ಕೂಡಲೇ ಮಗುವಿಗೆ ಸಿಗುವ ಪೌರತ್ವದ ಹಕ್ಕಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದ ಬಗ್ಗೆ ನ್ಯಾಯಾಲಯಗಳ ಅಭಿಪ್ರಾಯಗಳಿಗೆ ಬಿಡುವ ಬದಲು ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಗೆ ಕರೆ ನೀಡಬೇಕು ಎಂದು ಆಗ್ರಹಿಸಿದರು.

ಇಲ್ಲಿ ಜನಿಸಿದ ಒಂದು ಮಗು ತಕ್ಷಣ ಈ ದೇಶದ ನಾಗರಿಕನಾಗುತ್ತಾನೆ. ನಂತರ ಅವರು ಅದರ ಇಡೀ ಕುಟುಂಬವನ್ನು ಚೀನಾ ಅಥವಾ ಭಾರತದಿಂದ ಇಲ್ಲಿಗೆ ಕರೆತರುತ್ತಾರೆ. ಅಥವಾ ಭೂಮಿಯ ಮೇಲಿನ ಯಾವುದೇ ನರಕದಿಂದ ಕರೆತರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತೀಯ ಮತ್ತು ಚೀನೀ ವಲಸಿಗರನ್ನು ನಮ್ಮ ಧ್ವಜದ ಮೇಲೆ ಕಾಲಿಟ್ಟಿರುವ ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು ಎಂದು ಇದರಲ್ಲಿ ವಿವರಿಸಲಾಗಿದೆ.

ಲ್ಯಾಪ್ ಟಾಪ್ ಹೊಂದಿರುವ ದರೋಡೆಕೋರರು

ಎಲ್ಲಾ ಮಾಫಿಯಾ ಕುಟುಂಬಗಳು ಮಾಡಿದ ಹಾನಿಗಿಂತ ಹೆಚ್ಚಾಗಿ ಈ ಲ್ಯಾಪ್ ಟಾಪ್ ಹೊಂದಿರುವ ದರೋಡೆಕೋರರು ಮಾಡಿದ್ದಾರೆ. ಅವರು ನಾವು ಕುರುಡರು ಎಂಬಂತೆ ನಮ್ಮನ್ನು ದರೋಡೆ ಮಾಡಿದ್ದಾರೆ. ನಮ್ಮನ್ನು ದ್ವಿತೀಯ ದರ್ಜೆಯ ನಾಗರಿಕರು ಎಂಬಂತೆ ನಡೆಸಿಕೊಂಡಿದ್ದಾರೆ ಹೀಗೆ ಭಾರತ ಹಾಗೂ ಚೀನಾದ ನಾಗರಿಕರ ಮೇಲೆ ನಿರಂತರ ವಾಗ್ದಾಳಿ ನಡೆಸಲಾಗಿದೆ.

ಕ್ಯಾಲಿಫೋರ್ನಿಯಾದ ಹೈಟೆಕ್ ಕಂಪನಿಗಳಲ್ಲಿ ಬಿಳಿ ಬಣ್ಣದ ಪುರುಷರು ಕೆಲಸ ಪಡೆಯುವ ಪ್ರಮಾಣ ಶೂನ್ಯ ಎಂಬುದು ತಿಳಿಯುವವರೆಗೂ ನಾನು ಭಾರತದ ಪ್ರಮುಖ ಬೆಂಬಲಿಗನಾಗಿದ್ದೆ. ಅಲ್ಲಿ ಕೆಲಸ ಗಿಟ್ಟಿಸಬೇಕಾದರೆ ನೀವು ಚೀನಾ ಅಥವಾ ಅಮೆರಿಕಾದವರಾಗಿರಬೇಕು ಏಕೆಂದರೆ ಅಲ್ಲಿನ ಎಲ್ಲಾ ಆಂತರಿಕ ಕಾರ್ಯವಿಧಾನವನ್ನು ಚೀನಿಯರು ಅಥವಾ ಭಾರತೀಯರು ನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಕುಸಿದು ಬಿದ್ದು ಖ್ಯಾತ ನಟಿ ದಿವ್ಯಾಂಕ ಸಾವು

ಆಧುನಿಕ ವಲಸೆ ವಿಚಾರದಲ್ಲಿ ಅಮೆರಿಕಾದ ಸಂವಿಧಾನವು ಹಳತಾಗಿದೆ. ಜನನ ಪ್ರವಾಸೋದ್ಯಮ ಮತ್ತು ಕಲ್ಯಾಣ ದುರುಪಯೋಗದ ಮೂಲಕ ಪ್ರಸ್ತುತ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಯಾವೇಜ್ ಆರೋಪಿಸಿದ್ದರು. ಅಮೆರಿಕಾದ ಸಂವಿಧಾನವನ್ನು ವಾಯುಯಾನ ಆರಂಭವಾಗುವ ಮೊದಲೇ ಬರೆಯಲಾಗಿತ್ತು. ಟಿವಿ, ಇಂಟರ್‌ನೆಟ್ ರೇಡಿಯೋ ಮುಂತಾದವುಗಳು ಬರುವ ಮೊದಲೇ ಬರೆಯಲಾಗಿತ್ತು. ಹೀಗಿರುವಾಗ ಈಗಿನ ಕಾಲಕ್ಕೆ ಅದು ಹೇಗೆ ಸರಿ ಇರುತ್ತದೆ ಈಗ ಜನರು ವಿಮಾನದಲ್ಲಿ 9ನೇ ತಿಂಗಳ ಗರ್ಭಿಣಿಯಾಗಿರುವಾಗ ಇಲ್ಲಿಗೆ ಬಂದು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಅಮೆರಿಕಾದ ಹೊರತಾಗಿ ಯಾವುದೇ ದೇಶಗಳು ಹುಟ್ಟಿದ ಕೂಡಲೇ ಪೌರತ್ವ ನೀಡುವುದಿಲ್ಲ ಎಂದು ಸಿಎನ್‌ಬಿಸಿಗೆ ಟ್ರಂಪ್ ಸುಳ್ಳು ಹೇಳಿಕೆ ನೀಡಿದ ಒಂದು ದಿನದ ಬಳಿಕ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ 36ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳಿಗೆ ಅವು ಜನಿಸಿದ ಕೂಡಲೇ ಆ ದೇಶದ ಪೌರತ್ವ ಸಿಗುತ್ತದೆ. ಅಮೆರಿಕಾವು ಸೇರಿದಂತೆ ನೆರೆಯ ಕೆನಡಾ ಮೆಕ್ಸಿಕೋ ದಕ್ಷಿಣ ಅಮೆರಿಕಾ ದೇಶಗಳಲ್ಲಿ ಮಕ್ಕಳು ಜನಿಸಿದ ಕೂಡಲೇ ಪೌರತ್ವ ಸಿಗುತ್ತದೆ.

ಇದನ್ನೂ ಓದಿ: ಬಾಲಿಯಲ್ಲಿ ಭಾರತೀಯ ಪ್ರವಾಸಿಗರ ನಾಚಿಕೆಗೇಡಿನ ಕೆಲಸ: ಹೊಟೇಲ್‌ನಲ್ಲಿ ವಸ್ತುಗಳ ಕದ್ದು ಸಿಕ್ಕಿಬಿದ್ದ ಭಾರತೀಯರು