09:30 AM (IST) Oct 15

Karnataka News Live 15 October 2026 BDA ಬಿಗ್ ಮಾಸ್ಟರ್ ಪ್ಲಾನ್‌ - ಒತ್ತುವರಿ ಜಾಗದ ಮಾಹಿತಿ ನೀಡಿದವರಿಗೆ ₹4 ಲಕ್ಷದವರೆಗೆ ನಗದು ಬಹುಮಾನ!

ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ಹೊಂದಿರುವ ಆಸ್ತಿಗಳ ಕುರಿತು ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಬಂಪರ್ ನಗದು ಬಹುಮಾನ ಘೋಷಿಸಿದೆ. ಬಿಡಿಎ ಅಧಿಕೃತ ಆದೇಶ ಹೊರಡಿಸಿದೆ.

Read Full Story
09:09 AM (IST) Oct 15

Karnataka News Live 15 October 2026 ಮಂಗಳೂರಿನಲ್ಲಿ ಶುಭಾ ಪೂಂಜಾ ಸಾಕು ಬೆಕ್ಕು ಕಾಣೆ, ಹುಡುಕಿಕೊಟ್ಟವರಿಗೆ ನಗದು ಬಹುಮಾನ ಘೋಷಿಷಿದ ನಟಿ!

ಮಂಗಳೂರಿನ ಲೋಹಿತ್ ನಗರದಲ್ಲಿ ನಟಿ ಶುಭಾ ಪೂಂಜಾ ಅವರ ಪ್ರೀತಿಯ ಸಾಕು ಬೆಕ್ಕು 'ಜೆರ್ರಿ' ಕಾಣೆಯಾಗಿದೆ. ಬೆಕ್ಕನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಅವರು ಭಾವುಕ ವಿಡಿಯೋ ಮೂಲಕ ಘೋಷಿಸಿದ್ದಾರೆ.
Read Full Story
09:03 AM (IST) Oct 15

Karnataka News Live 15 October 2026 Shivamogga - ಸಾಗರ ಜಂಬಗಾರು ರೈಲ್ವೆ ನಿಲ್ದಾಣದ ಮರುನಾಮಕರಣಕ್ಕೆ ಒತ್ತಾಯ; ದಶಕದ ಬೇಡಿಕೆ

ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

Read Full Story
08:49 AM (IST) Oct 15

Karnataka News Live 15 October 2026 ಎರಡು ಮಾರ್ಗದಲ್ಲಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಓಡಿಸುವಂತೆ ಮನವಿ ಸಲ್ಲಿಕೆ

ಪ್ರಸ್ತಾವಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ಕರ್ನಾಟಕದ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಓಡಿಸಲು ನೈಋತ್ಯ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುರಿತು ರೈಲ್ವೆ ಮಂಡಳಿಯೊಂದಿಗೆ ಚರ್ಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Read Full Story
08:20 AM (IST) Oct 15

Karnataka News Live 15 October 2026 ಕರ್ನಾಟಕ ಒಂದರಲ್ಲೇ 30 ಲಕ್ಷ ಅಕ್ರಮ ಬಾಂಗ್ಗನ್ನರು! ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ SIR ವಿರೋಧ, ಮಾಜಿ ಡಿಸಿಎಂ ಆಕ್ರೋಶ

ಕರ್ನಾಟಕದಲ್ಲಿ 25-30 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಕಾಂಗ್ರೆಸ್ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸುತ್ತಿರುವ ಕಾಂಗ್ರೆಸ್, ನಕಲಿ ದಾಖಲೆಗಳ ಮೂಲಕ ಅಕ್ರಮ ವಲಸಿಗರಿಗೆ ಬೆಂಬಲ?

Read Full Story
08:18 AM (IST) Oct 15

Karnataka News Live 15 October 2026 ಕುಷ್ಟಗಿ BEO ಕಚೇರಿಯಲ್ಲಿ ₹70 ಲಕ್ಷದ ನಿಗೂಢ ಹಗರಣ - ಸರ್ಕಾರಿ ಹಣದ ದುರುಪಯೋಗದ ಆರೋಪ

ಕುಷ್ಟಗಿಯ ಬಿಇಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ₹70 ಲಕ್ಷಕ್ಕೂ ಅಧಿಕ ಸರ್ಕಾರಿ ಹಣ ದುರುಪಯೋಗದ ಆರೋಪದ ತನಿಖೆ ಚುರುಕುಗೊಂಡಿದೆ. ವಿಶೇಷ ಪೊಲೀಸ್ ತಂಡವು ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ಕಡತಗಳು ಹಾಗೂ ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದಿದೆ.

Read Full Story
08:06 AM (IST) Oct 15

Karnataka News Live 15 October 2026 BDAನಲ್ಲಿ ಹೊಸ ಹುದ್ದೆ ಸೃಷ್ಟಿಗೆ ಬ್ರೇಕ್; ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ತಿರಸ್ಕಾರ

ಬಿಡಿಎನಲ್ಲಿ ವಲಯ ಆಯುಕ್ತರು ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ. ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಮುಗಿದರೂ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಉಳಿಸಿಕೊಳ್ಳಲು ಈ ಹುದ್ದೆ ಸೃಷ್ಟಿಗೆ ಯತ್ನಿಸಲಾಗಿತ್ತು.

Read Full Story
07:57 AM (IST) Oct 15

Karnataka News Live 15 October 2026 Rain - ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮುಂದಿನ 3 ದಿನ ಮಳೆ, ತಾಪಮಾನ ಕುಸಿತ!

ದುರ್ಬಲ ಮುಂಗಾರಿನ ಬಳಿಕ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹಿಂಗಾರು ಮಳೆ ಪ್ರವೇಶವಾಗಿದೆ. ಅಕ್ಟೋಬರ್ 18ರವರೆಗೆ ಗುಡುಗು ಸಹಿತ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Read Full Story
07:49 AM (IST) Oct 15

Karnataka News Live 15 October 2026 ರಾಜ್ಯದ ಮಹಿಳೆಯರಿಗೆ ಸಿಎಂ ದಸರಾ ಗಿಫ್ಟ್! 33ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ, ಇನ್ನೆರಡು ದಿನದಲ್ಲಿ ಖಾತೆಗೆ!

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ 2482 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಇನ್ನೆರಡು ದಿನಗಳಲ್ಲಿ 1.24 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಹಣ ಜಮೆಯಾಗಲಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಈ ಹಣವು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲಿದೆ.
Read Full Story
07:32 AM (IST) Oct 15

Karnataka News Live 15 October 2026 ಉಡುಪಿಯಲ್ಲಿ BSNL ನೆಟ್‌ವರ್ಕ್ ಸಮಸ್ಯೆಗೆ ಸಿಗುತ್ತಾ ಮುಕ್ತಿ? ಸಂಸದರು ಹೇಳಿದ್ದೇನು?

ಉಡುಪಿ ಜಿಲ್ಲೆಯಾದ್ಯಂತ ಇರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯನ್ನು ಒಂದು ತಿಂಗಳೊಳಗೆ ಬಗೆಹರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 3ಜಿ ಯಿಂದ 4ಜಿಗೆ ಉನ್ನತೀಕರಿಸಲು ಹಾಗೂ ಹೊಸ ಟವರ್‌ಗಳ ನಿರ್ಮಾಣವನ್ನು ತ್ವರಿತವಾಗಿ ಆರಂಭಿಸಲು ಅವರು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
Read Full Story
07:24 AM (IST) Oct 15

Karnataka News Live 15 October 2026 Huvina Hadagali - ಅಬಕಾರಿ ಇಲಾಖೆಗೆ ತಟ್ಟಿದ ಬರದ ಬಿಸಿ - ಮದ್ಯ ಮಾರಾಟದಲ್ಲಿ ಕುಸಿತ

ಮುಂಗಾರು ಮಳೆ ಇಲ್ಲದೆ ಆವರಿಸಿರುವ ಬರದ ಛಾಯೆ ಕೃಷಿ ಮಾತ್ರವಲ್ಲದೆ ಅಬಕಾರಿ ಇಲಾಖೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ವಲಸೆ ಮತ್ತು ಹಣದ ಕೊರತೆಯಿಂದ ಮದ್ಯ ಮಾರಾಟ ಕುಸಿದಿದೆ.

Read Full Story