Rain: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮುಂದಿನ 3 ದಿನ ಮಳೆ, ತಾಪಮಾನ ಕುಸಿತ!
ದುರ್ಬಲ ಮುಂಗಾರಿನ ಬಳಿಕ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹಿಂಗಾರು ಮಳೆ ಪ್ರವೇಶವಾಗಿದೆ. ಅಕ್ಟೋಬರ್ 18ರವರೆಗೆ ಗುಡುಗು ಸಹಿತ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹಿಂಗಾರು ಮಳೆಯ ಪ್ರವೇಶ
ತೀವ್ರ ಕೊರತೆಯ ದುರ್ಬಲ ಮುಂಗಾರಿನ ಬಳಿಕ ನಗರಕ್ಕೆ ಹಿಂಗಾರು ಮಳೆಯ ಪ್ರವೇಶವಾಗಿದ್ದು, ಅಕ್ಟೋಬರ್ 18ರವರೆಗೆ ಮಳೆಯ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಮುಂದಿನ 3 ದಿನಗಳ ಕಾಲ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗುಸಹಿತ ಆಗಾಗ ಜೋರು ಮಳೆಯಾಗಲಿದೆ.
ಬುಧವಾರ ಸಂಜೆ ದಕ್ಷಿಣ ಒಳನಾಡಿನಲ್ಲಿ ಮಳೆ
ಮಳೆಯಿಂದ ನಗರದ ತಾಪಮಾನ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ. ಬುಧವಾರ ನಗರ ಮತ್ತು ಗ್ರಾಮಾಂತರ ಭಾಗದ ಕೆಲವೆಡೆ ಹಗುರ ಮಳೆಯಾಗಿದೆ. ಈ ಬಾರಿ ಹಿಂಗಾರು ಮಳೆ ಕೂಡ ಶೇ.30ರಷ್ಟು ಕೊರತೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆಯನ್ನು ನೀ
ವಾಯು ಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಹಿಂಗಾರು ಮಳೆಗೆ ಪೂರಕ ವಾತಾವರಣವನ್ನು ಒದಗಿಸಿದೆ. ಅಕ್ಟೋಬರ್ ತಿಂಗಳಲ್ಲಿ 15ರಿಂದ 22ರವರೆಗೂ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶದ ವಿವಿಧೆಡೆ ಹಿಂಗಾರು ಆರಂಭವಾಗಿದ್ದು, ಗುರುವಾರದಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಸಂಭವ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಹಲವೆಡೆ ವರ್ಷಧಾರೆ
ಅ.15ರಿಂದ 18ರ ವರೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ಆಂಧ್ರಪ್ರದೇಶ ಹಲವೆಡೆ ವರ್ಷಧಾರೆಯ ನಿರೀಕ್ಷೆಯಿದೆ. ಅಂತೆಯೇ, ಅ.17 ಮತ್ತು 18ರಂದು ಕರ್ನಾಟಕದಲ್ಲಿ, ಅ.15 ಮತ್ತು 16ರಂದು ರಾಯಲಸೀಮೆಯಲ್ಲಿ ಮಳೆಯಾಗಲಿದೆ. ಇದರೊಂದಿಗೆ ನೈಋತ್ಯ ಮುಂಗಾರು ಭಾರತದಿಂದ ನಿರ್ಗಮಿಸಲಿದೆ.

