ಚನ್ನರಾಯಪಟ್ಟಣ ತಹಸಿಲ್ದಾರ್ ನವೀನ್ ಆಪ್ತರೊಂದಿಗೆ ಮಾತನಾಡಿದ ಎನ್ನಲಾದ ಆಡಿಯೊ ಕ್ಲಿಪ್ ವೈರಲ್ ಆಗಿದ್ದು, ಕಾಂಗ್ರೆಸ್ ಸರ್ಕಾರವನ್ನು ಅಶ್ಲೀಲ ಪದ ಬಳಸಿ ನಿಂದಿಸಿದ ಆರೋಪಕ್ಕೆ ಗುರಿಯಾಗಿದೆ. ಆಡಿಯೊದಲ್ಲಿ, 'ಈ ಫ್ರೀ ಕೊಡುಗೆಗಳಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ, ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಹೆಚ್ಚಿನ ಅನುದಾನ ಬರುತ್ತಿತ್ತು, ಈ ಸೂ* ಸರ್ಕಾರ ಬಂದಿದ್ದರಿಂದ ಸಮಸ್ಯೆಯಾಗಿದೆ' ಎಂದು ನವೀನ್ ಮಾತನಾಡಿರುವುದಾಗಿ ಆರೋಪಿಸಲಾಗಿದೆ.

ಹಾಸನ (ಮೇ.14): ಚನ್ನರಾಯಪಟ್ಟಣ ತಹಸಿಲ್ದಾರ್ ನವೀನ್ ಆಪ್ತರೊಂದಿಗೆ ಮಾತನಾಡಿದ ಎನ್ನಲಾದ ಆಡಿಯೊ ಕ್ಲಿಪ್ ವೈರಲ್ ಆಗಿದ್ದು, ಕಾಂಗ್ರೆಸ್ ಸರ್ಕಾರವನ್ನು ಅಶ್ಲೀಲ ಪದ ಬಳಸಿ ನಿಂದಿಸಿದ ಆರೋಪಕ್ಕೆ ಗುರಿಯಾಗಿದೆ. ಆಡಿಯೊದಲ್ಲಿ, 'ಈ ಫ್ರೀ ಕೊಡುಗೆಗಳಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ, ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಹೆಚ್ಚಿನ ಅನುದಾನ ಬರುತ್ತಿತ್ತು, ಈ ಸೂ* ಸರ್ಕಾರ ಬಂದಿದ್ದರಿಂದ ಸಮಸ್ಯೆಯಾಗಿದೆ' ಎಂದು ನವೀನ್ ಮಾತನಾಡಿರುವುದಾಗಿ ಆರೋಪಿಸಲಾಗಿದೆ.

ಕಳೆದ 8 ತಿಂಗಳಿಂದ ಚನ್ನರಾಯಪಟ್ಟಣ ತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ವಿವಿಧ ಸಂಘಟನೆಗಳು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ, ಇಂದು ತಹಸಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಸಂಘಟನೆಗಳು ಸಜ್ಜಾಗಿವೆ.

ಪ್ರತಿಭಟನಾಕಾರರು ಚನ್ನರಾಯಪಟ್ಟಣ ತಾಲೂಕು ಕಚೇರಿಯನ್ನು 'ಭ್ರಷ್ಟಾಚಾರದ ಕೂಪ' ಎಂದು ಬಣ್ಣಿಸಿದ್ದು, ಸರ್ಕಾರವನ್ನು ಅವಹೇಳನಕಾರಿಯಾಗಿ ನಿಂದಿಸಿದ ಅಧಿಕಾರಿಯ ವಿರುದ್ಧ ಕೂಡಲೇ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

ಇದನ್ನೂ ಓದಿ: ದೇಶ ಉಳಿಯಲು ಮೋದಿ ಸರ್ಕಾರ ಬೇಕು, ಪ್ರಧಾನಿ ಜೊತೆ ನಾವು ನಿಲ್ಲುತ್ತೇವೆ:ಎಚ್‌ಡಿ ದೇವೇಗೌಡ

'ತಹಸಿಲ್ದಾರ್ ನವೀನ್ ಬೇಕಾಬಿಟ್ಟಿಯಾಗಿ ಮಾತನಾಡಿ ಸರ್ಕಾರದ ಗೌರವಕ್ಕೆ ಧಕ್ಕೆ ತಂದಿದ್ದಾರೆ' ಎಂದು ಹೋರಾಟಗಾರರು ಆರೋಪಿಸಿದ್ದಾರೆ. ನವೀನ್ ವಿರುದ್ಧ ಕ್ರಮಕ್ಕಾಗಿ ಅಹೋರಾತ್ರಿ ಧರಣಿ ಮುಂದುವರೆದಿದ್ದು, ಸರ್ಕಾರದ ಮುಂದಿನ ಕ್ರಮದ ಕುರಿತು ಕುತೂಹಲ ಮೂಡಿದೆ. ಇತ್ತೀಚೆಗಷ್ಟೇ ಪೊಲೀಸ್ ಪೇದೆಯೋರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯವಾಗಿ ನಿಂದಿಸಿದ ಪ್ರಕರಣ ನಡೆದಿತ್ತು. ಇದೀಗ ತಹಸೀಲ್ದಾರರೇ ಸರ್ಕಾರದ ವಿರುದ್ಧ ನಿಂದಿಸಿರುವ ಆರೋಪ ಕೇಳಿಬಂದಿದೆ.