ಚಿಕ್ಕಮಗಳೂರಿನಲ್ಲಿ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಆಟೋದಲ್ಲಿ ಸಾಗಿಸುತ್ತಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಸುಮಾರು 4 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಅಂಗಡಿ ಪಾಲಾಗುತ್ತಿದ್ದ ಅನ್ನ ಭಾಗ್ಯದ ಅಕ್ಕಿ ಜಪ್ತಿ:

ಚಿಕ್ಕಮಗಳೂರು: ಅಂಗಡಿ ಪಾಲಾಗುತ್ತಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಜನರು ಅನ್ನಭಾಗ್ಯದಲ್ಲಿ ಸಿಕ್ಕ ಅಕ್ಕಿಯನ್ನು ಮಾರಾಟ ಮಾಡಲು ಮುಂದಾಗಿದ್ದು, ಆಟೋ ಚಾಲಕರೊಬ್ಬರು ಕ ತೇಗೂರು ಗ್ರಾಮದ ಜನರಿಂದ ಅನ್ನಭಾಗ್ಯದ ಅಕ್ಕಿ ಸಂಗ್ರಹಿಸಿ ಮಾರಾಟಕ್ಕೆ ಮುಂದಾಗಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ 4 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಅಕ್ಕಿಯನ್ನು ಆಟೋದಲ್ಲಿ ಸಾಗಿಸಲಾಗುತ್ತಿತ್ತು. ಈ ಅಕ್ಕಿಗೆ ಯಾವುದೇ ಬಿಲ್ ಇಲ್ಲದ ಕಾರಣ ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜನರಿಂದ ಸಂಗ್ರಹಿಸಿದ ಅಕ್ಕಿಯನ್ನು ನಗರದ ಅಂಗಡಿಯೊಂದಕ್ಕೆ ಮಾರಾಟಕ್ಕೆ ಸಿದ್ಧತೆ ಮಾಡಲಾಗಿತ್ತು. ಅಕ್ಕಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಎನ್‌.ಎಂ.ಸಿ ವೃತ್ತದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಕ್ಕಳೇ ಪರೀಕ್ಷೆಯ ಜೀವನವಲ್ಲ: ಸಾವಿಗೆ ಶರಣಾಗದಿರಿ: ಚಿತ್ರದುರ್ಗದಲ್ಲಿ ಬಾಲಕ, ಮೈಸೂರಲ್ಲಿ ಬಾಲಕಿ ಸಾವು