02:29 PM (IST) Dec 18

Karnataka News Live 18 December 2025'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ

ಸಚಿವ ಭೈರತಿ ಸುರೇಶ್ ಅವರ 'ಕರಾವಳಿಯವರು ಬೆಂಕಿ ಹಚ್ಚುವವರು' ಎಂಬ ಹೇಳಿಕೆಯು ಸುವರ್ಣಸೌಧದ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

Read Full Story
02:07 PM (IST) Dec 18

Karnataka News Live 18 December 2025ಚಾಮರಾಜನಗರ - ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ

ಹನೂರು ತಾಲೂಕಿನ ಜಲ್ಲಿಪಾಳ್ಯ ಬಳಿ ಕೂಲಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಶಿವಮೂರ್ತಿ ಎಂಬುವವರ ಮೇಲೆ ಕಾಡಾನೆಗಳ ಗುಂಪು ದಾಳಿ ನಡೆಸಿದೆ. ಈ ಭೀಕರ ದಾಳಿಯಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
Read Full Story
01:51 PM (IST) Dec 18

Karnataka News Live 18 December 2025ಅಂದು ಸುದೀಪ್​ಗೆ ಆ್ಯಕ್ಸಿಡೆಂಟ್​! Bigg Boss ವೀಕೆಂಡ್​ನಲ್ಲಿ ನಡೆದದ್ದೇನು? ಕಿಚ್ಚನಿಂದ ಶಾಕಿಂಗ್​ ವಿಷ್ಯ ರಿವೀಲ್​

ಒಮ್ಮೆ ಬಿಗ್ ಬಾಸ್ ತೊರೆಯುವುದಾಗಿ ಹೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಕಿಚ್ಚ ಸುದೀಪ್, ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇತ್ತೀಚೆಗೆ, ತಮಗಾದ ಅಪಘಾತದಿಂದ ತೀವ್ರ ಕಾಲುನೋವಿದ್ದರೂ, ಅದನ್ನು ಲೆಕ್ಕಿಸದೆ 'ಸೂಪರ್ ಸಂಡೆ ವಿತ್ ಕಿಚ್ಚ' ಸಂಚಿಕೆಯನ್ನು ನಿಂತುಕೊಂಡೇ ನಿರೂಪಣೆ ಮಾಡಿದೆ ಎಂದಿದ್ದಾರೆ.

Read Full Story
01:48 PM (IST) Dec 18

Karnataka News Live 18 December 2025ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು, ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಧಿ ಜಾರಿಗೆ ತಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ 'ಭಾರತ ರತ್ನ' ನೀಡಲು ಶಿಫಾರಸು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಖರ್ಗೆಯವರನ್ನು ಅಂಬೇಡ್ಕರ್‌ಗೆ ಹೋಲಿಸಿದರು.

Read Full Story
01:34 PM (IST) Dec 18

Karnataka News Live 18 December 2025Bigg Boss ಮನೇಲಿ ಆ ವಿಷಯ ಹೇಳೋಕೆ ಧೈರ್ಯ ಇರೋ ಪ್ರಪಂಚದ ಮೊದಲ ಗಂಡ ಅಂದ್ರೆ ವಿ ರವಿಚಂದ್ರನ್!‌ ಡೌಟ್‌ ಬೇಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮನೆಯೊಳಗಡೆ ವಿ ರವಿಚಂದ್ರನ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾರ್‌ ಸಿನಿಮಾದಲ್ಲಿ ರಾಶಿಕಾ ಶೆಟ್ಟಿ ಅವರ ತಂದೆ ಪಾತ್ರದಲ್ಲಿ ರವಿಚಂದ್ರನ್‌ ನಟಿಸುತ್ತಿದ್ದಾರೆ. ಪ್ಯಾರ್‌ ಎಂದರೆ ಲವ್‌ ಎಂದರ್ಥ. ಈಗ ರವಿಚಂದ್ರನ್‌ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Read Full Story
01:30 PM (IST) Dec 18

Karnataka News Live 18 December 20252025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್ - ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!

ಖ್ಯಾತ ಪ್ರವಾಸೋದ್ಯಮ ಸಂಸ್ಥೆ 'ಕ್ಲಿಯರ್‌ಟ್ರಿಪ್' ವರದಿಯ ಪ್ರಕಾರ, ಬೆಂಗಳೂರು ಈಗ ಬಿಸಿನೆಸ್ ಮತ್ತು ವಿರಾಮ ಪ್ರವಾಸೋದ್ಯಮದಲ್ಲಿ ಭಾರತದ ಅಗ್ರಗಣ್ಯ ನಗರವಾಗಿ ಹೊರಹೊಮ್ಮಿದೆ. ಅತಿ ದೀರ್ಘಾವಧಿಯ ಹೋಟೆಲ್ ವಾಸ್ತವ್ಯ, ಏಕಾಂಗಿ ಪ್ರಯಾಣಿಕರ ನೆಚ್ಚಿನ ತಾಣವಾಗಿದೆ.

Read Full Story
01:25 PM (IST) Dec 18

Karnataka News Live 18 December 2025Karna Serial - ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ - ಮಗ ಕರ್ಣನನ್ನು ಉಳಿಸಿದ ಮಾಲತಿ

ರಮೇಶ್ ರೂಪಿಸಿದ್ದ ಮರು ಮಾಂಗಲ್ಯಧಾರಣೆ ಸಂಚಿನಿಂದ ಕರ್ಣ ಮತ್ತು ನಿತ್ಯಾ ಸಂಕಷ್ಟಕ್ಕೆ ಸಿಲುಕಿದ್ದರು. ಈ ಅಪಾಯದಿಂದ ಮಗನನ್ನು ಪಾರು ಮಾಡಿದ್ದಾಳೆ. ಅಷ್ಟರಲ್ಲಿ ನಿಧಿ, ನಿತ್ಯಾಳ ಕೊರಳಿಗೆ ತಾಳಿ ಹಾಕುವ ಮೂಲಕ ಕರ್ಣನನ್ನು ದೊಡ್ಡ ಗಂಡಾಂತರದಿಂದ ಪಾರುಮಾಡುತ್ತಾಳೆ.

Read Full Story
01:17 PM (IST) Dec 18

Karnataka News Live 18 December 2025ಶಿವಮೊಗ್ಗ - ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಎಸ್ಐ ಮಾಂಗಲ್ಯ ಸರ ಕಳುವು - ಕಣ್ಣೀರಿಟ್ಟ ಅಧಿಕಾರಿ, ಕದ್ದವರು ಯಾರು?

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಬಂದೋಬಸ್ತ್ ವೇಳೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
Read Full Story
01:08 PM (IST) Dec 18

Karnataka News Live 18 December 2025Bigg Boss ಗೆಲ್ಲೋರು ಗಿಲ್ಲಿ ನಟ ಅಲ್ಲವೇ ಅಲ್ಲ - ಬಾಂಬ್​ ಸ್ಫೋಟದ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಹೇಳಿದ್ದೇನು?

ಬಿಗ್​ಬಾಸ್​ 12 ಮುಕ್ತಾಯದ ಹಂತದಲ್ಲಿದ್ದು, ಗಿಲ್ಲಿ ನಟ ಗೆಲ್ಲುತ್ತಾರೆಂಬ ಚರ್ಚೆ ಜೋರಾಗಿದೆ. ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಸ್ಫೋಟಕ ಭವಿಷ್ಯ ನುಡಿದಿದ್ದು, ಈ ಬಾರಿ ಮಹಿಳೆಯೊಬ್ಬರು ವಿನ್ನರ್ ಆಗಲಿದ್ದಾರೆ ಎಂದಿದ್ದಾರೆ. ಈ ಭವಿಷ್ಯವಾಣಿ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
Read Full Story
01:07 PM (IST) Dec 18

Karnataka News Live 18 December 2025ವೈದ್ಯಾಧಿಕಾರಿಯಿಂದ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!

ವಿಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ವೈದ್ಯಾಧಿಕಾರಿಯ ನಿರಂತರ ಕಿರುಕುಳದಿಂದ ಮನನೊಂದು ಕರ್ತವ್ಯನಿರತ ನರ್ಸ್ ಸುನಿತಾ ಅವರು 20ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
01:02 PM (IST) Dec 18

Karnataka News Live 18 December 2025ಜ್ಯೋತಿಷಿ ಹೇಳಿದ್ದಕ್ಕೆ ಜೀವನದ ದಾರಿ ಬದಲಿಸಿದ Mahanati Show ಗಗನಾ; ರಕ್ಷಿತಾ‌ ಪ್ರೇಮ್, ವಿಜಯ್ ಶಾಕ್

Mahanati Show Gagana Bhari News: ಸಿನಿಮಾ ಕ್ಷೇತ್ರಕ್ಕೂ ಜ್ಯೋತಿಷ್ಯಕ್ಕೂ ನಂಟಿದೆ. ಜ್ಯೋತಿಷಿ ಹೇಳಿದರು ಎಂದು ಸಿನಿಮಾ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಉದಾಹರಣೆ ಇದೆ, ಸಿನಿಮಾದಿಂದ ದೂರ ಇದ್ದ ಉದಾಹರಣೆಯಿದೆ. ಈಗ ಐಟಿ ಕಂಪೆನಿ ಉದ್ಯೋಗ ಬಿಟ್ಟ ಉದಾಹರಣೆ ಕೂಡ ಇದೆ.

Read Full Story
12:51 PM (IST) Dec 18

Karnataka News Live 18 December 2025ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರೊಲ್ಲ, ಇದು ಕೇವಲ ವದಂತಿ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಳ್ಳಿಹಾಕಿದ್ದಾರೆ. ಮೊಟ್ಟೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story
12:33 PM (IST) Dec 18

Karnataka News Live 18 December 2025ನಿರ್ಮಾಪಕ ಹರ್ಷವರ್ಧನ್ 8 ವರ್ಷದ ರಹಸ್ಯ ಬಯಲು! ಕಿಡ್ನಾಪರ್ ಆಗೋದಕ್ಕೂ ಮುನ್ನ ಕಳ್ಳನಾಗಿದ್ದ!

'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಿರ್ಮಾಪಕ ಹರ್ಷವರ್ಧನ್‌ನನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. 2017ರ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಈತ, ತನ್ನ ಪತ್ನಿ, ನಟಿಯೊಬ್ಬರನ್ನು ಅಪಹರಿಸಿದ ಆರೋಪವನ್ನೂ ಎದುರಿಸುತ್ತಿದ್ದನು.

Read Full Story
12:31 PM (IST) Dec 18

Karnataka News Live 18 December 2025ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್' ಮುಗಿದ ಬಳಿಕ ಬರಲಿರೋ ಸೀರಿಯಲ್ ಯಾವುದು? ಉತ್ತರ ಇಲ್ಲಿದೆ..

ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ಬಂದಿದೆ. ಯಾರು ವಿನ್ನರ್, ಯಾರು ರನ್ನರ್ ಅಪ್‌, ಯಾರಿಗೆ ಮೂರನೆಯ ಸ್ಥಾನ ಎಂಬುದನ್ನಷ್ಟೇ ತಿಳಿಯುವ ಕುತೂಹಲ ಹಲವು ಸೀರಿಯಲ್‌ ಪ್ರಿಯರಿಗೆ (Serials) ಇದೆ. ಕಾರಣ, ಅವರಿಗೆ ಬಿಗ್‌ ಬಾಸ್‌ಗಿಂತ ಸೀರಿಯಲ್ ಕಥೆಗಳೇ ಇಷ್ಟ. ಅಂಥವರಿಗೆ ಈ ಸ್ಟೋರಿ..

Read Full Story
12:30 PM (IST) Dec 18

Karnataka News Live 18 December 2025ಎಲ್ಲರನ್ನು ನಗಿಸೋ ಗಿಲ್ಲಿ ನಟನ ಮನಸ್ಸಿನಲ್ಲೂ ಹೇಳಲಾಗದಷ್ಟು ನೋವಿದೆ! ದುರಂತ ಪ್ರೇಮಕಥೆ ಯಾರಿಗೂ ಗೊತ್ತಿಲ್ಲ

Bigg Boss Kannada Season 12: ಖ್ಯಾತ ನಟ ವಿ ರವಿಚಂದ್ರನ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಆಗಮಿಸಿದ್ದಾರೆ. ರಾಶಿಕಾ ಶೆಟ್ಟಿ, ವಿ ರವಿಚಂದ್ರನ್‌ ನಟನೆಯ ಪ್ಯಾರ್‌ ಸಿನಿಮಾ ಪ್ರಚಾರಕ್ಕೆಂದು ಅವರು ದೊಡ್ಮನೆಗೆ ಬಂದಿದ್ದಾರೆ. ಆ ವೇಳೆ ಗಿಲ್ಲಿ ನಟ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

Read Full Story
12:09 PM (IST) Dec 18

Karnataka News Live 18 December 2025ಗಿಲ್ಲಿ ಅಂಟೆ ಗಿಲ್ಲಿ - ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವಿಶಿಷ್ಟ ಶೈಲಿಯಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಅವರ ಆಟದ ವೈಖರಿಯನ್ನು ಮೆಚ್ಚಿ ತೆಲುಗು ಭಾಷಿಕರು 'ಗಿಲ್ಲಿ ಅಂಟೆ ಗಿಲ್ಲಿ' ಎಂಬ ಹಾಡನ್ನು ರಚಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
12:08 PM (IST) Dec 18

Karnataka News Live 18 December 2025ರೈತರ ಮಕ್ಕಳನ್ನು ಮದುವೆ ಆಗುವ ಹೆಣ್ಮಕ್ಕಳಿಗೆ 10 ಲಕ್ಷ ಕೊಡುವ ಯೋಜನೆ ಜಾರಿ ಮಾಡಿ - ಪುಟ್ಟಣ್ಣ

ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು, ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ₹10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಳ್ಳಿಗಳಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗದಿರುವ ಸಮಸ್ಯೆ ಬಗೆಹರಿಸಲು ಈ ಯೋಜನೆ ಸಹಕಾರಿ.

Read Full Story
11:59 AM (IST) Dec 18

Karnataka News Live 18 December 2025Karna Serial - ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!

Karna Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಳ್ಳುವುದೊಂದು, ಆಗುವುದೊಂದು ಎನ್ನೋ ಥರ ಆಗಿದೆ. ಕರ್ಣ-ನಿತ್ಯಾ ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ತೇಜಸ್‌ ಆಗಮನವಾಗಿದೆ, ಈಗ ಕಥೆ ಇನ್ನೊಂದು ತಿರುವು ಪಡೆದುಕೊಳ್ಳಲಿದೆ.

Read Full Story
11:44 AM (IST) Dec 18

Karnataka News Live 18 December 2025ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ - ಆರ್ ಅಶೋಕ್ ತೀವ್ರ ವಾಗ್ದಾಳಿ

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖಜಾನೆ ಲೂಟಿ ಮಾಡುತ್ತಿದೆ ಎಂದು ಸುವರ್ಣಸೌಧದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ದಿವಾಳಿಯಾಗಿದ್ದು, ತೆರಿಗೆ ಏರಿಕೆಗೂ ಸರ್ಕಾರ ಮುಂದಾಗಿದೆ ಎಂದರು. 

Read Full Story
10:58 AM (IST) Dec 18

Karnataka News Live 18 December 2025'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ

ವಿಧಾನಸಭೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರ ಏರಿಳಿತದ ಕುರಿತು ನಡೆದ ಚರ್ಚೆಯಲ್ಲಿ, ದರ ನಿಯಂತ್ರಣದ ಸವಾಲಿನ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾರ್ಮಿಕವಾಗಿ ಉತ್ತರಿಸಿದರು. ಮೊಟ್ಟೆ ದರವನ್ನು ಸ್ಥಿರವಾಗಿರಿಸಲು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

Read Full Story