11:40 PM (IST) Oct 11

Karnataka News Live 11th October:BBK 12 - ಇನ್ನು ಒಂದೇ ವಾರಕ್ಕೆ ಫಿನಾಲೆ; ಮುಕ್ಕಾಲು ಭಾಗ ಸ್ಪರ್ಧಿಗಳು ಎಲಿಮಿನೇಟ್‌ ಆಗ್ತಾರೆ - ಕಿಚ್ಚ ಸುದೀಪ್

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಪ್ರತಿ ವಾರ ಎಲಿಮಿನೇಶನ್‌ ನಡೆಯುತ್ತದೆ. ಈಗ ಮೊದಲ ವಾರಕ್ಕೆ ಅಮಿತ್‌, ಕರಿಬಸಪ್ಪ ಅವರು ಹೊರಗಡೆ ಬಂದಿದ್ದಾರೆ. ಕಳೆದ ವಾರದಿಂದಲೂ ಕಿಚ್ಚ ಸುದೀಪ್‌ ಅವರು ಮಾಸ್‌ ಎಲಿಮಿನೇಶನ್‌ ನಡೆಯಲಿದೆ ಎಂದು ಹೇಳುತ್ತಲೇ ಇದ್ದಾರೆ. ಈ ಬಾರಿಯೂ ಮತ್ತೆ ಅದನ್ನೇ ರಿಪೀಟ್‌ ಮಾಡಿದ್ದಾರೆ.

Read Full Story
11:35 PM (IST) Oct 11

Karnataka News Live 11th October:ಕಾಕತಾಳೀಯವೇ..? 'ಕಾಂತಾರ ಚಾಪ್ಟರ್ 1' ನೋಡಿ ಅಟ್ಲಿ ಹೇಳಿದ್ದು & ರಾಜಮೌಳಿ ಹೇಳಿದ್ದೂ ಅದನ್ನೇ!

ಅಟ್ಲಿ ಅವರ ಈ ಮಾತುಗಳು ದೇಶಾದ್ಯಂತ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೆಚ್ಚುತ್ತಿರುವ ಗೌರವವನ್ನು ತೋರಿಸುತ್ತವೆ. ಅಟ್ಲಿ ಅವರ ಈ ಪ್ರಶಂಸೆಯು ಚಿತ್ರದ ಕಲಾತ್ಮಕ ಮತ್ತು ವಾಣಿಜ್ಯ ಯಶಸ್ಸಿನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story
11:15 PM (IST) Oct 11

Karnataka News Live 11th October:ನವೆಂಬರ್ 28ರ ನಂತರ ರಾಜ್ಯದ ಆಡಳಿತದಲ್ಲಿ ದೊಡ್ಡ ಬದಲಾವಣೆ - ಪ್ರಕಾಶ್‌ ಅಮ್ಮಣ್ಣಾಯ ಭವಿಷ್ಯ ಹೇಳಾಯ್ತು!

November Kranti In Karnataka: ನವೆಂಬರ್‌ನಲ್ಲಿ ಕ್ರಾಂತಿ ಆಗತ್ತೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗತ್ತೆ ಎಂದು ಬಿಜೆಪಿ ವಾದ ಮಾಡುತ್ತಲಿದೆ. ಈಗ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಕೂಡ ರಾಜ್ಯಾಡಳಿತದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ. 

Read Full Story
10:29 PM (IST) Oct 11

Karnataka News Live 11th October:ವಿವಿಐಪಿ ಪಾಸ್‌ ಇದ್ದಿದ್ದರೆ ಹಾಸನಾಂಬೆ ಸುಗಮ ದರ್ಶನ ಆಗುತ್ತಿರಲಿಲ್ಲ - ಸಚಿವ ಕೃಷ್ಣ ಬೈರೇಗೌಡ

ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಿರುವುದರಿಂದ ಜನರಿಗೆ ಅನುಕೂಲ ಆಗಿದೆ. ಧರ್ಮದರ್ಶನದ ಸಾಲಿನಲ್ಲಿ ನಿಂತಿರುವ ಸಾಮಾನ್ಯ ಜನರಿಗೂ ಕೂಡ ಈ ಬಾರಿ ಮೂರ್ನಾಲ್ಕು ಗಂಟೆಗಳಲ್ಲಿ ದರ್ಶನ ಆಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Read Full Story
10:06 PM (IST) Oct 11

Karnataka News Live 11th October:Bigg Boss Kannada 12 ಶೋ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ - ಕಿಚ್ಚ ಸುದೀಪ್‌ ಹೇಳಿದ್ದೇ ಬೇರೆ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಒಂದು ದಿನಗಳ ಕಾಲ ಬಂದ್‌ ಆಗಿತ್ತು. ಹೌದು, ಈ ಶೋಗೆ ಬೀಗ ಹಾಕಲಾಗಿತ್ತು. ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿತ್ತು. ಈಗ ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಿದ್ದಾರೆ.

Read Full Story
09:55 PM (IST) Oct 11

Karnataka News Live 11th October:ಪ್ರಧಾನಿ ಮೋದಿ ಜೊತೆ ರಾಮ್ ಚರಣ್, ಉಪಾಸನಾ ದಂಪತಿ - ಬಿಲ್ಲುಗಾರಿಕೆಗೆ ಇವರೇ ಸರಿ ಎಂದ ಫ್ಯಾನ್ಸ್!

ಆರ್ಚರಿ ಪ್ರೀಮಿಯರ್ ಲೀಗ್ ಯಶಸ್ಸಿನ ಹಿನ್ನೆಲೆಯಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ರಾಮ್ ಚರಣ್ ಈ ಲೀಗ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

Read Full Story
09:42 PM (IST) Oct 11

Karnataka News Live 11th October:ಸಚಿವರ ಪ್ರತ್ಯೇಕ ಧರ್ಮದ ಕುರಿತ ಹೇಳಿಕೆಯಿಂದ ಗೊಂದಲ - ಮಾಜಿ ಸಚಿವ ಬಿ.ಸಿ. ಪಾಟೀಲ

ಸಚಿವ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿಕೆ ನೀಡುತ್ತಿರುವುದು ಸತ್ಯಾಂಶವಾದರೂ ಕೂಡಾ ಇಲ್ಲಿನ ಜನತೆ ಗೊಂದಲಕ್ಕೀಡಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read Full Story
09:30 PM (IST) Oct 11

Karnataka News Live 11th October:ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ - ಸಚಿವ ಎಚ್.ಕೆ. ಪಾಟೀಲ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 13ರಂದು ಎಲ್ಲ ಸಚಿವರಿಗೂ ಊಟಕ್ಕೆ ಬನ್ನಿ ಅಂತ ಕರೆದಿದ್ದು, ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

Read Full Story
09:29 PM (IST) Oct 11

Karnataka News Live 11th October:ಪತಿಯ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ಆಚರಿಸಿದ Amruthadhaare Serial, ರಜಪೂತ ವಂಶಸ್ಥೆ ಛಾಯಾ ಸಿಂಗ್

Amruthadhaare Kannada Serial Chaya Singh: ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್‌ ಅವರು ರಿಯಲ್‌ ಪತಿ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ವ್ರತ ಆಚರಿಸಿದ್ದಾರೆ. ವಿಡಿಯೋ ಕಾಲ್‌ ಮೂಲಕ ಆಚರಿಸಿರೋದು ವಿಶೇಷವಾಗಿತ್ತು.

Read Full Story
08:58 PM (IST) Oct 11

Karnataka News Live 11th October:ರಾಜಮೌಳಿ ಕಣ್ಣೀರು ಹಾಕಿದ ಏಕೈಕ ಸಂದರ್ಭ... ಕೀರವಾಣಿ ಮಾಡಿದ ಕೆಲಸಕ್ಕೆ ಅಳು ನಿಲ್ಲಿಸದ ಜಕ್ಕಣ್ಣ!

ಸ್ಟಾರ್ ನಿರ್ದೇಶಕ ರಾಜಮೌಳಿ ಯಾವುದೇ ಪರಿಸ್ಥಿತಿಯಲ್ಲೂ ತುಂಬಾ ಧೈರ್ಯವಾಗಿರುತ್ತಾರೆ. ನೂರಾರು ಕೋಟಿ ಸಂಪಾದಿಸಿದರೂ ಸರಳವಾಗಿ, ಗೌರವಯುತವಾಗಿ ಕಾಣುತ್ತಾರೆ. ಆದರೆ ರಾಜಮೌಳಿ ಕಣ್ಣೀರು ಹಾಕಿದ ಆ ಅಪರೂಪದ ಸಂದರ್ಭ ಯಾವುದು ಗೊತ್ತಾ? ಅದಕ್ಕೆ ಕಾರಣ ಯಾರು?

Read Full Story
08:39 PM (IST) Oct 11

Karnataka News Live 11th October:ಅಲ್ಲು ಅರ್ಜುನ್, ಮಹೇಶ್‌ಗಾಗಿ ಅಲ್ಲ.. ಆ ನಟಿಗಾಗಿ ರಾಜಮೌಳಿ ಪದೇ ಪದೇ ನೋಡೋ ಹಾಡುಗಳು ಯಾವುವು?

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಒಬ್ಬ ನಟಿಗಾಗಿ ಪದೇ ಪದೇ ಹಾಡುಗಳನ್ನು ನೋಡುತ್ತಾರಂತೆ. ಆ ನಟಿ ಯಾರು? ಆ ಹಾಡುಗಳು ಯಾವುವು? ಅಸಲಿಗೆ ರಾಜಮೌಳಿ ಏನು ಹೇಳಿದರು? ಈ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
08:06 PM (IST) Oct 11

Karnataka News Live 11th October:ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡಬೇಕಾಗುತ್ತೆ? ನವೆಂಬರ್‌ ಕ್ರಾಂತಿ ಬಗ್ಗೆ ಶ್ರೀರಾಮುಲು ಹೇಳಿದ್ದೇನು?

ಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ.. ಜನವರಿಯಲ್ಲಿ ಸಂಕ್ರಾಂತಿ ಬರುತ್ತೇನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Read Full Story
07:47 PM (IST) Oct 11

Karnataka News Live 11th October:ಐತಿಹಾಸಿಕ ಮದಗ ಮಾಸೂರ ಕೆರೆ ಅಭಿವೃದ್ಧಿಗೆ ಸರ್ಕಾರ ಸಿದ್ಧ - ಸಚಿವ ಎಚ್.ಕೆ. ಪಾಟೀಲ್‌

ಪ್ರತಿಯೊಬ್ಬರ ಜೀವನಾಡಿಯಾದ ಗಂಗಾ ಮಾತೆಗೆ ಪೂಜಿಸಿ ನಾಡಿನ ಸಮೃದ್ಧಿಗಾಗಿ ಸ್ಮರಣೆ ಮಾಡಿ ಬಾಗಿನ ಅರ್ಪಣೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

Read Full Story
07:37 PM (IST) Oct 11

Karnataka News Live 11th October:2005ರ ಪೂರ್ವ ಅರಣ್ಯ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧ - ಸಚಿವ ಈಶ್ವರ್ ಖಂಡ್ರೆ

ಅರಣ್ಯ ಭೂಮಿಯಲ್ಲಿನ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಮೂರು ಎಕರೆಗಿಂತ ಹೆಚ್ಚಿನ ಇತ್ತೀಚಿನ ಒತ್ತುವರಿಗಳಿಗೆ ರಕ್ಷಣೆ ನೀಡಲಾಗದು ಎಂದು ಸಚಿವ ಈಶ್ವರ್ ಖಂಡ್ರೆ ಖಡಕ್ ಸಂದೇಶ ನೀಡಿದ್ದಾರೆ.

Read Full Story
07:34 PM (IST) Oct 11

Karnataka News Live 11th October:ನವೆಂಬರ್ ತನಕ ಕಾದು ನೋಡುವ ತಂತ್ರ, ಬಳಿಕ ಗೂಗ್ಲಿ ಹಾಕ್ತಾರಾ ಡಿಕೆ ಶಿವಕುಮಾರ್?

ನವೆಂಬರ್ ತನಕ ಕಾದು ನೋಡುವ ತಂತ್ರ, ಬಳಿಕ ಗೂಗ್ಲಿ ಹಾಕ್ತಾರಾ ಡಿಕೆ ಶಿವಕುಮಾರ್? ನವೆಂಬರ್ ತಿಂಗಳಲ್ಲೇ ಸಂಪುಟ ಪುನರಾಚನೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಧಿಕಾರ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಡಿಕೆ ಶಿವಕುಮಾರ್ ಪ್ಲಾನ್ ಏನು?

Read Full Story
07:31 PM (IST) Oct 11

Karnataka News Live 11th October:ಅಸಂಘಟಿತ ಕಾರ್ಮಿಕ ಕುಟುಂಬಕ್ಕೆ 10 ಲಕ್ಷ ರು.ಗಳ ಸವಲತ್ತು - ಸಚಿವ ಸಂತೋಷ್ ಲಾಡ್

ಡೀಸೆಲ್ ಮೇಲೆ 1 ರು. ಸೆಸ್ ವಿಧಿಸಿ, ಅದನ್ನು ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಬಳಸುವ ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮಾತನಾಡಿದ್ದೇವೆ, ವಿಪಕ್ಷಗಳು ಕೂಡ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

Read Full Story
07:20 PM (IST) Oct 11

Karnataka News Live 11th October:ಮದುವೆಯಾದ್ಮೇಲೆ ಉತ್ತರ ಭಾರತದಂತೆ ಕರ್ವಾ ಚೌತ್‌ ಆಚರಿಸಿದ Actress Vaishnavi Gowda; ಫೋಟೋಗಳಿವು

ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಮೊದಲ ಬಾರಿಗೆ ಕರ್ವಾ ಚೌತ್‌ ಹಬ್ಬವನ್ನು ಆಚರಿಸಿದ್ದಾರೆ. ಅತ್ತೆಯಿಂದ ಸರ್ಗಿ ಪಡೆದು ಅವರು ಈ ವ್ರತ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story
07:20 PM (IST) Oct 11

Karnataka News Live 11th October:ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ಪರಿಹಾರ ದರಕ್ಕೆ ಆದೇಶ - ಸಚಿವ ತಿಮ್ಮಾಪೂರ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪರಿಹಾರ ದರ ಆದೇಶ ಜಾರಿಗೊಳಿಸಿ ನಮ್ಮ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.

Read Full Story
07:11 PM (IST) Oct 11

Karnataka News Live 11th October:ಸ್ಟಾರ್‌ ನಟರಿಗೆ ಡಬಲ್‌ ಸ್ಟಾಂಡರ್ಡ್‌ ಯಾಕೆ? ಈ ವ್ಯವಸ್ಥೆ ನಟಿಯರಿಗೆ ಯಾಕಿಲ್ಲ - ದೀಪಿಕಾ ಪಡುಕೋಣೆ

ಸ್ಟಾರ್‌ ನಟರು, ಹೀರೋಗಳ ಬಗ್ಗೆ ನಟಿಯರು ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್‌ ಸ್ಟಾಂಡರ್ಡ್‌ ಯಾಕೆ? ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ನೇರ ಪ್ರಶ್ನೆ.

Read Full Story
07:07 PM (IST) Oct 11

Karnataka News Live 11th October:Bengaluru - ಮಕ್ಕಳು ಆಟವಾಡುವ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಅಪ್ಪ-ಅಮ್ಮನ ಆಟವಾಡಿದ ಜೋಡಿ

ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿಯೂ ತಮ್ಮ ವರ್ತನೆ ಮುಂದುವರಿಸಿದ ಜೋಡಿಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story