- Home
- Entertainment
- TV Talk
- Bigg Boss Kannada 12 ಶೋ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ: ಕಿಚ್ಚ ಸುದೀಪ್ ಹೇಳಿದ ಸತ್ಯ ಕಥೆ!
Bigg Boss Kannada 12 ಶೋ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ: ಕಿಚ್ಚ ಸುದೀಪ್ ಹೇಳಿದ ಸತ್ಯ ಕಥೆ!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಒಂದು ದಿನಗಳ ಕಾಲ ಬಂದ್ ಆಗಿತ್ತು. ಹೌದು, ಈ ಶೋಗೆ ಬೀಗ ಹಾಕಲಾಗಿತ್ತು. ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿತ್ತು. ಈಗ ಈ ಬಗ್ಗೆ ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿಲ್ಲ
“ಬಿಗ್ ಬಾಸ್ ಶೋ ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಬಿಗ್ ಬಾಸ್ ಕನ್ನಡ ಶೋಗೂ, ಆಗಿರುವ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ. ಬಿಗ್ ಬಾಸ್ ಶೋ ನಡೆಯುವ ಜಾಗದವರಿಗೆ ಸಂಬಂಧಪಟ್ಟಿದ್ದು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಖಾಲಿ ಜಾಗಕ್ಕೆ ಬೆಲೆ ಇರೋದಿಲ್ಲ
“ಯಾವಾಗಲೂ ಖಾಲಿ ಜಾಗಕ್ಕೆ ಬೆಲೆ ಇರೋದಿಲ್ಲ, ಅಲ್ಲಿ ಏನಾದರೂ ಇದ್ದಾಗ ಮಾತ್ರ ಸೌಂಡ್ ಆಗೋದು. ಈ ಸಮಯದಲ್ಲಿ ನಮ್ಮ ಕರೆಗೆ ಓಗುಟ್ಟ ಡಿಕೆ ಶಿವಕುಮಾರ್ ಹಾಗೂ ನಲಪಾಡ್‌ಗೂ ಅವರಿಗೆ ಧನ್ಯವಾದಗಳು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಅನುಮತಿ ಪಡೆದಿರಲಿಲ್ಲ
ಬಿಗ್ ಬಾಸ್ ಕನ್ನಡ 12 ಶೋನವರು ಶೋ ಆರಂಭ ಆಗುವ ಮುನ್ನ ಪರಿಸರ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ, ಅಷ್ಟೇ ಅಲ್ಲದೆ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿಲ್ಲ ಎಂದು ಆರೋಪ ಮಾಡಲಾಗಿತ್ತು.
ಒಂದೂವರೆ ದಿನಕ್ಕೆ ಮತ್ತೆ ಬಿಗ್ ಬಾಸ್ ಶೋ ಶು
ಬಿಗ ಬಾಸ್ ಶೋಗೆ ಬೀಗ ಹಾಕಿದಬಳಿಕ ಎಲ್ಲ ಸ್ಪರ್ಧಿಗಳನ್ನು ಆರಂಭದಲ್ಲಿ ಒಂದು ಥಿಯೇಟರ್‌ನಲ್ಲಿ ಇಡಲಾಗಿತ್ತು, ಆ ಬಳಿಕ ಅವರನ್ನು ರೆಸಾರ್ಟ್‌ನಲ್ಲಿ ಇಡಲಾಗಿತ್ತು. ಒಂದೂವರೆ ದಿನಕ್ಕೆ ಮತ್ತೆ ಬಿಗ್ ಬಾಸ್ ಶೋ ಶುರುವಾಗಿದೆ.
ಯಾಕೆ ಆರೋಪ ಮಾಡಿಲ್ಲ?
ಬಿಗ್ ಬಾಸ್ ಶೋ ಅಷ್ಟೇನೂ ನಿಯಮ ಉಲ್ಲಂಘನೆ ಮಾಡಿಲ್ಲ, ಬೆಂಗಳೂರಿನಲ್ಲಿ ಎಷ್ಟು ಕಡೆ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲಾಗಿದೆ, ಅದರ ಬಗ್ಗೆ ಯಾಕೆ ಯಾರೂ ಕೇಳಿಲ್ಲ ಎಂದು ಅನೇಕರು ಆರೋಪ ಹೊರಿಸಿದ್ದರು. ಈಗ ಮತ್ತೆ ಬಿಗ್ ಬಾಸ್ ಶುರುವಾಗಿದೆ.