ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಷೋ 'ಸರಿಗಮಪ ಲಿಟಲ್ ಚಾಂಪ್ಸ್' ಹೊಸ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ. ಆಡಿಷನ್‌ಗಳು ಇದೀಗ ಶುರುವಾಗಿದ್ದು, ಸ್ಥಳಕ್ಕೆ ಬರಲು ಸಾಧ್ಯವಾಗದ ಪ್ರತಿಭೆಗಳಿಗಾಗಿ ವಾಹಿನಿಯು ವಾಟ್ಸ್ಆ್ಯಪ್ ಹಾಗೂ ಆನ್‌ಲೈನ್ ಮೂಲಕ ಆಡಿಷನ್ ನೀಡುವ ವಿಶೇಷ ಅವಕಾಶವನ್ನು ಕಲ್ಪಿಸಿದೆ.
- Home
- News
- State
- Karnataka News Live: Zee ಸರಿಗಮಪ ಲಿಟಲ್ ಚಾಂಪ್ಸ್ - ವಾಟ್ಸ್ಆ್ಯಪ್, ಆನ್ಲೈನ್ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್ ಇಲ್ಲಿದೆ
Karnataka News Live: Zee ಸರಿಗಮಪ ಲಿಟಲ್ ಚಾಂಪ್ಸ್ - ವಾಟ್ಸ್ಆ್ಯಪ್, ಆನ್ಲೈನ್ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್ ಇಲ್ಲಿದೆ

ಬೆಂಗಳೂರು: ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂ*ಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.
ಆರೋಪಿ ಸೂರಜ್ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ಪ್ರಕಟಿಸಿದರು. ಹೀಗಾಗಿ ಸೂರಜ್ ರೇವಣ್ಣಗೆ ಮುಂದಿನ ಕಾನೂನು ಸಂಕಷ್ಟ ಎದುರಿಸುವುದು ಅನಿವಾರ್ಯವಾಗಿದೆ.
Karnataka News Live 18 February 2026 Zee ಸರಿಗಮಪ ಲಿಟಲ್ ಚಾಂಪ್ಸ್ - ವಾಟ್ಸ್ಆ್ಯಪ್, ಆನ್ಲೈನ್ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್ ಇಲ್ಲಿದೆ
Karnataka News Live 18 February 2026 ಶೀಘ್ರದಲ್ಲೇ ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಅನುಮತಿ, ಷರತ್ತು ಅನ್ವಯ!
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೆಟ್ರೋ ರೈಲುಗಳಲ್ಲಿ ಸೀಲ್ ಆಗಿರುವ ಮದ್ಯದ ಬಾಟಲಿಗಳನ್ನು ಅನುಮತಿಸುವ ಬಗ್ಗೆ ಪರಿಗಣಿಸುತ್ತಿದೆ, ಅಧಿಕಾರಿಗಳು ದೆಹಲಿ ಮೆಟ್ರೋ ಮಾದರಿಯನ್ನು ಉಲ್ಲೇಖಿಸಿ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.
Karnataka News Live 18 February 2026 ಫ್ರೀ ಸಿಕ್ಕ ಸಿನಿಮಾ ಡೌನ್‌ಲೋಡ್ ಮಾಡ್ತಿದ್ದಂತೆಯೇ ಬೆಂಗಳೂರಿಗನ ಬ್ಯಾಂಕ್ ಖಾತೆ ಖಾಲಿ! ಎಚ್ಚರ, ಎಚ್ಚರ
Karnataka News Live 18 February 2026 ಸಾರಿಗೆ ನೌಕರರ ಬೇಡಿಕೆಗೆ ಮಣಿದ ಸರ್ಕಾರ - 26 ತಿಂಗಳ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!
ರಾಜ್ಯದ ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ಪಾವತಿಸಲು ಆದೇಶಿಸಿದೆ. ಏಪ್ರಿಲ್ 2025 ರಿಂದ ವೇತನ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಿದ್ದು, ನೌಕರರು ನಡೆಸಲುದ್ದೇಶಿಸಿದ್ದ ಬೃಹತ್ ಪ್ರತಿಭಟನೆಗೆ ತಡೆ ಬಿದ್ದಿದೆ.
Karnataka News Live 18 February 2026 Jayam Movie - ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಸಿನಿಮಾ; ಹಾಡನ್ನೇ ಬದಲಾಯಿಸಿದ್ರು, ಆದ್ರೂ ಸಿನಿಮಾ ಬ್ಲಾಕ್‌ಬಸ್ಟರ್!
ರೈಲ್ವೆ ಇಲಾಖೆಯ ಆಕ್ಷೇಪದಿಂದಾಗಿ ಒಂದು ಸೂಪರ್‌ಹಿಟ್ ಸಿನಿಮಾದ ಹಾಡನ್ನೇ ಸಂಪೂರ್ಣವಾಗಿ ಬದಲಾಯಿಸಬೇಕಾಯ್ತು. ಸಿನಿಮಾ ಹಿಟ್ ಆದ್ಮೇಲೆ ರೈಲ್ವೆ ಇಲಾಖೆ ಚಿತ್ರತಂಡಕ್ಕೆ ಶಾಕ್ ಕೊಟ್ಟಿತ್ತು. ಏನಿದು ವಿವಾದ? ಈ ಫೋಟೋ ಸ್ಟೋರಿ ನೋಡಿ.
Karnataka News Live 18 February 2026 Bigg Boss ದುಡ್ಡು ನಿರ್ಮಲಾ ಸೀತಾರಾಮನ್‌ಗೆ! ಶಾಸಕ ಪ್ರದೀಪ್ ಮಾತಿಗೆ ಗಿಲ್ಲಿ ನಟ ಹೇಳಿದ್ದೇನು? ದುಡ್ಡು ಬಂತಾ?
Karnataka News Live 18 February 2026 ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು 'ಕಸದ ಕ್ರಾಂತಿ' - ರಸ್ತೆಗಿಳಿದ ಲಾರಿಗಳಿಗೆ ದಿಗ್ಬಂಧನ; ಮನೆಗಳಲ್ಲಿ ದುರ್ವಾಸನೆ!
ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳ ಬಳಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ನಗರವು 'ಗಾರ್ಬೇಜ್ ಸಿಟಿ'ಯಾಗುವ ಭೀತಿ ಎದುರಿಸುತ್ತಿದೆ. ಈ ಕಸದ ಬಿಕ್ಕಟ್ಟು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಡಿ.ಕೆ. ಶಿವಕುಮಾರ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
Karnataka News Live 18 February 2026 ಮೊಬೈಲ್ ದಾಸನಾದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತು; ಕಾಲೇಜು ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ ಪಿಯು ವಿದ್ಯಾರ್ಥಿ!
ಮೊಬೈಲ್ ಗೀಳು ಬಿಡುವಂತೆ ಪೋಷಕರು ಮತ್ತು ಶಿಕ್ಷಕರು ನೀಡಿದ ಬುದ್ಧಿಮಾತಿಗೆ ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾಲೇಜು ಕಟ್ಟಡದ ಮೇಲಿಂದ ಜಿಗಿದಿದ್ದಾನೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
Karnataka News Live 18 February 2026 ಧಾರಾವಾಹಿ ನಟಿಗೆ ಕಿರುಕುಳ ಕೊಟ್ಟ ಯ್ಯೂಟೂಬರ್‌ಗಳಿಗೆ ಕಂಟಕ; ಸಿಎಂಗೆ ದೂರು ಕೊಟ್ಟ ಬೆನ್ನಲ್ಲೇ ಕಠಿಣ ಕ್ರಮ!
ನಟಿ ರೇಖಾ ರತೀಶ್ ಅವರು ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ. ಈ ಸೈಬರ್ ದಾಳಿಯಿಂದ ತಮಗೂ ಮತ್ತು ತಮ್ಮ ಮಗನಿಗೂ ಆಗಿರುವ ಮಾನಸಿಕ ಹಿಂಸೆಯನ್ನು ವಿವರಿಸಿದ ಅವರು, ತಮ್ಮನ್ನು ಬದುಕಲು ಬಿಡುವಂತೆ ಮನವಿ ಮಾಡಿದ್ದಾರೆ.
Karnataka News Live 18 February 2026 ಡೈವೋರ್ಸ್ ಸುದ್ದಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ ಮಯೂರಿ ಕ್ಯಾತಾರಿ!
Karnataka News Live 18 February 2026 ಪ್ರವಾಸಿಗರಿಗೆ ಸಂತಸದ ಸುದ್ದಿ, ಕೊನೆಗೂ ಬಂಡೀಪುರ ಸಫಾರಿ ಪುನರಾರಂಭ ಆದರೆ ಷರತ್ತುಗಳು ಅನ್ವಯ
ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಸಫಾರಿಯನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ತಾಂತ್ರಿಕ ಸಮಿತಿಯ ವರದಿಯ ಆಧಾರದ ಮೇಲೆ, ಶೇ.50ರಷ್ಟು ಸಾಮರ್ಥ್ಯದೊಂದಿಗೆ, ಕಡಿಮೆ ಅವಧಿ ಮತ್ತು ವಾಹನಗಳ ಸಂಖ್ಯೆಯೊಂದಿಗೆ ಸಫಾರಿಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ.
Karnataka News Live 18 February 2026 ಬೆಂಗಳೂರಲ್ಲಿ ತೆರಿಗೆ ಕಟ್ಟದ 71 ಆಸ್ತಿಗಳ ಬಹಿರಂಗ ಹರಾಜು; ಚೀಪ್ ರೇಟಿಗೆ ಪ್ರಾಪರ್ಟಿ ಸೇಲ್ ನಿಲ್ಲಿಸಲು ಕೊನೇ ಚಾನ್ಸ್!
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ವಲಯವು, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 1.14 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 71 ಆಸ್ತಿಗಳನ್ನು ಫೆಬ್ರವರಿ 21 ರಂದು ಬಹಿರಂಗ ಹರಾಜು ಹಾಕಲು ನಿರ್ಧರಿಸಿದೆ. ಹಲವು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
Karnataka News Live 18 February 2026 ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣಗೆ ಮತ್ತೆ ಹಿನ್ನಡೆ - ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಕೈಬಿಡಲು ಕೋರ್ಟ್ ನಕಾರ
ಸೂರಜ್ ರೇವಣ್ಣ ಅವರ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಈ ಹಿಂದೆ ಎಸ್‌ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ ಮರುತನಿಖೆಗೆ ಆದೇಶಿಸಿದ್ದ ನ್ಯಾಯಾಲಯ.
Karnataka News Live 18 February 2026 ಕೋಲಾರ - ಪತ್ನಿ ಜೊತೆಗೆ ಮಾವನ ಅಕ್ರಮ ಸಂಬಂಧ, ಚಾಕುವಿನಿಂದ ಚುಚ್ಚಿ ಕೊಂದ ಅಳಿಯ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ, ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಅಳಿಯನೇ ಮಾವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೋಟೆಯಿಂದ ಬಂದಿದ್ದ ನಯಾಜ್ ಖಾನ್ ಎಂಬುವವರನ್ನು ಆರೋಪಿ ಶಾಹಿದ್ ಖಾನ್ ಕೊಲೆ ಮಾಡಿದ್ದಾನೆ.
Karnataka News Live 18 February 2026 Bar Timings- ತಿಂಗಳಿಗೆ 60 ಗಂಟೆ ಹೆಚ್ಚುವರಿ, ಇದು 5 ದಿನಕ್ಕೆ ಸಮ - ಕೇರಳ ಸರ್ಕಾರದ ವಿರುದ್ಧ ಗುಡುಗಿದ ರಾಜೀವ್ ಚಂದ್ರಶೇಖರ್
ಕೇರಳದಲ್ಲಿ ಬಾರ್‌ಗಳ ಕಾರ್ಯನಿರ್ವಹಣೆ ಸಮಯವನ್ನು ಹೆಚ್ಚಿಸಿರುವ ಸರ್ಕಾರದ ನಿರ್ಧಾರದ ಹಿಂದೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಇದು ಎಡ ಮತ್ತು ಬಲಪಂಥೀಯ ರಂಗಗಳ ಒಳಒಪ್ಪಂದ, ಚುನಾವಣಾ ಫಂಡ್ ಸಂಗ್ರಹವೇ ಇದರ ಮುಖ್ಯ ಉದ್ದೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
Karnataka News Live 18 February 2026 ಜಮಖಂಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಗಂಡ-ಹೆಂಡತಿ-ಮಗು ಸ್ಥಳದಲ್ಲೇ ಸಾವು, ಕುಟುಂಬ ನಿರ್ನಾಮ!
Karnataka News Live 18 February 2026 ಹೊಸಮನೆಗೆ ಸಾಲ ಜಾಸ್ತಿ ಮಾಡಬೇಡಿ ಎಂದ ಹೆಂಡ್ತಿಯನ್ನ ಕೊ*ಲೆಗೈದು ಮನೆಯೊಳೆಗೆ ಹೂತು ಹಾಕಿದ ಗಂಡ!
Karnataka News Live 18 February 2026 ಭಾರತೀಯ ನೌಕಾಪಡೆ ರಹಸ್ಯ ಸೋರಿಕೆ, ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ದೇಶದ್ರೂಹಿ ಉಡುಪಿಯಲ್ಲಿ ಅರೆಸ್ಟ್!
ಭಾರತೀಯ ನೌಕಾ ಸೇನೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಸಂಬಂಧಿಸಿದ ಈ ಜಾಲವು, ಹಡಗುಗಳ ರಹಸ್ಯ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆ ಮಾಡುತ್ತಿತ್ತು.
Karnataka News Live 18 February 2026 ಡಿಕೆಶಿ ಅವರನ್ನ ಸಿಎಂ ಮಾಡ್ತಿರೋ ಇಲ್ವೋ? ಸರ್ಕಾರಕ್ಕೆ ಸಂಕಷ್ಟ ಗ್ಯಾರಂಟಿ - ಹೈಕಮಾಂಡ್‌ಗೆ ಗಣಿಗ ರವಿಕುಮಾರ್ ಎಚ್ಚರಿಕೆ!
ಮಂಡ್ಯ ಶಾಸಕ ಗಣಿಗ ರವಿಕುಮಾರ್, ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವದ ಚರ್ಚೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
Karnataka News Live 18 February 2026 ಸಿದ್ದಾಪುರ ವೃದ್ಧೆ ಹತ್ಯೆ ಪ್ರಕರಣ - ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿ ನ್ಯಾಯಾಲಯದ ಐತಿಹಾಸಿಕ ತೀರ್ಪು
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಳ್ಳತನದ ಉದ್ದೇಶದಿಂದ ವೃದ್ಧೆ ಗೀತಾ ಹುಂಡೇಕರ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ, ಶಿರಸಿ ಜಿಲ್ಲಾ ನ್ಯಾಯಾಲಯವು ಅಪರಾಧಿ ಅಭಿಜಿತ್ ಮಡಿವಾಳನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.