08:28 PM (IST) May 14

ವರ್ಕ್‌ ಫ್ರಮ್ ಹೋಮ್ ಕೆಲಸ ಕೊಡೋದಾಗಿ ವಂಚಿಸುತ್ತಿದ್ದ ಯುಪಿ ಗ್ಯಾಂಗ್ ಅರೆಸ್ಟ್; 12 ಜನ, 400 ಸಿಮ್, 160 ಎಟಿಎಂ ಕಾರ್ಡ್ ಜಪ್ತಿ!

ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಆನ್‌ಲೈನ್ ಗ್ಯಾಂಗ್‌ನ 12 ಮಂದಿ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಗ್ಯಾಂಗ್, 400ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿ ವಂಚನೆ ಎಸಗುತ್ತಿತ್ತು.

ಪೂರ್ತಿ ಓದಿ
05:20 PM (IST) May 14

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಮತ್ತೆ ಗ್ರಹಣ; 2026ಕ್ಕೆ ಉದ್ಘಾಟನೆಯಾದರೂ ಅದೃಷ್ಟವೇ ಸರಿ!

ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಯೋಜನೆಯು ಮತ್ತೆ ವಿಳಂಬವಾಗಿದ್ದು, 2026ಕ್ಕೆ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಕಾಮಗಾರಿಯಲ್ಲಿನ ಸವಾಲುಗಳು ಮತ್ತು ಭೂಗತ ಭಾಗದ ನಿರ್ಮಾಣದಲ್ಲಿನ ತೊಂದರೆಗಳು ಈ ವಿಳಂಬಕ್ಕೆ ಕಾರಣವಾಗಿವೆ.

ಪೂರ್ತಿ ಓದಿ
04:33 PM (IST) May 14

ಬುದ್ಧಿಮಾತಿಗೆ ಒಂದೆರಡು ಏಟು ಹೊಡೆದ ಅಪ್ಪನನ್ನೇ ಕೊಲೆ ಮಾಡಿದ ಮಗ; ವಿದ್ಯುತ್ ಶಾಕ್ ಕಥೆ ಕಟ್ಟಿ ಸಿಕ್ಕಬಿದ್ದ!

ತುಮಕೂರಿನ ಕುಣಿಗಲ್‌ನಲ್ಲಿ ಐಸ್‌ಕ್ರೀಮ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವಾಗ ಅಪ್ಪ-ಮಗನ ನಡುವೆ ಜಗಳ ನಡೆದು, ಮಗನೇ ಅಪ್ಪನನ್ನು ಟವೆಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯನ್ನು ಮುಚ್ಚಿಡಲು ಕರೆಂಟ್ ಶಾಕ್ ಹೊಡೆದಿದೆ ಎಂದು ಬಿಂಬಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ
02:46 PM (IST) May 14

ಸರ್ಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿ ವೇತನ ಹೆಚ್ಚಳ: ಹಳೆ ವೈದ್ಯರ ಕಿವಿಗೆ ಹೂವು ಇಟ್ಟ ಸರ್ಕಾರ!

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ NHM ಯೋಜನೆಯಡಿ ಕೆಲಸ ಮಾಡುವ ವೈದ್ಯರು ಮತ್ತು ನರ್ಸ್‌ಗಳ ವೇತನ ಪರಿಷ್ಕರಣೆಯಾಗಿದೆ. ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಈ ಹೆಚ್ಚಳ ಅನ್ವಯವಾಗುತ್ತದೆ. ಹಳೆಯ ಸಿಬ್ಬಂದಿ ಹೊಸ ವೇತನ ಪಡೆಯಲು ರಾಜೀನಾಮೆ ನೀಡಿ ಪುನಃ ಅರ್ಜಿ ಸಲ್ಲಿಸಬೇಕು.

ಪೂರ್ತಿ ಓದಿ
12:11 PM (IST) May 14

ಭಾರತ-ಪಾಕ್ ಯುದ್ಧ ಸಂಘರ್ಷ ಬೆನ್ನಲ್ಲೇ ಸರಕು ಹಡಗಿನಲ್ಲಿ ಭಾರತ ಪ್ರವೇಶಿಸಿದ ಪಾಕಿಸ್ತಾನ ಪ್ರಜೆ!

ಕಾರವಾರ ಬಂದರಿಗೆ ಆಗಮಿಸಿದ್ದ ಸರಕು ಹಡಗಿನಲ್ಲಿ ಪಾಕಿಸ್ತಾನ ಪ್ರಜೆಯೊಬ್ಬ ಇದ್ದ. ಭಾರತದ ನೆಲಕ್ಕೆ ಇಳಿಯಲು ಅನುಮತಿಸದೆ, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಹಡಗು ಇರಾಕ್‌ನಿಂದ ಬಿಟುಮಿನ್ ತುಂಬಿಕೊಂಡು ಬಂದಿತ್ತು.

ಪೂರ್ತಿ ಓದಿ
11:45 AM (IST) May 14

ಸುಪ್ರೀಂಕೋರ್ಟ್ ಸಿಜೆಐ ಆಗಿ ನ್ಯಾ.ಗವಾಯಿ ಅಧಿಕಾರ ಸ್ವೀಕಾರ: ಇವರು ದೇಶದ ಮೊದಲ ಬೌದ್ಧ, ದಲಿತ ಸಿಜೆಐ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ನಿವೃತ್ತಿ ಹೊಂದಿದ್ದು, ಬಿ.ಆರ್ ಗವಾಯಿ 52ನೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನ್ಯಾ. ಖನ್ನಾ ಅವರ ಅವಧಿಯಲ್ಲಿ 370ನೇ ವಿಧಿ ರದ್ದು, ಚುನಾವಣಾ ಬಾಂಡ್, ಇವಿಎಂ ವಿವಿಪ್ಯಾಟ್ ಬಗ್ಗೆ ತೀರ್ಪುಗಳು ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆದಿವೆ.

ಪೂರ್ತಿ ಓದಿ
11:43 AM (IST) May 14

ಸರ್ಕಾರದ ಹಣ ದುರುಪಯೋಗ ಆರೋಪ; ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅಮಾನತು

ಸಿಂಧನೂರು ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ದುರುಪಯೋಗದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಅಕಾಲಿಕ ಮಳೆಯಿಂದಾಗಿ ಸಿಂಧನೂರು ಮತ್ತು ಮಸ್ಕಿ ತಾಲೂಕುಗಳಲ್ಲಿ ರೈತರ ಒಣಗಲು ಹಾಕಿದ್ದ ಭತ್ತ ಹಾಳಾಗಿದ್ದು, ರೈತರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಪೂರ್ತಿ ಓದಿ
11:36 AM (IST) May 14

ದಿನಕ್ಕೆ 16 ಗಂಟೆ ಕೆಲಸ; 2.5 ವರ್ಷಗಳಲ್ಲಿ ಒಂದು ರಜೆ ಇಲ್ಲ; ಕಾರ್ಪೋರೇಟ್‌ ಜೀತದಾಳಾದೆ: ಬೆಂಗಳೂರು ಉದ್ಯೋಗಿ

Bengaluru Employee Says He Is corporate Slave: ಕಾರ್ಪೋರೇಟ್‌ ರಂಗದಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಬೆಂಗಳೂರಿನ ಉದ್ಯೋಗಿಯೋರ್ವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ
11:08 AM (IST) May 14

ರಾಷ್ಟ್ರಧ್ವಜ ಅವಮಾನ ಪ್ರಕರಣ: ಕನ್ನಡಾಭಿಮಾನಿ ಸಂಘದ ಅಧ್ಯಕ್ಷರ ವಿರುದ್ಧ ದೋಷಾರೋಪ ಪಟ್ಟಿಗೆ ಹೈಕೋರ್ಟ್‌ ತಡೆ

ಸಿಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜದಿಂದ ಒರೆಸಿಕೊಂಡ ಪ್ರಕರಣದಲ್ಲಿ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ. ಕೃಷ್ಣಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಭಾರತೀಯ ಸೇನೆಯ ಪಾಕಿಸ್ತಾನದ ಮೇಲಿನ ದಾಳಿಯ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಕೃಷ್ಣಪ್ಪ ಪರ ವಕೀಲರು ವಾದಿಸಿದ್ದಾರೆ.

ಪೂರ್ತಿ ಓದಿ
10:44 AM (IST) May 14

ಮಂಡ್ಯ ರೈಲಿಗೆ ಸಿಲುಕಿ ಅಂತಿಮ ವರ್ಷದ ಬಿಎ ಪದವಿ ವಿದ್ಯಾರ್ಥಿ ಸಾವು!

ಮಂಡ್ಯದಲ್ಲಿ ಸರಣಿ ದುರಂತಗಳು ಸಂಭವಿಸಿದ್ದು, ರೈಲಿಗೆ ಸಿಲುಕಿ ವಿದ್ಯಾರ್ಥಿ, ಕಾರು ಡಿಕ್ಕಿಯಾಗಿ ಮಹಿಳೆ ಮತ್ತು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಪೂರ್ತಿ ಓದಿ
10:27 AM (IST) May 14

ಅಪ್ಪನ ಎದುರಲ್ಲೇ ಮಗಳ ಕಿಡ್ನಾಪ್ ಮಾಡಿದ ಯುವಕ, ಕಾರು ತಡೆಯಲು ಹೋದ ತಂದೆ, ಮುಂದೇನಾಯ್ತು ನೋಡಿ!

ಅರೇಹಳ್ಳಿಯಲ್ಲಿ ಕಾರಿನಲ್ಲಿ ಬಂದ ನಾಲ್ವರು ತಂದೆಯ ಎದುರಲ್ಲೇ ಮಗಳನ್ನು ಅಪಹರಿಸಿದ್ದಾರೆ. ಕಾರನ್ನು ತಡೆಯಲು ಯತ್ನಿಸಿದ ತಂದೆಯನ್ನು ರಸ್ತೆಯಲ್ಲಿ ಎಳೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚನ್ನರಾಯಪಟ್ಟಣದ ಯುವಕನೊಬ್ಬ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕರೆದೊಯ್ಯಲು ಈ ಕೃತ್ಯ ಎಸಗಿದ್ದಾನೆ.

ಪೂರ್ತಿ ಓದಿ
10:00 AM (IST) May 14

'ಕಾಂಗ್ರೆಸ್ ಸೂ* ಸರ್ಕಾರ.. ಚನ್ನರಾಯಪಟ್ಟಣ ತಹಸೀಲ್ದಾರದ್ದು ಎನ್ನಲಾದ ಆಡಿಯೋ ವೈರಲ್!

ಚನ್ನರಾಯಪಟ್ಟಣ ತಹಸಿಲ್ದಾರ್ ನವೀನ್ ಅವರು ಸರ್ಕಾರವನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದ್ದು, ಪ್ರತಿಭಟನೆಗೆ ಕಾರಣವಾಗಿದೆ. ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನವೀನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.

ಪೂರ್ತಿ ಓದಿ